ಚಂಪಕರಾಮನ್ರ ಹೋರಾಟ
ಸೆಪ್ಟೆಂಬರ್ ಹದಿನೈದು ನಾವೆಲ್ಲ ನೆನಪಿನಲ್ಲಿಟ್ಟುಕೊಳ್ಳಬೇಕಾದ ಪುಣ್ಯದಿನ. ಏಕೆಂದರೆ 1891ರ ಅದೇ ದಿನದಂದು ಭಾರತದ ಹೊರಗೆ ಸ್ವಾತಂತ್ರ್ಯ ಚಳವಳಿಯನ್ನು ಸಂಘಟಿಸಿದ್ದ ರಾಷ್ಟ್ರಭಕ್ತ ಚಂಪಕರಾಮನ್ ಪಿಳ್ಳೈ ಅವರ ಜನನವಾಯಿತು. ವಂದೇ ಮಾತರಂ ಘೋಷಣೆಯನ್ನು ಮೊದಲ ಬಾರಿಗೆ ಘರ್ಜಿಸಿದ ಧೀರ ಪಿಳ್ಳೈ. ಬಾಲಗಂಗಾಧರ ತಿಲಕರಿಂದ ಸ್ಫೂರ್ತಿಗೊಂಡು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡ ಅವರು, ಮೊದಲ ವಿಶ್ವ ಸಮರದ ಸಂದರ್ಭದಲ್ಲಿ ಜ್ಯೂರಿಚ್ನಲ್ಲಿ "ಭಾರತ ಪರ ಸಮಿತಿ" ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಬ್ರಿಟಿಷರು ಚಂಪಕರಾಮನ್ ಅವರನ್ನು ಅಪ್ಘಾನಿಸ್ಥಾನದಿಂದ ಹೊರಹಾಕಿದ ನಂತರ ಬರ್ಲಿನ್ನಲ್ಲಿ ಸ್ಥಾಪಿತವಾಗಿದ್ದ ಭಾರತೀಯ ಸ್ವಾತಂತ್ರ್ಯ ಸಮಿತಿಗೆ ಅದನ್ನು ವಿಲೀನಗೊಳಿಸಿದರು. ಅದಲ್ಲಿದ್ದವರು ಸಾಮಾನ್ಯರೇನಲ್ಲ. ಸರೋಜಿನಿ ನಾಯ್ಡು ಅವರ ಸಹೋದರ ವೀರೇಂದ್ರನಾಥ ಚಟ್ಟೋಪಾಧ್ಯಾಯ, ಸ್ವಾಮಿ ವಿವೇಕಾನಂದರ ಸಹೋದರ ಭೂಪೇಂದ್ರ ದತ್ತ, ಚಂದ್ರಕಾಂತ್ ಚಕ್ರವರ್ತಿ, ಬೀರೇಂದ್ರ ಸರ್ಕಾರ್ ಮುಂತಾದವರು. ನಂತರ ಇದರ ಶಾಖೆಗಳು ಯೂರೋಪ್ ಮತ್ತು ಅಮೆರಿಕದ ಕೆಲವು ಭಾಗಗಳಲ್ಲಿ ಸ್ಥಾಪಿತವಾದವು. ಬ್ರಿಟಿಷರ ಕಟ್ಟಾ ವ್ಯೆರಿಯಾಗಿದ್ದ ಹಿಟ್ಲರನಿಗೆ ನೆರವಾಗುತ್ತಿದ್ದ ಚಂಪಕರಾಮನ್ ಕಾಬೂಲಿನಲ್ಲಿ ಪರ್ಯಾಯ ಭಾರತ ಸರ್ಕಾರವನ್ನು ರಚಿಸಿ, ವಿದೇಶಾಂಗ ಸಚಿವನೆಂದು ಸ್ವಯಂ ಘೋಷಿಸಿಕೊಂಡರು. ಜರ್ಮನರು ಭಾರತೀಯ ಸ್ವಾತಂತ್ರ್ಯ ಚಳವಳಿಗಾರರನ್ನು ತಮ್ಮ ಸ್ವಾರ್ಥಕ್ಕಾಗಿ ಬೆಂಬಲಿಸುತ್ತಿದ್ದರೇ ಹೊರತು ಸಮಾನ ಸ್ಥಾನಮಾನವನ್ನು ನೀಡಿರಲಿಲ್ಲ. ಅದನ್ನು ವಿರೋಧಿಸಿ ತಮ್ಮನ್ನೂ ಪ್ರಧಾನ ಪಾಲುದಾರರು ಎಂದು ಪರಿಗಣಿಸಬೇಕೆಂದು ಅವರು ಹೋರಾಡಿದರು. ಸುಭಾಷ್ ಚಂದ್ರ ಭೋಸರನ್ನು ವಿಯನ್ನಾದಲ್ಲಿ ಭೇಟಿಯಾಗಿ ತಮ್ಮ ಹೋರಾಟದ ವಿವರಗಳ ಬಗ್ಗೆ ಚರ್ಚಿಸಿದರು. "ಭಾರತೀಯರು ತಮ್ಮನ್ನು ತಾವು ಆಳಲು ಅಸಮರ್ಥರು" ಎಂದು ಹಿಟ್ಲರ್ ಘೋಷಿಸಿದಾಗ ಅದನ್ನು ಪ್ರಭಲವಾಗಿ ವಿರೋಧಿಸಿ, ಹಿಟ್ಲರ್ನಂಥ ಬಲಿಷ್ಠ ಸರ್ವಾಧಿಕಾರಿಯಿಂದಲೇ ಲಿಖಿತರೂಪದ ಕ್ಷಮಾಪಣೆ ಪತ್ರ ಕೇಳಿದ ಧೀರ ಚಂಪಕರಾಮನ್. ಇದರಿಂದ ಕುಪಿತನಾದ ಹಿಟ್ಲರ್ ವಿಷಾಹಾರ ನೀಡಿ 1936 ಮೇ 26 ರಂದು ಚಂಪಕ್ರಾಮನ್ರನ್ನು ಕೊಲ್ಲಿಸಿದನೆಂದು ಭಾವಿಸಲಾಗಿದೆ. ಅವರ ಪತ್ನಿ ನಾಜಿಗಳ ದೌರ್ಜನ್ಯವನ್ನು ಸಹಿಸಿಕೊಂಡೂ ತನ್ನ ಪತಿಯ ಚಿತಾಭಸ್ಮ, ಡೈರಿಗಳು, ರಹಸ್ಯ ದಾಖಲೆಗಳನ್ನು ಜತನದಿಂದ ಕಾಪಾಡಿಕೊಂಡಿದ್ದರು. ಚಂಪಕರಾಮನ್ ಅವರ ಅಂತಿಮ ಇಚ್ಛೆಯಂತೆ ಅವರ ಚಿತಾಭಸ್ಮವನ್ನು ಭಾರತಕ್ಕೆ 1966ರಲ್ಲಿ ಭಾರತೀಯ ಯುದ್ಧ ನೌಕೆಯಲ್ಲಿ ಮುಂಬೈಗೆ ತರಲಾಯಿತು.
ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

