ಸಾಕೇ ಈ ಸನ್ಮಾನ?
ದಿನಾಂಕ 10.10.2013ರ ಮುಖಪುಟದಲ್ಲಿ ಪ್ರಕಟವಾದ ರೇಲ್ವೆ ಇಲಾಖೆಯ ಇಬ್ಬರು ಸಿಬ್ಬಂದಿ ಮಾಡಿದ ಕಾರ್ಯ ಪ್ರಶಂಸನೀಯ ಮತ್ತು ಅವರು ಮಾಡಿದ ಕರ್ತವ್ಯ ಪ್ರಜ್ಞೆಗೆ ಅಭಿನಂದನೆಗಳು. ರೈಲಿನಲ್ಲಿ ಇದ್ದ ಎಲ್ಲ ಪ್ರಯಾಣಿಕರು ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಲೇಬೇಕು. ಒಂದು ವೇಳೆ ನಮ್ಮ ಕೆಲಸ ಮುಗಿಯಿತು ಎಂದು ಮನೆಗೆ ಹೋಗಿದ್ದರೆ ಎಂಥಹ ಅನಾಹುತ ಆಗುತ್ತಿತ್ತು ಎಂದು ಕಲ್ಪಿಸಿಕೊಳ್ಳಲೂ ಅಸಾಧ್ಯ. ಸರ್ಕಾರವು ದುರ್ಮರಣದಲ್ಲಿ ಸತ್ತವರಿಗೆ ಕನಿಷ್ಠ ರು. 50,000ಗಳಂತೆ ಪರಿಹಾರ ಕೊಡಬೇಕಾಗುತ್ತಿತ್ತು. ಆ ಹಣದ ಲೆಕ್ಕ ಕನಿಷ್ಠ ಮೂರು ಕೋಟಿಯಂತೂ ಆಗುತ್ತಿತ್ತು. ಅವರ ಪ್ರಾಣ ಉಳಿಸಿದ ಆ ಸಿಬ್ಬಂದಿಗೆ ಸರ್ಕಾರ ಅವರನ್ನು ಗೌರವಿಸಿ ಕೇವಲ ರು. 10,000, ರು. 20,000ಗಳನ್ನು ಕೊಟ್ಟು ಸನ್ಮಾನಿಸಿದ್ದರೆ, ಸರ್ಕಾರಕ್ಕೂ ಒಂದು ಗೌರವ ಬರುತ್ತದೆ. ಜೊತೆಗೆ ತಾವು ಮಾಡಿದ ಕೆಲಸಕ್ಕೆ ಅವರಿಗೂ ಸಮಾಧಾನ ಸಿಗುತ್ತದೆ. ಹಾಗೆಯೇ ಉಳಿದ ನೌಕರರಿಗೂ ಕರ್ತವ್ಯದ ಬಗ್ಗೆ ಕಾಳಜಿ ಬರುತ್ತದೆ.
-ಅರವಿಂದ. ವಿ. ಜಗ್ಗಿವನರ, ಬೆಳಗಾವಿ
ಪ್ರತಿಕ್ರಿಯೆ ನೀಡಲಿ
ರಾಜಕಾರಣಿಗಳು ಜೈಲಿನಲ್ಲಿದ್ದರೂ ಚುನಾವಣೆಗೆ ಸ್ಪರ್ಧಿಸಬಹುದು ಅಥವ ಮತ ಹಾಕಬಹುದು. ಆದರೆ ಆತ ದೋಷಿ ಎಂದು ಘೋಷಿಸಿರಬಾರದು ಎಂದು ದಿ. 10.10.2013ರ ಕನ್ನಡಪ್ರಭದಲ್ಲಿ ಪ್ರಕಟಗೊಂಡಿರುತ್ತದೆ. ಆದರೆ ಒಬ್ಬ ಸರ್ಕಾರಿ ನೌಕರ ಕಾರಣಾಂತರದಿಂದ ಅಮಾನತ್ತುಗೊಂಡು ಆತನ ಮೇಲೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗಿರುತ್ತದೆ. ಆತನು ದೋಷಿ ಎಂದು ಘೋಷಿಸಿರದೆ ಇದ್ದರೂ ಆತನಿಗೆ ಬರಬೇಕಾದ ಸೌಲಭ್ಯಗಳಿಂದ ವಾರ್ಷಿಕ ಬಡ್ತಿ ಮುಂಬಡ್ತಿಯನ್ನು ಸರ್ಕಾರ ತಡೆ ಹಿಡಿಯುತ್ತದೆಯ. ಇದು ಯಾವ ನ್ಯಾಯ? ರಾಜ್ಯ ಸರ್ಕಾರ ಇದಕ್ಕೆ ಉತ್ತರಿಸುವುದೇ?
-ಹನುಮಂತರಾಯಪ್ಪ, ಬೆಂಗಳೂರು
ದ್ರಾವಿಡ್ ವೈಖರಿಯೇ ಭಿನ್ನ
ದಿ. 8.10.13ರಂದು ಪ್ರಕಟವಾದ 'ದ್ರಾವಿಡ್ ಇನ್ನು ಆಡುವುದಿಲ್ಲ. ನೆನಪು ಕಾಡದೆ ಬಿಡುವುದಿಲ್ಲ' ಎನ್ನುವ ಕೆ.ಎಸ್. ಜಗನ್ನಾಥ್ ಅವರ ಲೇಖನ ಪ್ರಸ್ತುತ. ಅರ್ಜುನ ಮೂರು ಲೋಕದ ಗಂಡನೆನಿಸಿದರೆ, ಕರ್ಣನಷ್ಟು ಕೀರ್ತಿ ಗಳಿಸಲಿಲ್ಲ. ದಾನ, ತ್ಯಾಗ, ಶೌರ್ಯದಲ್ಲಿ ಅರ್ಜುನನಿಗಿಂತ ಕರ್ಣ ಮಿಗಿಲಾಗಿ ನಿಲ್ಲುತ್ತಾನೆ. ಸುನೀಲ್ ಗವಾಸ್ಕರ್ ಮಾಡಿದಷ್ಟು ದಾಖಲೆಗಳನ್ನು ಜಿ.ಆರ್. ವಿಶ್ವನಾಥ್ ಮಾಡದಿದ್ದರೂ, ಭಾರತ ತಂಡದಲ್ಲಿ ಆಪತ್ಭಾಂಧವ ಎನ್ನುವ ವಿಶ್ವಾಸ ಗಳಿಸಿದ್ದ. ಅದರಂತೆ ಸಚಿನ್ ತೆಂಡೂಲ್ಕರ್ ಎನ್ನುವ ಕ್ರಿಕೆಟ್ ದೇವರು ಮಾಡಿದ ಸಾಧನೆಯನ್ನು ಮೀರಿಸದಿದ್ದರೂ ದ್ರಾವಿಡ್ ಭಾರತ ತಂಡಕ್ಕೆ ಯಾವತ್ತೂ ರಕ್ಷಣೆಯ ಗೋಡೆಯಾಗಿದ್ದ. ಈ ಇಬ್ಬರು ಮುಂಬೈಕರ್ಗಳನ್ನು ಮೀರಿಸದಿದ್ದರೂ ಕನ್ನಡದ ಕಣ್ಮಣಿಗಳಾದ ವಿಶ್ವನಾಥ್-ದ್ರಾವಿಡ್ ಜನಮಾನಸದಲ್ಲಿ ಹೆಚ್ಚು ಆಪ್ತರಾಗಿ ನಿಲ್ಲುತ್ತಾರೆ.
-ಮಂಜುನಾಥ್ ಕಣಿವಿಹಳ್ಳಿ, ನ್ಯಾಯವಾದಿಗಳು, ಹರಪನಹಳ್ಳಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

