ಸಂಪಾದಕೀಯ

ರಾಜಾರಾಮ್ ಬಕ್ಷ್ಸಿಂಗ್ ದೇಶಪ್ರೇಮ

Published On :

ಇದೀಗ ಸುದ್ದಿಯಲ್ಲಿರುವ, ಶೋಭನ್ ಸರ್ಕಾರ್ ಕನಸಿನಲ್ಲಿ ಕಾಣಿಸಿಕೊಂಡ ಒಂದು ಸಾವಿರ ಟನ್ ಚಿನ್ನದ ಅನ್ವೇಷಣೆಯಲ್ಲಿರುವ ಪ್ರಾಚ್ಯವಸ್ತು ಇಲಾಖೆಯ ಅಧಿಕಾರಿಗಳ ಪ್ರಯತ್ನ ವಿಶ್ವದ ಗಮನ ಸೆಳೆದಿದೆ. ಈ ಅಪಾರ ಸಂಪತ್ತು 1857 ರ ಸುಮಾರಿಗೆ ಅಲ್ಲಿ ವಾಸವಾಗಿದ್ದ ರಾಜಾರಾಮ್ ಬಕ್ಷ್ಸಿಂಗ್ಗೆ ಸೇರಿದ್ದೆನ್ನಲಾಗುತ್ತಿದೆ. ಯಾರು ಈ ರಾಜಾರಾಮ್ ಎಂಬ ಬಗ್ಗೆ ಕುತೂಹಲವಿರುವುದು ಸಹಜ. ಅವನೊಬ್ಬ ಶ್ರೀಮಂತ ಚಿನ್ನದ ವ್ಯಾಪಾರಿಯಾಗಿದ್ದು, ಕಾನ್ಪುರದಲ್ಲಿ ಅವನದ್ದೊಂದು ದೊಡ್ಡ ಚಿನ್ನದ ಒಡವೆಗಳ ಅಂಗಡಿ ಇತ್ತು. 1857 ರ ಸಮಯದಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮತ್ತು ನಾನಾಸಾಹೇಬನಿಂದ ಪ್ರಭಾವಿತನಾದ ಸಿಂಗ್, ಅವರೊಡನೆ ಸೇರಿಕೊಂಡು ತನ್ನ ದೇಶಪ್ರೇಮವನ್ನು ಮೆರೆದವನು. ಬ್ರಿಟಿಷರ ನೆಲೆಗಳ ಮೇಲೆ ದಾಳಿಮಾಡಿ ಅವರಲ್ಲಿದ್ದ ಐಶ್ವರ್ಯವನ್ನು ದೋಚಿದನು. ಧುಂಡಿಯಾ ಖೇರ್ ಪ್ರದೇಶದ ಮೇಲೆ ಹಿಡಿತ ಸಾಧಿಸಿದ್ದ ಈತನಿಗೆ ಜನಬೆಂಬಲ ಅಪಾರವಾಗಿತ್ತು.
ನಾನಾ ಸಾಹೇಬನೊಡನೆ ಸೇರಿಕೊಂಡು ಒಮ್ಮೆ ಬ್ರಿಟಿಷರ ನೆಲೆಯೊಂದರ ಮೇಲೆ ಏಕಾಏಕಿ ದಾಳಿಮಾಡಿದನು. ಆಗ ಬ್ರಿಟಿಷರು ತಮ್ಮ ಹೆಂಡತಿ ಮತ್ತು ಮಕ್ಕಳೊಡನೆ ನಲವತ್ತು ದೋಣಿಗಳಲ್ಲಿ ಮೊಹ್ರೀರ್ ನದಿಯ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಅವುಗಳ ಮೇಲೆ ದಾಳಿ ಮಾಡಿ ಅನೇಕರನ್ನು ಕೊಲ್ಲಲಾಯಿತು. ಅವರಲ್ಲಿ ಕೆಲವರು ನದಿ ದಡ ಸೇರಿ ಅಲ್ಲಿದ್ದ ಪೊದೆಗಳಲ್ಲಿ ಅಡಗಿ ಕುಳಿತರು. ಅಲ್ಲಿಂದ ಮುಂದೆ ಧೋಂಡಿಯಾ ಖೇರ್ ಎಂಬ ಹಳ್ಳಿಯ ಶಿವದೇವಾಲಯದಲ್ಲಿ ಆಶ್ರಯ ಪಡೆದರು. ಇದು ರಾಂ ಬಕ್ಷ್ ಸಿಂಹನಿಗೆ ತಿಳಿದು, ದೇವಾಲಯದೊಳಗೆ ಬೆಂಕಿ ಹಚ್ಚಿ ಅವರೆಲ್ಲಾ ಉಸಿರುಗಟ್ಟಿ ಸಾಯುವಂತೆ ಮಾಡಿದನು. ಈ ಘಟನೆ ಬ್ರಿಟಿಷರನ್ನು ಅಪಾರವಾಗಿ ಕೆರಳಿಸಿತು.
ಸಿಂಗ್ನನ್ನು ಬೇಟೆಯಾಡಲು ಅಪಾರ ಸೈನ್ಯವನ್ನು ಕಳುಹಿಸಲಾಯಿತು. ಕೊನೆಗೆ 1858ರಲ್ಲಿ ಅವನನ್ನು ವಾರಣಾಸಿಯ ಬಳಿ ಸೆರೆಹಿಡಿದು, ಖೇರ್ನ ಶಿವ ದೇವಾಲಯದ ಬಳಿ ಬಹಿರಂಗವಾಗಿ ನೇಣುಹಾಕಲಾಯಿತು. ಅವನ ಪುತ್ರಿಯರಿಬ್ಬರೂ ಸುದ್ದಿ ತಿಳಿದು ಆತ್ಮಹತ್ಯೆ ಮಾಡಿಕೊಂಡರು. ಹೀಗೆ ಸ್ವಾತಂತ್ರ್ಯ ಸಂಗ್ರಾಮದ ಭಾಗವಾಗಿ, ತನ್ನ ರಾಷ್ಟ್ರಪ್ರೇಮವನ್ನು ಮೆರೆದ ರಾಜಾರಾಮ್ ಬಕ್ಷ್ ಸಿಂಗ್ ಇಂದು ಮತ್ತೆ ಸುದ್ದಿಯಲ್ಲಿದ್ದಾನೆ. ಒಂದು ವೇಳೆ ಉತ್ಖನನದಲ್ಲಿ ಚಿನ್ನವೇನಾದರೂ ಸಿಕ್ಕರೆ, ಅಪಾರ ಸಂಪತ್ತನ್ನು ದೇಶಕ್ಕೆ ನೀಡಿದ ಕೀರ್ತಿಗೂ ಬಕ್ಷ್ ಸಿಂಗ್ ಪಾತ್ರನಾಗುತ್ತಾನೆ.


 ಪ್ರೊ. ಎಂ. ಎನ್. ಸುಂದರರಾಜ್, ಶಿವಮೊಗ್ಗ
rajsundar1957@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.