ಜಾಟ್ ಸಮಾಜದ ಸ್ಥಾನ
ಚುನಾವಣೆಯ ಆಚಾರ ಸಂಹಿತೆ ಜಾರಿಗೆ ಬರುವುದಕ್ಕೆ ಕೆಲವೇ ಗಂಟೆಗಳಿರುವಾಗ ಕೇಂದ್ರ ಸರ್ಕಾರ ತನ್ನ ವಿಶೇಷ ಅಧಿಕಾರವನ್ನು ಬಳಸಿ, ಜಾಟ್ ಜನಾಂಗವನ್ನು ಇತರೆ ಹಿಂದುಳಿದ ಜಾತಿ ಪಂಗಡಗಳ ಪಟ್ಟಿಗೆ ಸೇರಿಸುವ ಆದೇಶವನ್ನು ಪ್ರಕಟಿಸಿದೆ.
ಆ ಪ್ರಕಟಣೆಯಿಂದ ಪಂಜಾಬ್, ಹರ್ಯಾಣ, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ಬಿಹಾರ, ಒಡಿಶಾಗಳ ಪ್ರಬಲ ಜನಾಂಗಗಳಲ್ಲಿ ಒಂದಾದ ಜಾಟ್ ಸಮುದಾಯಕ್ಕೆ ಮೀಸಲು ಸೌಲಭ್ಯ ತತ್ಕ್ಷಣದಿಂದಲೇ ಲಭ್ಯವಾಗುತ್ತದೆ.
ಸರ್ಕಾರದ ಈ ಆದೇಶವನ್ನು ಜಾರಿಗೆ ತರುವುದರ ವಿರುದ್ಧ ಸುಪ್ರೀಮ್ ಕೋರ್ಟಿನಲ್ಲಿ ಹೂಡಲಾದ ಅರ್ಜಿ ತಿರಸ್ಕೃತವಾಗಿದೆ. ಆದೇಶವನ್ನು ನ್ಯಾಯಾಲಯ ತಡೆಹಿಡಿದಿಲ್ಲ. ಆದರೆ ಆದೇಶ ಸಂವಿಧಾನ ಬದ್ಧ ಎಂದೇನೂ ಸುಪ್ರೀಮ್ ಕೋರ್ಟ್ ಹೇಳಿಲ್ಲ.
ಈ ವಿಚಾರದಲ್ಲಿ ಸಂಬಂಧಪಟ್ಟ ಆಸಕ್ತ ಹಿತಗಳು, ಸರ್ಕಾರಗಳು ಸುಪ್ರೀಮ್ ಕೋರ್ಟಿನ ಮುಂದೆ ಪ್ರಮಾಣ ಪತ್ರವನ್ನು ಸಲ್ಲಿಸಿ ಜಾಟ್ ಸಮುದಾಯಕ್ಕೆ ಇಂತಹ ಸೌಲಭ್ಯಗಳನ್ನು ಒದಗಿಸುವುದು ಸರಿ - ಅಥವಾ ತಪ್ಪು ಎನ್ನುವ ಬಗ್ಗೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕು.
ಅನಂತರ ನ್ಯಾಯಾಲಯದ ವಿಚಾರಣೆ ಆರಂಭ. ತೀರ್ಪು ಬರುವುದು ಯಾವಾಗಲೋ. ಚಾಲ್ತಿ ಶಿಕ್ಷಣ ವರ್ಷದಲ್ಲೇ ಜಾಟ್ ಜನಾಂಗಕ್ಕೆ ಸೌಲಭ್ಯಗಳು ಲಭ್ಯವಾಗಲೇ ಬೇಕು. ಅದು ಕಾಯಿದೆಯ ಸ್ಥಿತಿ.
ಉತ್ತರ ಭಾರತದ ಹಲವಾರು ರಾಜ್ಯಗಳಲ್ಲಿ ಜಾಟ್ ಸಮುದಾಯ ಇತರೆ ಹಿಂದುಳಿದ ಜಾತಿಗಳ ಪಟ್ಟಿಯಲ್ಲಿ ಹೊಸ ಕೆನೆಪದರವಾಗಿ ಉದ್ಭವವಾಗುವುದಂತೂ ಸ್ಪಷ್ಟ. ಅದರಿಂದ ಈಗಿನ ಜಾತಿ ಸಂಬಂಧಗಳಲ್ಲಿ ಅಲ್ಲಕಲ್ಲೋಲ ಆದರೂ ಆಗಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

