ಆಹಾರದ ಬೆಲೆ ಏರಿಕೆ
ಕಳೆದ ಫೆಬ್ರವರಿಯಲ್ಲಿ ತರಕಾರಿ - ಹಣ್ಣುಗಳ ಬೆಲೆಗಳು ಪೇಟೆಯಲ್ಲಿ ಇಳಿದಾಗ, ಸಗಟು ಪೇಟೆಯ ಬೆಲೆಯ ಸೂಚ್ಯಂಕ ಗಮನಾರ್ಹವಾಗಿ ಇಳಿದಿತ್ತು. ಆ ಸಮಯದಲ್ಲಿ ಹಣದ ಅತಿಪ್ರಸರಣದ (ಇನ್‌ಫ್ಲೇಷನ್) ವೇಗವೂ ಕಡಿಮೆಯಾಗಿತ್ತು. ಹೀಗಾಗಿ ರಿಸರ್ವ್ ಬ್ಯಾಂಕ್‌ನ ಬಡ್ಡಿ ದರಗಳೂ ಕಡಿಮೆಯಾಗಬಹುದೆನ್ನುವ ಆಸೆ ವಾಣಿಜ್ಯೋದ್ಯಮ ವಲಯದಲ್ಲಿ ಮೂಡಿತ್ತು.
ಆದರೆ ಫೆಬ್ರವರಿಯ ಅನಂತರ, ಮಾರ್ಚ್ - ಏಪ್ರಿಲ್‌ನಲ್ಲಿ ಮತ್ತೆ ಚಿಲ್ಲರೆ ಪೇಟೆಯಲ್ಲಿ ಆಹಾರದ ಬೆಲೆಗಳು ಏರತೊಡಗಿದ್ದು, ಆ ಪ್ರವೃತ್ತಿ ಇನ್ನೂ ನಿಂತಿಲ್ಲ.
ಆಲೂಗಡ್ಡೆ, ಹಣ್ಣು, ತರಕಾರಿಗಳ ಬೆಲೆಗಳು ಏರುತ್ತಲೇ ಇವೆ. ಅದರ ಪರಿಣಾಮವಾಗಿ ಗ್ರಾಮೀಣ ಪ್ರದೇಶಗಳಲ್ಲೂ ಇನ್‌ಫ್ಲೇಷನ್ ಏರಿಕೆಯ ದರ ಹೆಚ್ಚುವ ಪ್ರವೃತ್ತಿಯೂ ಕಂಡುಬಂದಿದೆ. ಹೀಗಾಗಿ ಈ ತಿಂಗಳ ಹಣ ನೀತಿಯ ಪ್ರಕಟಣೆಯಲ್ಲಿ ರಿಸರ್ವ್ ಬ್ಯಾಂಕಿನ ಬಡ್ಡಿ ದರದ ಇಳಿತವನ್ನು ನಿರೀಕ್ಷಿಸುವಂತಿಲ್ಲ.
ಇದು ಒಂದು ರೀತಿಯಲ್ಲಿ ವಾಣಿಜ್ಯೋದ್ಯಮ ವಲಯಕ್ಕೆ ಸ್ವಾಗತಾರ್ಹವಾದ ಸುದ್ದಿ ಏನೂ ಅಲ್ಲ. ಹೊಸ ವಿತ್ತೀಯ ವರ್ಷದ ಆರಂಭದಲ್ಲೇ ಬಡ್ಡಿ ದರಗಳು ಏರಿದ ಮಟ್ಟದಲ್ಲೇ ನಿಂತರೆ, ಅದರ ಪರಿಣಾಮ ಆರ್ಥಿಕ ಪರಿಸ್ಥಿತಿಯ ಮೇಲೂ ಆಗುವುದು ಅನಿವಾರ್ಯ.
ಮೇ ಮಧ್ಯ ಭಾಗದಲ್ಲಿ ದೆಹಲಿಯಲ್ಲಿ ಅಧಿಕಾರವನ್ನು ವಹಿಸಿಕೊಳ್ಳುವ ಸರ್ಕಾರಕ್ಕೆ (ಅದು ಯಾವುದೇ ಪಕ್ಷದ್ದಾಗಿರಲಿ) ಇದೇನೂ ಒಳ್ಳೆಯ ಸುದ್ದಿಯಲ್ಲ. ಮೇ - ಜೂನ್‌ನಲ್ಲಿ ನೂತನ ವರ್ಷದ ಮೊದಲ ಭಾಗದ ಲೇಖಾನುದಾನ ವಿಧೇಯಕವನ್ನು ಮಂಡಿಸುವವರಿಗೆ ಸಂಕಟ ಕಟ್ಟಿಟ್ಟ ಬುತ್ತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

