*ಪಾರ್ಟಿಗಾಗಿ ಪಾರ್ಟು ತೊಡುವಿಕೆ
* ಉಪಾಯದಲ್ಲಿ ಜೀವನ ಮಾಡುವ ಕಲೆಯಿರುವವರು ಇದನ್ನು ಜೀವನೋಪಾಯವಾಗಿಸಿಕೊಳ್ಳಬಹುದು
* ಆಳಾಗಿ ದುಡಿಯದೆಯೂ ಅರಸನಾಗಿ ಉಣ್ಣಲು ಇರುವ ಮಾರ್ಗ
* ದೇಶ ಭಾಷೆ ಗೊತ್ತಿಲ್ಲದಿದ್ದರೂ ದೇಶವಾಳುವ ಅವಕಾಶ ಗಿಟ್ಟಿಸಿಕೊಳ್ಳುವ ಮಾರ್ಗ
* ಒಳ್ಳೆಯ ಗಳಿಕೆಯುಳ್ಳವ ಟಿಕೆಟ್ ಗಳಿಕೆಯ ಹೆಗ್ಗಳಿಕೆ ಪಡೆಯಬಲ್ಲ
* ನೈತಿಕತೆಗಳನ್ನೆಲ್ಲ ನೀತಿಕತೆಗಳಿಗೇ ಸೀಮಿತಗೊಳಿಸಿ ಬರಬೇಕಾದ ಕ್ಷೇತ್ರ
* ಮೂರೂ ಬಿಟ್ಟವರಿಗಿಲ್ಲಿ ಅವಕಾಶ. ಸಂಕೋಚ, ಭಯ ಮತ್ತು ವಿನಯ
* ಶ್ರೀಮಂತರ ಹವ್ಯಾಸ ಮತ್ತು ಶ್ರೀಮಂತನಾಗಲು ಇರುವ ಶಾರ್ಟ್‌ಕಟ್
* ಇಲ್ಲಿ ಒಳ್ಳೆಯವರಿದ್ದರೆ ಅದು ಅಪವಾದ ಮತ್ತು ಒಳ್ಳೆಯತನಕ್ಕೇ ಅದು ಅಪವಾದ
* ಜಾತಿ ಮತದ ಹೊಟ್ಟ ತೂರಿ ಮತದ ಜಾತಿ ಸೃಷ್ಟಿಸುವಿಕೆ
* ಯಾವ ಬಣದಲ್ಲಿದ್ದರೆ ಝಣ-ಝಣ ಹೆಚ್ಚುವುದೋ ಅಲ್ಲೇ ಅವನ ಋಣ
* ಹೃದಯದ ಜಾಗದಲ್ಲಿ ಕಿಸೆ ಮತ್ತು ಬುದ್ಧಿಯ ಜಾಗದಲ್ಲಿ ಅವಿವೇಕವುಳ್ಳವನ ಕಾರ್ಯಕ್ಷೇತ್ರ
* ಜನಸೇವೆಯ ಬೋರ್ಡ್‌ನ ಕೆಳಗೆ ನಡೆಯುವ ವ್ಯವಹಾರ
* ಸಿದ್ಧಾಂತಗಳಿಗೆ ತರ್ಪಣ ಬಿಡುವ ಶ್ರಾದ್ಧಭೂಮಿ
-ವಿಶ್ವನಾಥ ಸುಂಕಸಾಳ
vishwasunkasal@yahoo.com