= ಆಚಾರಕ್ಕಿಂತ ಲೆಕ್ಕಾಚಾರವೇ ಪ್ರಧಾನವಾಗಿಯುಳ್ಳ ಕ್ಷೇತ್ರ
= ಹಣ ಗಳಿಕೆಯ ಸಂಕಲನ, ಮಾನ-ಮರ್ಯಾದೆಯ ವ್ಯವಕಲನ
= ಸಮಾಜದ ಒಗ್ಗಟ್ಟಿನ ಭಾಗಾಕಾರ ಮತ್ತು ಕೋಮು ಕೋಮುಗಳ ನಡುವಿನ ಗುಣಾಕಾರ
= ಹೊಡೆದಾಡುವ ಮೂಲಕ ಒಡೆದು ಆಳುವ ಒಡೆಯನಾಗುವ ಸಂಚು
= ಭಂಡತನವೇ ಇಲ್ಲಿನ ಬಂಡವಾಳ
= ಮೋಸ, ದಗಾ, ವಂಚನೆಗಳೇ ಇದರ ಬೆನ್ನೆಲುಬು
= ಲಾಭ ಮತ್ತು ಲೋಭ ಇಲ್ಲಿಯ ಪ್ರವರ್ತಕಗಳು
= ವೋಟಿಗಾಗಿ ನೋಟು ಹಂಚಿದವನಿಗಿಲ್ಲಿ ಅಧಿಕಾರ ಭಾಗ್ಯ
= ಭೀಷಣ ಭಾಷಣ, ಭರವಸೆಯ ವರಸೆಗಳೆಲ್ಲ ಉಪ ಸಂಪನ್ಮೂಲಗಳು
= ಸಾರ್ವಜನಿಕ ಜೀವನವೇ ಇಲ್ಲಿ ವಯಕ್ತಿಕ ಜೀವನ
= ಒಮ್ಮೆ ರಾಜಕಾರಣಕ್ಕೆ ಇಳಿದರೆ ಮತ್ತೆ ಮೇಲೆ ಬರುವುದು ಕಷ್ಟ
= ಖರ್ಚು ಮಾಡಿದಷ್ಟು ಖುರ್ಚಿ ಹತ್ತಿರವಾಗುವ ಕ್ಷೇತ್ರ
= ನಿಷ್ಠೆ, ವಂಚನೆಗಳ ನಡುವೆ ಇಲ್ಲ ಅಂತರ. ಹಾಗಾಗಿಯೇ ನಡೆಯುವುದು ಪಕ್ಷಾಂತರ
= ಮತ ಬ್ಯಾಂಕ್ ಕೊಳ್ಳೆ ಹೊಡೆದರೆ ತುಂಬುವುದು ಸ್ವಿಸ್ ಬ್ಯಾಂಕ್
= ಅಡ್ಡಗಾಲು ಹಾಕಿ ಮೆಲೆ ಬಂದವನಿಗೆ ಅಡಿಗಲ್ಲು ಹಾಕುವ ಅವಕಾಶ ಲಭ್ಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com