= ರಾಜಕೀಯ ಸಂತ್ರಸ್ತರ ಪರಿಹಾರೋಪಾಯ
ಚುನಾವಣೆಗೊಮ್ಮೆ ಮಾಡುವ ನೀತ್ಯಂತರ
ಉತ್ತಮರ ಮತ್ತು ಭ್ರಷ್ಟರ ನಡುವೆ ತರ ಕಡಿಮೆಗೊಳಿಸುವ ಯೋಜನೆ
= ಪಕ್ಷದ ಮೂಲ ಕಾರ್ಯಕರ್ತನ ಅವಮಾನ ಪರ್ವ
ಟಿಕೆಟ್ ಎಂಬ ಮಾಯಾಂಗನೆಗಾಗಿ ಬಕೆಟ್ ಹಿಡಿದುದರ ಪರಿಣಾಮ
= ಇಲ್ಲಿರುವುದು ಸುಮ್ಮನೆ ಎನಿಸಿದಾಗ ಅಲ್ಲಿರುವುದು ನಮ್ಮನೆ ಎನ್ನುತ್ತಾ ಮನೆ ಮತ್ತು ಮನ ಬದಲಾಯಿಸುವಿಕೆ
= ಅಸ್ತಿತ್ವಕ್ಕೇ ಕುತ್ತು ಬಂದಾಗ ನಿಯತ್ತನ್ನು ಗಾಳಿಗೆ ತೂರಬೇಕಾದ ಜರೂರತ್ತು
= ರಾಜಕೀಯದ ಮರಕೋತಿ ಆಟ. ಜನರಿಗೆ ಮಾತ್ರ ಪ್ರಾಣಸಂಕಟ
= ಪರಿವರ್ತನೆ ಜಗದ ನಿಯಮ ಎಂಬುದನ್ನು ತಮ್ಮ ವರ್ತನೆಯಲ್ಲಿ ಅಕ್ಷರಶಃ ಅಳವಡಿಸಿಕೊಂಡ ರಾಜಕಾರಣಿಗಳ ಕುಲಾಚಾರ
= ಮೇಯಲು ಮತ್ತೇನೂ ಉಳಿದಿಲ್ಲ ಎನಿಸಿದಾಗ ಆಗುವ ಹಸಿವಿನ ಫಲಿತ
= ಲಕ್ಷಾಂತರ ಹರಿವಿನ ನಂತರ ಆಗುವ ಜಾತ್ಯಂತರ
= ಇದೊಂಥರಾ ರಾಜಕೀಯದ ವರ್ಣ ಸಂಕರ
= ಒಂದು ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ಪಿಂಡ ಪ್ರದಾನ ಮಾಡಿ, ಮತ್ತೊಂದು ಪಕ್ಷದ ಶ್ರವಣಭೋಜನ ಮಾಡುವಿಕೆ
= ರಾಜಕಾರಣಿಗಳ ಹಾರಾಟ ನಡೆಯುವುದು ಈ ವಿಷಯದಲ್ಲಿ ಮಾತ್ರ
= ನೀತಿಯನ್ನು ಪಕ್ಕಕ್ಕಿಟ್ಟು ಮಾಡಲಾಗುವ ಕತ್ತೆ ವ್ಯಾಪಾರ
ವಿಶ್ವನಾಥ ಸುಂಕಸಾಳ