ಸಂಪಾದಕೀಯ

ಮಾರ್ಗದರ್ಶನ ನಾಮಫಲಕಗಳಿಲ್ಲದೆ ಪ್ರವಾಸಿಗರ ಪರದಾಟ

Published On :

ಚಿತ್ರದುರ್ಗ ಐತಿಹಾಸಿಕ ಕೋಟೆ ಕೊತ್ತಲುಗಳ ನಗರ. ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ನಗರಕ್ಕೆ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಎನ್‌ಹೆಚ್4, ಎನ್‌ಹೆಚ್13 ವರ್ಷಂಪ್ರತಿ 10 ಲಕ್ಷ ಪ್ರವಾಸಿಗರು ಅಡ್ಡಾಡುತ್ತಾರೆ ಎಂಬ ದಾಖಲೆ ಇದೆ. ಆದರೆ ಈ ಪ್ರವಾಸಿಗರಿಗೆ ಬೆಟ್ಟದ ದಾರಿ ದುರ್ಗಮವಾಗಿದೆ. ಆಯಕಟ್ಟಿನ ಪ್ರವೇಶ ದ್ವಾರಗಳಲ್ಲಿ, ದಾರಿ ತೋರಿಸುವ ನಾಮಫಲಕಗಳಿಲ್ಲ. ಬೆಟ್ಟ ತಲುಪಲು ಇರುವ ಎರಡು ದಾರಿ, ರಂಗಯ್ಯನ ಬಾಗಿಲು, ಆನೆ ಬಾಗಿಲುಗಳಲ್ಲಿ ಈಗಿನ ಹೈಟೆಕ್ ಬಸ್ಸುಗಳು ತೂರುವುದಿಲ್ಲ. ಬಂದವರಿಗೆ ಬೇರೆ ಬಳಸು ದಾರಿ ಗೊತ್ತಾಗುವುದಿಲ್ಲ. ಆದ್ದರಿಂದ ಪ್ರವಾಸಿಗರು ಬೀದಿ ಬೀದಿಗಳಲ್ಲಿ ವಿಳಾಸ (ಬೆಟ್ಟಕ್ಕೆ) ಕೇಳುವುದು ದಿನನಿತ್ಯದ ದೃಶ್ಯ. ಈ ವಿಚಾರವಾಗಿ ಪುರಾತತ್ವ ಇಲಾಖೆ, ಪ್ರಾಚ್ಯವಸ್ತು ಇಲಾಖೆ ಕಡೆಗೆ ಪ್ರವಾಸೋದ್ಯಮ ಇಲಾಖೆ ತಮಗೆ ಸಂಬಂಧವಿಲ್ಲ ಎನ್ನುವಂತಿವೆ. ಕಡೆಗೆ ನಗರದ ಪುರ ಪಿತೃಗಳಾದರೂ ಗಮನ ಹರಿಸುತ್ತಿದಿರುವುದು ನಾಚಿಕೆಗೇಡು. ಮಾನ್ಯ ನಗರಸಭಾ ಮಹಾಶಯರುಗಳೇ, ಇದು ನಗರದ ಪ್ರತಿಷ್ಠೆ ಪ್ರಶ್ನೆ. ಈಗಲಾದರೂ ಬೆಟ್ಟದ ದಾರಿ ತೋರಿಸುವ, 'ಐತಿಹಾಸಿಕ ಬೆಟ್ಟಕ್ಕೆ ದಾರಿ' ಎಂಬ ಬಾಣದ ಗುರ್ತಿನ ಫಲಕಗಳ್ನು ಹಾಕಿಸಿ ದುರ್ಗದ ಘನತೆ ಕಾಪಾಡಿ, ಸದರಿ ವಿಷಯಕ್ಕೆ ಸ್ಪಂದಿಸಿ ಶರವೇಗದ ಪ್ರತಿಕ್ರಿಯೆ ದೊರೆಯುವುದೆಂದು ಆಶಿಸೋಣವೇ?
-ಎಂ. ಮೃತ್ಯುಂಜಯಪ್ಪ, ಚಿತ್ರದುರ್ಗ
ತೆರಿಗೆ ಮಿತಿ ಹೆಚ್ಚಿಸಲಿ
ಚಾಲ್ತಿ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಸಾರ್ವಜನಿಕರು ಹಾಗೂ ನಿವೃತ್ತ ಹಿರಿಯ ನಾಗರಿಕರು ಪಾವತಿಸುವ ಆದಾಯ ತೆರಿಗೆ ಬಗ್ಗೆ ಪ್ರಸ್ತಾವನೆ ಆಗದಿರುವುದು ರಹಸ್ಯವಾಗಿ ಉಳಿದಿದೆ. ಐದು ಲಕ್ಷ ವಹಿವಾಟಿನ ಒಳಗಡೆ ಇರುವವರಿಗೆ ಎರಡು ವರ್ಷಗಳಿಂದ ನಿಲ್ಲಿಸಲಾಗಿದ್ದ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯನ್ನು ಪುನಃ ಪ್ರಸ್ತುತ ಸಾಲಿನಿಂದ ಸಲ್ಲಿಸಲು ಜಾರಿಗೆ ತಂದಿರುವುದು ಎಷ್ಟು ಸಮಂಜಸ? ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದು ಶ್ರೀಸಾಮಾನ್ಯರ ಬದುಕು ಅತಂತ್ರ ಸ್ಥಿತಿ ತಲುಪಿದೆ. ಅದರಲ್ಲೂ ಲೆಕ್ಕವಿಲ್ಲದಷ್ಟು ಮಧ್ಯಮ ಹಿರಿಯ ನಾಗರಿಕರು ವಯೋವಾನದ ಕಾರಣ, ಆರೋಗ್ಯದಲ್ಲಿನ ಏರುಪೇರು, ಆದಾಯಕ್ಕಿಂತ ಹೆಚ್ಚುತ್ತಿರುವ ಖರ್ಚುಗಳ ಸಾಲು, ಕೆಲವು ಅನುಪಯುಕ್ತ ಮಕ್ಕಳ ಕೈ ಸೆರೆಯಿಂದ ಇನ್ನು ಸಂಸಾರದ ಹೊಣೆಯಿಂದ ಮುಕ್ತರಾಗದೇ ಪರಿತಪಿಸುತ್ತಿರುವುದು ಕಣ್ಣಿಗೆ ಕಾಣುವ ಸತ್ಯ. ಸಂಧ್ಯಾಕಾಲದಲ್ಲಿ ವಿಶ್ರಾಂತಿ, ನೆಮ್ಮದಿ ಕಾಣದೆ ಬದುಕು ಕಠೋರ ಕಡಲಾಗಿರುವುದು ಸತ್ಯವಾಗಿರುತ್ತದೆ. ಬಾಳೆಯ ಗಿಡಕ್ಕೆ ಬಾಳೆಯ ಗೊನೆಯು ಮೃತ್ಯುವಾದಂತೆ, ಸಾಕಿ ಸಲುಹಿದ ತಮ್ಮ ಕೆಲವು ಮಕ್ಕಳ ಬೇಜವಾಬ್ದಾರಿತನ, ನಿರ್ಲಕ್ಷ್ಯ ಭಾವನೆಗಳಿಂದ ಇಂದು ತಮ್ಮ ಮಕ್ಕಳ ಪಾಲಿಗೆ ಬೇಡದ ವಸ್ತುವಾಗುತ್ತಿದ್ದಾರೆ. ವಯಸ್ಸಿನ ಕಾರಣ ತೆರಿಗೆ ರಿಟರ್ನ್ಸ್ ಸಲ್ಲಿಸುವುದು, ಕಛೇರಿಗಳಿಗೆ ಅಲೆದಾಡುವುದು, ಅವರಿವರ ಸಹಾಯ ಕೋರುವುದು ನುಂಗಲಾರದ ಕಹಿ ಗುಳಿಗೆಯಾಗಿದೆ.
ಸರ್ಕಾರವು ಹಿರಿಯ ನಾಗರಿಕರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ರಿಟರ್ನ್ ಸಲ್ಲಿಸುವ ಪ್ರಕ್ರಿಯೆಯನ್ನು ಒಂದು ಮಿತಿಯವರೆಗೆ ನಿಲ್ಲಿಸುವುದರ ಜೊತೆಗೆ, ತೆರಿಗೆ ಮಿತಿಯನ್ನು ಹೆಚ್ಚಿಸಿ, ತೆರಿಗೆ ಪಾವತಿಸುವ ವಿಧಾನವನ್ನು ಸರಳೀಕರಣಗೊಳಿಸುವುದು ಅನಿವಾರ್ಯ.
-ಕುಮಾರಸ್ವಾಮಿ, ಹಾಸನ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.