ಸಂಪಾದಕೀಯ

ಮಾಹಿತಿಪೂರ್ಣ ಅಂಕಣ

Published On :

ಗುರುವಾರ ಜನವರಿ 30ರ 'ನೂರೆಂಟು ನೋಟ' ಲೇಖನ ದೇಶವಾಸಿಗರಿಗೆ ಎಷ್ಟೊಂದು ಮಹತ್ವದ ಮಾಹಿತಿಗಳನ್ನು ಕೊಡುವಂತಿತ್ತು. ಒಂದೊಮ್ಮೆ ರಾಹುಲ್‌ಗಾಂಧಿ ಸಂದರ್ಶನಕ್ಕೆ ಒಪ್ಪದೇ ಹೋಗಿದ್ದರೆ, 1984ರ ಸಿಖ್ ಹತ್ಯಾಕಾಂಡದ ಅಯಾಮದ ನಿಜವಾದ ಪರಿಚಯ ಬಹಳಷ್ಟು ಜನರಿಗೆ ಆಗದೇ, ತಿಳಿದಿರುವ ಅರೆ-ಬರೆ ಸತ್ಯದ ಹಿಂದೆ ಸುತ್ತಾಡುತ್ತಿರಬೇಕಿತ್ತು. ಪಾಪ! 10 ವರ್ಷದ ಎಳೆಗೂಸು ರಾಹುಲ, 1984ರ ಗಲಭೆಯ ಬಗ್ಗೆ ಏನು ತಿಳಿದಿರಲು ಸಾಧ್ಯ? ತಾನೇನು ಗಲಭೆಯಲ್ಲಿ ಭಾಗವಹಿಸಿರಲಿಲ್ಲ ಎಂಬ 'ಪ್ರಾಮಾಣಿಕತೆ' ವ್ಯಕ್ತಪಡಿಸಿದರಲ್ಲ ಎಂದು ತಿಳಿದು ಸುಮ್ಮನಿರೋಣವೇ? ಅಷ್ಟಕ್ಕೂ ಅವರ್ಯಾಕೆ ಈ ಸಂದರ್ಶನಕ್ಕೆ ಒಪ್ಪಿಕೊಂಡರು ಎಂಬುದೇ ತಿಳಿಯದಾಯಿತು. ಪ್ರಾಯಶಃ ಇನ್ನೇನು ಸಾರ್ವತ್ರಿಕ ಚುನಾವಣೆಯೂ ಹತ್ತಿರಕ್ಕೆ ಬರುತ್ತಿದೆ, ತಾನೂ ಪ್ರಧಾನಿಯ 'ರೇಸ್‌'ನಲ್ಲಿ ಇರುವ ವ್ಯಕ್ತಿ, ಒಂದಿಷ್ಟು ಇಂಪ್ರೆಶನ್‌' ಪಡೆಯೋಣ ಎಂಬ ತವಕವಿದ್ದರೂ ಇರಬಹುದು. ಆದರೆ ಅವರಿಗೇನು ಗೊತ್ತು, ಈ ಸಂದರ್ಶನ ಇಷ್ಟೊಂದು ಅವಾಂತರ, ತೊಡಕು ತರಬಹುದೆಂದು. ಇದರ ಬಗ್ಗೆ ಸ್ವಲ್ಪವಾದರೂ ಅರಿವಾಗಿರುತ್ತಿದ್ದರೆ, ಈ ಸಂದರ್ಶನಕ್ಕೆ ಸುತರಾಂ ಒಪ್ಪುತ್ತಿರಲಿಲ್ಲವೇನೋ? 'ಟೈಮ್ಸ್ ನೌ' ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿಯವರ ತಿಳಿವಳಿಕೆಯೂ ಹೆಚ್ಚು ಕಡಿಮೆಯಾಯಿತೋ ಏನೋ? ಏನೋ 2014ರ ಸಂಭಾವ್ಯ ಪ್ರಧಾನಿ ಹುದ್ದೆಗೇರುವವರಲ್ಲಿ ಏನಾದರೂ ಅನುಭವ, ಪ್ರೌಢಿಮೆ ಬಂದಿರಬೇಕೆಂದು ತಿಳಿದಿದ್ದರೋ ಏನೋ. ಆದರೆ ನಿರೀಕ್ಷಿಸಿದ ಉತ್ತರ ಯಾವ ಪ್ರಶ್ನೆಗೂ ಸಿಗದೆ, ಹೇಳಿದ್ದನ್ನೇ ಹೇಳುತ್ತಿರುವ ರಾಹುಲ್‌ಗಾಂಧಿಯವರ ಉತ್ತರವನ್ನಷ್ಟೇ ಕೇಳುವಂತಾಗಿದ್ದು ಮಾತ್ರ ನಮ್ಮೆಲ್ಲರ ದುರ್ದೈವ. ಒಂದು ದೇಶದ ಪ್ರಧಾನಿಯಾಗುವವರು ಎಂಥವರಿರಬೇಕೆನ್ನುವ ಸಾಮಾನ್ಯ ಜ್ಞಾನದ ಅರಿವಾದರೂ ದೇಶವಾಸಿಗರಿಗೆ ಆಯಿತಲ್ಲ ಎಂದು ಸಮಾಧಾನಪಡೋಣವೇ?
- ಶಂಕರನಾರಾಯಣಭಟ್, ಮಾಡಗೇರಿ, ಹೊನ್ನಾವರ

ಆಧಾರಕ್ಕೆ ಮೂಗುದಾರ
ವಿಶಿಷ್ಟ ಗುರುತಿನ ಚೀಟಿ "ಆಧಾರ್‌" ಕುರಿತು ದೇಶಾದ್ಯಂತ ಹೇಳಿಕೆ ಗೊಂದಲ ಗಳ ಸಮರ ಸಾಗಿದೆ. ಜನ ಬೇಸತ್ತಿದ್ದಾರೆ. ಸಂಬಂಧಿಸಿದ ಮುಖ್ಯಸ್ಥರ ಹೇಳಿಕೆಗಳನ್ನು ಗಮನಿಸಿ.
*    ಸಬ್ಸಿಡಿ ಆಧಾರಿತ ಗೃಹಬಳಕೆ ಸಿಲಿಂಡರ್ ಪಡೆಯಲು ಆಧಾರ್ ಕಾರ್ಡ್ ಅವಶ್ಯಕತೆಯಿಲ್ಲ. ಇದೊಂದು ಗುರುತಿನ ಚೀಟಿ ಅಷ್ಟೇ.
    (ಸುಪ್ರೀಂಕೋರ್ಟ್ ತನ್ನ ಮಧ್ಯಂತರ ತೀರ್ಪಿನಲ್ಲಿ)
*    ಗೃಹ ಬಳಕೆ ಸಿಲಿಂಡರ್ ಪಡೆಯಲು ಆಧಾರ್ ಕಾರ್ಡ್ ಬೇಕೆಂದೇನಿಲ್ಲ.
    (ಸಚಿವ ಮೊಯ್ಲಿ ಸುಪ್ರೀಂನ ಲತ್ತೆಯ ನಂತರ)
*    ದಾವಣಗೆರೆ ಜಿಲ್ಲೆಯಲ್ಲಿ ಗ್ಯಾಸ್ ಸಿಲಿಂಡರ್‌ಗೆ ಆಧಾರ್ ಕಡ್ಡಾಯ.
    ಸಬ್ಸಿಡಿ ದರದಲ್ಲಿ ಬೇಕೆಂದರೆ 'ಆಧಾರ್‌' ಸಲ್ಲಿಸಬೇಕು.
    (ಉಪನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದಾವಣಗೆರೆ)
*    ಆಧಾರ್ ಬೇಕೇ ಬೇಡವೇ ಎಂಬುದು ನನ್ನ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರದಿಂದ ಆದೇಶ ಬಂದಿಲ್ಲ. ಚಿತ್ರದುರ್ಗದಲ್ಲಿ ಆಧಾರ್ ಕಡ್ಡಾಯ ಮಾಡಿಲ್ಲ.
    (ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ, ಚಿತ್ರದುರ್ಗ).
ಈಗ ಹೇಳಿ. ಚಿತ್ರದುರ್ಗದಲ್ಲಿ ಬೇಡವಾದದ್ದು ದಾವಣಗೆರೆಯಲ್ಲಿ ಬೇಕೇ ಬೇಕು. ಸುಪ್ರಿಂಗೆ ಬೇಡವಾದದ್ದು ಗ್ಯಾಸ್ ಏಜೆನ್ಸಿಯವರಿಗೆ ಬೇಕೇ ಬೇಕು.
ಗ್ರಾಹಕರೊಡನೆ ಏಕೆ ಈ ಕಣ್ಣಾಮುಚ್ಚಾಲೆ? ಫೆ.28ರ ಅವಧಿಯೊಳಗೆ ಕಾರ್ಡ್ ಮಾಡಿಸೋಣವೆಂದರೆ ಹರಪ್ಪನಹಳ್ಳಿಯಲ್ಲಿ 6 ತಿಂಗಳಿನಿಂದ ಆಧಾರ್ ಕೇಂದ್ರವಿಲ್ಲ.
ಸುಗ್ರೀವಾಜ್ಞೆಗಳನ್ನೇ ರದ್ದು ಮಾಡಿಸಬಲ್ಲ ರಾಹುಲ್‌ಜೀ ಒಂದೆರಡು ಕಾರ್ಡ್ "ಹರಿದೊಗೆದು" ಆಧಾರನ್ನು ರದ್ದು ಮಾಡಿಸಲಾರಿರಾ?
- ಕೆ. ಶ್ರೀನಿವಾಸರಾವ್, ಹರಪನಹಳ್ಳಿ


ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
ಜಟಛ್ಝಟ: ಛಟ್ಝಿಡ್ಝ್ಞಜಠ್ಠಛಝಿಛಅ್ಜಟಛ್ಝಟ.್ಛ್ಟಟ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.