ಸ್ವಾಗತಾರ್ಹ ನಿರ್ಧಾರ: ಜಾರಿ ಎಂದು?
ಬೆಂಗಳೂರೂ ಸೇರಿದಂತೆ, ರಾಜ್ಯದ ನಗರಗಳ ಸುತ್ತಮುತ್ತ ಸರ್ಕಾರಿ ಅಥವಾ ಸಾರ್ವಜನಿಕ ಸಂಸ್ಥೆಗಳ ಭೂಮಿಯನ್ನು ಆಕ್ರಮಿಸಿಕೊಂಡಿರುವ ಪ್ರಕರಣಗಳ ತನಿಖೆ, ವಿಚಾರಣೆಗೆ ವಿಶೇಷ ನ್ಯಾಯಾಲಯಗಳ ರಚನೆಯ ಭರವಸೆಯನ್ನು ಸರ್ಕಾರ ನೀಡಿರುವುದು ಸ್ವಾಗತಾರ್ಹ. ಆದರೆ ಇಂತಹ ವಿಚಾರಗಳಲ್ಲಿ ನಿರ್ಧಾರ ಒಳ್ಳೆಯದು. ಜಾರಿ ಎಂದು ಎನ್ನುವ ಪ್ರಶ್ನೆ ತತ್‌ಕ್ಷಣದಲ್ಲೇ ಕೇಳಬೇಕು ಎನಿಸುವುದೂ ಸಹಜವೇ.
ಈ ವಿಚಾರದಲ್ಲಿ ಅರಕಲಗೂಡಿನ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಅವರ ನೇತೃತ್ವದ ಶಾಸಕರ ಸಮಿತಿಯ ವರದಿ ಇದೆ. ಅನಂತರದ ನಿವೃತ್ತ ಹಿರಿಯ ಅಧಿಕಾರಿ ವೆಂಕಟಸ್ವಾಮಿ ಅವರ ವರದಿಯೂ ಇದೆ. ಸರ್ಕಾರಕ್ಕೆ ಈಗ ಮಾಹಿತಿಯ ಕೊರತೆ ಇಲ್ಲ. ಆದರೂ ಭೂಮಿಯ ಆಕ್ರಮಣದ ತೆರವಿನ ಕೆಲಸ ನಡೆಯುತ್ತಿಲ್ಲ. ಈ ಸಮಸ್ಯೆ ನಿಜಕ್ಕೂ ದಶಕಕ್ಕೂ ಹೆಚ್ಚಿನ ಅವಧಿಯಷ್ಡು ಹಳೆಯದು. ಮಂಗಳವಾರ ಸಮಸ್ಯೆಯ ನಿವಾರಣೆಗೆ ಒತ್ತಾಯಪಡಿಸಿ, "ರಾಜ್ಯದ ಆತ್ಮಸಾಕ್ಷಿ" ದೊರೆಸ್ವಾಮಿ, ವಿ.ಟಿ. ರಾಮಸ್ವಾಮಿ, ಯಲ್ಲಪ್ಪರೆಡ್ಡಿ ಅವರಂತಹ ಪ್ರತಿಷ್ಠಿತರು ವಿಧಾನ ಸೌಧದಲ್ಲಿ ಸತ್ಯಾಗ್ರಹ ನಡೆಸಿದಾಗ, ಅವರಿಗೆ ಕಾನೂನು ಮಂತ್ರಿ ಜಯಚಂದ್ರ ಅವರು ಇಂತಹ ಪ್ರಕರಣಗಳ ತನಿಖೆಗೆ ವಿಶೇಷ ನ್ಯಾಯಾಲಯಗಳನ್ನು ರಚಿಸುವ ನಿರ್ಧಾರವನ್ನು ಕಾರ್ಯಗತಗೊಳಿಸುವುದರಲ್ಲಿ ಆಸಕ್ತಿ ವಹಿಸುವ ಭರವಸೆ ನೀಡಿದ್ದು ಒಳ್ಳೆಯ ಬೆಳವಣಿಗೆ.
ಸಚಿವರು ನಾಡಿನ ಹಿರಿಯರಿಗೆ ನೀಡಿರುವ ಈ ಆಶ್ವಾಸನೆಯನ್ನು ಜಾರಿಗೊಳಿಸುವುದರಲ್ಲಿ ವಿಳಂಬವಾಗಬಾರದು. ಇದಕ್ಕೂ ಲೋಕಸಭೆ ಚುನಾವಣೆಗೂ ಏನೇನೂ ಸಂಬಂಧವಿಲ್ಲ. ಸರ್ಕಾರ ನೀಡಿರುವ ವಚನವನ್ನು ಪಾಲಿಸಲೇಬೇಕು. ಈಗಾಗಲೇ ಸಾಕಷ್ಟು ಸಮಯವಾಗಿದೆ. ಇನ್ನು ವಿಳಂಬ ಸಲ್ಲದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

