ನಾ.ಡಿಸೋಜ ಅವರು ಡಾ.ಎಸ್.ಎಲ್. ಭೈರಪ್ಪ ಅವರ ಬಗ್ಗೆ...
ಸಂಕೇತ್ ಹೆಗಡೆ, ಮಲ್ಲೇಶ್ವರಂ, ಬೆಂಗಳೂರು
ನಾ.ಡಿಸೋಜ ಅವರು ಡಾ.ಎಸ್.ಎಲ್. ಭೈರಪ್ಪ ಅವರ ಬಗ್ಗೆ ಉಡಾಫೆಯಿಂದ ಮಾತನಾಡಲು ಕಾರಣವೇನು?
ನಾಡಿ ಮಿಡಿತದಲ್ಲಿ ಹೆಚ್ಚುಕಮ್ಮಿ ಆಗಿರಬೇಕು.
ಕಾಲ್ಸೆಂಟರ್ ಶಿವಕುಮಾರ, ನಂಜಾಪುರ, ರಾಮನಗರ
ಸ್ವಘೋಷಿತ ದೇವಮಾನವ ನಿತ್ಯಾನಂದನಿಗೆ ಅಮಾವಾಸ್ಯೆಯ ಭಯವೇಕೆ?
ಹೊರಬಿದ್ದ ಸಿ.ಡಿ.ಯಲ್ಲಿದ್ದ ದೃಶ್ಯಗಳು ಅಮಾವಾಸ್ಯೆ ರಾತ್ರಿಯದ್ದೇ ಇರಬೇಕು!
ಕೊ.ಸು. ನರಸಿಂಹಮೂರ್ತಿ, ಚಾಮರಾಜನಗರ, ಮೈಸೂರು
ಕೋರ್ಟಿನ ಮುಂದೆಯೇ ಸರಗಳ್ಳರಿದ್ದಾರೆ ಎಚ್ಚರಿಕೆ ಎನ್ನುವ ಫಲಕವನ್ನು ಪೊಲೀಸರು ಹಾಕಿದ್ದೇಕೆ?
ಕಳ್ಳರು ಜಾಮೀನು ಪಡೆದು ಹೋಗುವಾಗಲೇ ಕೈಚಳಕ ತೋರಿಸಿಯಾರು ಅಂತ.
ಫ್ಯಾಷನ್ ಡಿಸೈನರ್ ಮಧು, 9945737427
ಹೂವಿಗಿಂತಾ ಕೋಮಲವಾದ ಹೆಣ್ಣು ಜತೆಗಿರುವಾಗ, ಪ್ರಥಮ ರಾತ್ರಿಯಂದು ಹೂವಿನ ಹಾಸಿಗೆ ಬೇಕಾ?
ದಡ್ಡ. ಅದು ನಿನಗಾಗಿ ಅಲ್ಲ. ಅವಳಿಗಾಗಿ!
ಶಿಲ್ಪಿ ರಮೇಶ್, ಸಂತೇಮಾಳ, ಬನ್ನೂರು
ಕೆಲವು ಭಕ್ತರು ತಮ್ಮ ಇಷ್ಟದೇವರಿಗೆ ಕರೆದುಕೋ ನಿನ್ನ ಸನ್ನಿಧಿಗೆ ಎಂದು ಹೇಳುತ್ತಿರುತ್ತಾರಲ್ಲ?
ಅದು ದೇವರನ್ನು ಹೆದರಿಸುವ ತಂತ್ರ!
-ಬಾಣಭಟ್ಟ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

