ಜೋರು ಇರುವವರೆಲ್ಲ ಒಂದಲ್ಲಾ ಒಂದು ಸಲ ಜಾರಿರುತ್ತಾರೆ
ಜಾರಿಗೆ ಬರುವ ಮುನ್ನವೇ ಪಸೆ ಹಾಯುವುದು
ಜಾರರ ಸಹಜ ಸ್ವಭಾವ
ನಯವಾದ ವಸ್ತುವಿನ ಗುಣ ಸ್ವಭಾವಗಳಲ್ಲೊಂದು
ನಾಲಿಗೆ ಜಾರುತ್ತದೆ. ಹಾಗಾಗಿ ಜಾರಿಕೊಳ್ಳುವುದೂ ತಿಳಿದಿರಬೇಕಾಗುತ್ತದೆ
ಇದು ಮನಸ್ಸಿನ ಹುಟ್ಟುಗುಣ. ಹಾಗಾಗಿ 'ಎಲ್ಲಿ ಜಾರಿತೋ ಮನವು....' ಎಂದು ಆಗಾಗ ವಿಮರ್ಶಿಸಿಕೊಳ್ಳುತ್ತಿರಬೇಕು
ಜರೆ ಆವರಿಸಿದವರು ಜಾರುವುದೂ ಜೋರೇ
ತೂರಿಕೊಳ್ಳಲೊಂದು ಸುಲಭೋಪಾಯ, ಜಾರುವುದು ಮತ್ತು ಜಾರಿಸುವುದು
ಜರಾಯುಜರೆಲ್ಲರ ಸಹಜ ಸ್ವಭಾವ
ಸುಲಭದಲ್ಲಿ ಝಣ ಝಣ ಹಣ ಮಾಡಲು ಹೋಗಿ ಜುಗಾರಿ ಆಡಲು ತೊಡಗುವಿಕೆ
ಜಾಗರೂಕತೆ ತಪ್ಪಿದಾಗ ಇದ್ದ ಜಾಗದಲ್ಲೇ ಇದ್ದರೂ ಜಾರುತ್ತದೆ
ಹದಿಹರೆಯದಲ್ಲಿ ಕಾಲು ಜಾರಿದರೆ ಹೊಟ್ಟೆ ಮುಂದೆ ಬರುತ್ತದೆ
ವಿಶ್ವನಾಥ ಸುಂಕಸಾಳ