ಸಿ. ನಾಗರಾಜ, ಅರದೋಟ್ಲು,
ಭದ್ರಾವತಿ
ಕೋತಿಯ ಹೃದಯ ಕೊಂಬೆ ಮೇಲೆ. ಹುಡುಗರ ಹೃದಯ?
ರಂಭೆ ಮೇಲೆ!
ರವಿಕುಮಾರ ಜಿ.ಬಿ. 9449669697
ಟಿವಿ ನ್ಯೂಸ್ಗೂ ಪೇಪರ್ ನ್ಯೂಸ್ಗೂ ವ್ಯತ್ಯಾಸವೇನು?
ಟಿವಿಯಲ್ಲಿ ನಿಮಗಾಗಿ ಬೇರೆಯವರು ಸುದ್ದಿ ಓದುತ್ತಾರೆ. ಪತ್ರಿಕೆ ನೀವೇ ಓದಬೇಕು.
ಶ್ರೀಮತಿ ಕಲ್ಪನಾ, ಮೈಸೂರು
ಹೆಣ್ಣನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಫ್ಯಾಷನ್ ಡಿಸೈನರ್ ಮಧುವಿಗೆ ನನ್ನ ಮಗಳನ್ನು ಕೊಡೋಣ ಅಂತ?
ಮಗಳು ಹೊಸ ಹೊಸ ಫ್ಯಾಷನ್ ಮಾಡ್ಕೊಂಡು ತಿರುಗಾಡ್ಲಿ ಬಿಡಿ.
ಎ.ಎಚ್. ಪ್ರಕಾಶ ಕುಮಾರ, ಶಿಕಾರಿಪುರ, 9886016328
ಫಿಲಂ ಥಿಯೇಟರ್ಗೂ ಆಪರೇಷನ್ ಥಿಯೇಟರ್ಗೂ ಏನು ವ್ಯತ್ಯಾಸ?
ಥಿಯೇಟರ್ನಲ್ಲಿ ಕರೆಂಟ್ ಹೋದ್ರೆ ಶೀಟಿ, ಆಪರೇಷನ್ ಥಿಯೇಟರ್ನಲ್ಲಿ ಕರೆಂಟ್ ಹೋದ್ರೆ ಪಟಾಕಿ!
-ಬಾಣಭಟ್ಟ