ಇದು ಕೆಲವೊಮ್ಮೆ ಆಗುವಂಥದ್ದು, ಇನ್ನು ಕೆಲವೊಮ್ಮೆ ಮಾಡಿಕೊಳ್ಳುವಂಥದ್ದು
ಇದು ಶುದ್ಧ ಸ್ವಯಾರ್ಜಿತ
ಟೆನ್ಶನ್ ಮಾಡಿಕೊಂಡರೆ ಏನೂ ಆಗುವುದಿಲ್ಲ. 'ಇನ್ನಷ್ಟು ಟೆನ್ಶನ್' ಅನ್ನು ಹೊರತುಪಡಿಸಿ
ಟೆನ್ಶನ್ ಮಾಡಿಕೊಳ್ಳುವುದು ಯಾವ ಸಮಸ್ಯೆಗೂ ಪರಿಹಾರವಲ್ಲ. ಹಾಗಂತ ಯಾವುದಕ್ಕೂ ಟೆನ್ಶನ್ನೇ ಮಾಡಿಕೊಳ್ಳದಿದ್ದರೆ ಸಮಾಜ ಬೇಜವಾಬ್ದಾರಿತನ ಎನ್ನುತ್ತದೆ
ಟೆನ್ಶನ್- ಇದು ಈ ಜನ್ಮದಲ್ಲಿ ಸಿಗುವ ಪೂರ್ವಜನ್ಮದಲ್ಲಿ ಅನುಭವಿಸದೇ ಉಳಿದ ಕರ್ಮಗಳ 'ಪೆನ್ಶನ್'
ಮೈಕ್ ಟೈಸನ್ನನ್ನೂ ಬಿಡದ್ದು, ಮೈಕ್ ಹಚ್ಚಿದರೆ ಹೆಚ್ಚುವಂಥದ್ದು
ಗೊಂದಲ ಗುಹೆಯೊಳಗೆ ಅವಿತಿರುವ ರಾಕ್ಷಸ. ಸಾಕ್ಷರರಿಗೇ ಹೆಚ್ಚು ಅಟಕಾಯಿಸಿಕೊಳ್ಳುವ ವ್ಯಾಧಿ
ಹೆಚ್ಚುತ್ತಿರುವ ನಗರೀಕರಣವೇ ಇದು ಹೆಚ್ಚಲು ಕಾರಣ
ವಿಚಾರ ಮಾಲಿನ್ಯದ ಮುನ್ಸೂಚನೆ
ತಲೆ ತಲಾಂತರದಿಂದಲೂ ತಲೆಯಿಂದ ತಲೆಗೆ ಹರಿದು ಬರುತ್ತಿರುವ ತಲೆ ಕೊರಕ
ತಡವಾದೀತೆಂದು ಗಡಬಡಿಸುವಂಥ ಒತ್ತಡದ ಜೀವನ ಶೈಲಿಯ ಉಪ ಉತ್ಪನ್ನ
-ವಿಶ್ವನಾಥ ಸುಂಕಸಾಳ
vishwasunkasal@yahoo.com