ಹಸಿವು ಹೊಟ್ಟೆಗೆ ಮಾತ್ರ ಆಗುವುದಿಲ್ಲ. ಮನಸಿಗೂ ಒದಗುತ್ತದೆ
ಕೆಲವರಿಗೆ ಹಣದ ಹಸಿವು, ಹಲವರಿಗೆ ಮನ್ನಣೆಯ ಹಸಿವು
ಬುದ್ಧಿಯ ಹಸಿವು ಹೆಚ್ಚಿಸಿಕೊಂಡವ 'ನಮಸ್ಕಾರ ಬುದ್ದೀ..'ಎನಿಸಿಕೊಳ್ಳುತ್ತಾನೆ
ಗಂಡಸರಿಗೆ ಹೊಟ್ಟೆಯ ಹಸಿವು ಹೆಚ್ಚು. ಹೆಂಗಸರಿಗೆ ಬಟ್ಟೆಯ ಹಸಿವು
ಸೋತ ರಟ್ಟೆ ಮತ್ತು ಖಾಲಿ ಹೊಟ್ಟೆಯ ಪರಿಣಾಮ
ಬೇಕು ಬೇಕು ಮತ್ತು ಬೇಕು ಎಂಬುದೇ ಇದರ ಮೂಲ ಮಂತ್ರ
ಕಾಮದ ಹಸಿವು ಶುರುವಾದರೆ ವಿವೇಕ ಕೋಮಾ ಸ್ಥಿತಿಗೆ ತೆರಳುತ್ತದೆ
ಮನವನ್ನು ಕ್ಷೋಭೆಗೊಳಿಸಿ ಬಾಧಿಸುವ ವ್ಯಾಧಿ ಈ ಕ್ಷುಧಾ
ಮಾನ, ಅಭಿಮಾನ ತೊರೆದರೆ ಹಸಿವು ತೊರೆದೀತು
ಇದಕ್ಕೆ ಮಾನ ಮರ್ಯಾದೆಗಳೆಲ್ಲ ಅನ್ವಯಿಸುವುದಿಲ್ಲ. ಇದು ಬಂದವರಿಗೂ....
ತುಂಬಿದ ಹೊಟ್ಟೆಗೆ ಮೇಲೆರಡು ಲಡ್ಡು. ಹಸಿದ ಹೊಟ್ಟೆಗೆ ತಣ್ಣೀರು ಪಟ್ಟೆ
ನಮ್ಮ ಹಸಿವನ್ನು ನಾವೇ ನೀಗಿಸಿಕೊಳ್ಳುವುದೇ ಸ್ವಾವಲಂಬನೆ
ಜಠರವೆಂಬ 'ಜರಠ'ನ ನೀಗದ ಚಪಲ
-ವಿಶ್ವನಾಥ ಸುಂಕಸಾಳ
vishwasunkasal@yahoo.com