ನಿಮ್ಮ ಬಳಿ ಬಣ್ಣ ಬಣ್ಣದ ರೆಕ್ಕೆಗಳಿದ್ದರೆ ಅವನ್ನು ಕಟ್ಟಿಡುವುದಕ್ಕೆ ಜಗತ್ತು ಬಯಸುತ್ತದೆ. ಹೀಗಾಗಿ ಅವನ್ನು ಜಗತ್ತಿಗೆ ತೋರಿಸುವುದಕ್ಕೆ ಮೊದಲು ಸಾಕಷ್ಟು ಎತ್ತರದಲ್ಲಿ ಹಾರುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.
- ಚೇತನ್ ಭಗತ್
ಬದುಕಿನಲ್ಲಿ ಶೇ. 30ರ ಕಡಿತ ಬೇಕೇ? ಹಾಗಾದರೆ ಸಿಗರೇಟ್ ಸೇವನೆ ಪ್ರಾರಂಭಿಸಿ.
- ಪವನ್
ಪುಟಿನ್ ಜತೆಗೆ ಮೋದಿ ಮಾತುಕತೆ ಫಲಪ್ರದ ಎಂದು ಹೇಳಲಾಗುವುದಿಲ್ಲ. ಏಕೆಂದರೆ ತನಗೆ ತೆಂಡುಲ್ಕರ್ ಗೊತ್ತಿಲ್ಲ ಎಂದು ಹೇಳಿದ್ದಕ್ಕೆ ಶರಪೋವಾ ಸ್ಸಾರಿ ಕೇಳಿಲ್ಲ!
- ಟ್ರಿಕಿ ಡೋನರ್
ವೇದ ಪ್ರಕಾಶ್ ವೈದಿಕ್ಗೆ ಧನ್ಯವಾದ ಹೇಳಬೇಕು. ಏಕೆಂದರೆ, 'ಸಚಿನ್ ತೆಂಡುಲ್ಕರ್ ಗೊತ್ತಾ' ಅಂತ ಹಫೀಜ್ ಸಯೀದ್ಗೆ ಪ್ರಶ್ನೆ ಕೇಳಲಿಲ್ಲವಲ್ಲ.
- ಮೈ ಭೀ ಎಂಜಿನಿಯರ್
ಸೊಹೈಲ್: ಭಾಯ್! ನಂಗೊಂದು ಒಳ್ಳೇ ಕತೆ ಸಿಕ್ಕಿದೆ. ಸಿನಿಮಾ ಮಾಡೋಣ್ವಾ?
ಸಲ್ಮಾನ್: ಏನಂದೆ? ನನ್ನ ಸಿನಿಮಾಕ್ಕೆ ಕತೆ ಇರ್ಬೇಕಾ? ನನ್ನ ಬ್ರಾಂಡ್ ಹಾಳು ಮಾಡ್ಬೇಕು ಅಂತಿದೀಯೋನೋ?
- ಡೊನಾಲ್ಡ್ ಡಕ್