ಸಾರ್ವಜನಿಕ ಆಸ್ತಿ

Updated on: 

ಸಾರ್ವಜನಿಕ ಆಸ್ತಿ
    ಇದು ಯಾರೊಬ್ಬರ ಆಸ್ತಿಯೂ ಅಲ್ಲ ಹಾಗಾಗಿಯೇ ಯಾರೊಬ್ಬರ ಆಸ್ಥೆಯೂ ಇದರ ಮೇಲಿರುವುದಿಲ್ಲ
    ಯಾರು ಬೇಕಾದರೂ ಹಾಳುಗೆಡವಬಹುದಾದದ್ದು
    ಪ್ರತಿಭಟನೆಯ ಕಾವಿಗೆ ಸುಲಭದಲ್ಲಿ ತುತ್ತಾಗುವ ಆಸ್ತಿ
    ನಾಸ್ತಿಕರಿಗೂ ಈ ಆಸ್ತಿ ಸಂಬಂಧಿಸಿದ್ದೇ
    ಇದು ಯಾರಪ್ಪನ ಸ್ವತ್ತೂ ಅಲ್ಲ, ದೇಶದ ಎಲ್ಲ ಪುತ್ರರಿಗೆ ಸೇರಿದ್ದು
    ಸಾರ್ವಜನಿಕ ಆಸ್ತಿಗೆ ಯಾವ ಜನಕನೂ ಇಲ್ಲ
    ಜನರಿಂದ ಕರ ಸ್ವೀಕರಿಸಿ, ಜನರ ಸಹಾಯಕ್ಕೆ ಕರ ಜೋಡಿಸುವ ಉದ್ದೇಶವುಳ್ಳದ್ದು
    ಇದಕ್ಕೆ ಬಾಡಿಗೆ ಇಲ್ಲ
    ದೊಂದಿ ಗದ್ದಲದಲ್ಲಿ ಅತಿ ಹೆಚ್ಚು ಘಾಸಿಗೊಳಗಾಗೋದು ಇದೇ
    'ಸರ್ವಜನಾಂಗದ ಶಾಂತಿಯ ತೋಟ.. ಹಿಂದೂ ಕ್ರೈಸ್ತ ಮುಸಲ್ಮಾನ ಪಾರಸಿಕ ಜೈನರುದ್ಯಾನ'
    ತಲೆಮಾರಿನಿಂದಲೂ ಅಲೆಮಾರಿಗಳ ಆಶ್ರಯ ತಾಣ
    ಬಸ್ ನಿಂದ ಬಸ್‌ಸ್ಟ್ಯಾಂಡ್‌ವರೆಗೆ, ರಸ್ತೆಯಿಂದ ಹಿಡಿದು ಮಾರ್ಗದೀಪದ ವರೆಗೆ...
    ಕೇವಲ ಬಳಸುವುದಕ್ಕೆ ಸೀಮಿತವಾಗದೇ, ಉಳಿಸುವುದಕ್ಕೂ ಕಾಳಜಿ ತೋರಬೇಕು
    ಪ್ರಾಪರ್ ಮೇಂಟೇನನ್ಸ್ ಮಾಡಲ್ಪಡದ ಪಬ್ಲಿಕ್ ಪ್ರಾಪರ್ಟಿ
    ಒಂದರ್ಥದಲ್ಲಿ ಇದಕ್ಕೆ ಜಗವೇ ನಾಥ ಹಾಗಾಗಿ ಇದು ಸನಾಥ. ಆದರೂ ಇದು ಅನಾಥ
    ಬಿಟ್ಟಿ ಉಪಯೋಗಿಸಿ ಬಿಟ್ಟು ಬಿಡಬಹುದಾದದ್ದು

ವಿಶ್ವನಾಥ ಸುಂಕಸಾಳ
vishwasunkasal@yahoo.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com