ಸಿ.ನಾಗರಾಜ, ಅರದೋಟ್ಲು, ಭದ್ರಾವತಿ
ಎಲ್ಲಾ ಆಶ್ವಾಸನೆಗಳಿದ್ದರೂ ಲೋಕಪಾಲ ಮಸೂದೆ ಬಗ್ಗೆ ಚುನಾವಣೆಯಲ್ಲಿ ಪ್ರಚಾರವೇ ಕೇಳಿಸಲಿಲ್ಲ?
ಪಕ್ಷದಿಂದ ಹೊರಹೋಗುವವರನ್ನು ತಡೆಯಲು 'ರೋಕಪಾಲ' ಮಸೂದೆ ಜಾರಿ ಮಾಡಿ ಅಂತ ಕೇಜ್ರಿವಾಲ್ ಹೊಸ ಒತ್ತಾಯ!
ಬರ್ಕಲಿ ರಮೇಶ, ಮಂಡ್ಯ, 9008741348
ಇವತ್ತಿನ ದಿನ ಮಾನವೀಯ ಮೌಲ್ಯಗಳು ಕುಸಿಯಲು ಕಾರಣವೇನು?
ಮಾನವನ ಮೌಲ್ಯಗಳೇ ಕುಸಿದಿರುವುದು!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಅರಿತರೆ ಪ್ರೇಮ, ಬೆರೆತರೆ ಪ್ರಣಯ, ಸುಮ್ಮನಿದ್ರೆ?
ನಿರುದ್ಯೋಗಿ!
ವಿ. ಹೇಮಂತಕುಮಾರ, ಬೆಂಗಳೂರು, 9901739104
ನಮ್ಮ ಆಫೀಸಿನ ಮೇಡಂ ಒಬ್ಬರು ಆಗಾಗ್ಗೆ ತಮ್ಮ ಸೀರೆಯ ಸೆರಗನ್ನು ಸರಿಪಡಿಸಿಕೊಳ್ಳುತ್ತಿರುತ್ತಾರಲ್ಲಾ?
ನೀನು ಆಫೀಸಲ್ಲಿ ಸದಾ ಚೋಲಿ ಕೇ ಪೀಛೆ ಕ್ಯಾಹೆ ಅಂತ ಹಾಡ್ತಿರ್ತೀಯಂತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಒಗ್ಗಟ್ಟಿನಲ್ಲಿ ಒಲವಿದೆ. ಇಕ್ಕಟ್ಟಿನಲ್ಲಿ?
ಬೆವರ ವಾಸನೆಯಿದೆ!
ಬಾಣಭಟ್ಟ