ವಿ. ಹೇಮಂತಕುಮಾರ, ಬೆಂಗಳೂರು, 9901739104
ಕೆಲವು ಸಿನಿಮಾ ನಟಿಯರು ಮದುವೆ ಆಗದೇ ಇರಲು ಕಾರಣವೇನು?
ನಿಜ ಜೀವನದಲ್ಲಿ ನಟಿಸೋದಕ್ಕಿಂತ ಕ್ಯಾಮರಾ ಮುಂದೆ ನಟಿಸೋದೇ ಸುಲಭ ಅಂತ!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9901739104
ಹೆಂಗಸಿನ ಬದಲು ಗಂಡಸು ಗರ್ಭಧರಿಸುವಂತಿದ್ದರೆ?
ಗಂಡಸರ ಹೆರಿಗೆ ಆಸ್ಪತ್ರೆ ಎಂದು ಬೋರ್ಡ್ ಹಾಕಬೇಕಾಗುತ್ತಿತ್ತು!
ಫ್ಯಾಷನ್ ಡಿಸೈನರ್ ಮಧು, 9945737427
ರಾತ್ರಿಯನ್ನು ಪ್ರೀತಿಸದವರು ಪ್ರೀತಿಯನ್ನು ಪ್ರೀತಿಸಲಾರರು ಅಲ್ವಾ?
ರಾತ್ರಿಯೇ ಪ್ರೀತಿಸಬೇಕು ಎಂಬುದು ಹಳೆ ಕಾಲದ ನಿಯಮ!
ಎ.ಎಚ್. ಪ್ರಕಾಶಕುಮಾರ್, ಶಿಕಾರಿಪುರ, 9886016328
ಹಿಂದೆ ಮಕ್ಕಳು ಹಿರಿಯರಿಗೆ ಹೆದರುತ್ತಿದ್ದರು. ಈಗ ಮಕ್ಕಳೇ ಹಿರಿಯರಿಗೆ ಹೆದರಿಸುತ್ತಾರಲ್ಲಾ?
ದೊಡ್ಡವರೆಲ್ಲ ಜಾಣರಲ್ಲ, ಚಿಕ್ಕವರೆಲ್ಲ ಕೋಣರಲ್ಲ!
ಬಾಣಭಟ್ಟ