ಇನ್ಫೋಸಿಸ್ ಹೊಸ ಯುಗ
ಸುಮಾರು ಮೂರು ದಶಕಗಳ ಹಿಂದೆ, ಏಳು ಮಂದಿ ತಜ್ಞರ ಸಹಭಾಗಿತ್ವದಲ್ಲಿ ಸ್ಥಾಪನೆಯಾದ ಇನ್ಫೋಸಿಸ್ ಸಂಸ್ಥೆಯಲ್ಲಿ ಈಗ ಸಂಸ್ಥಾಪಕರ ನಾಯಕತ್ವದ ಯುಗ ಮುಗಿದು ಅಪ್ಪಟ ತಜ್ಞರ ಹೊಸ ನಾಯಕತ್ವದ ಯುಗ ಆರಂಭವಾಗಲಿದೆ.
ಶನಿವಾರವೇ ನಾರಾಯಣಮೂರ್ತಿ, ಶಿಬುಲಾಲ್, ರೋಹನ್ ಮೂರ್ತಿ ಅವರೆಲ್ಲ ತಮ್ಮ ಸ್ಥಾನಗಳನ್ನು ತೆರವು ಮಾಡಲಿದ್ದಾರೆ. ಹೊಸ ನಾಯಕತ್ವ ವಿಶಾಲ ಸಿಕ್ಕಾ ಅವರ ನೇತೃತ್ವದಲ್ಲಿ ಆಗಸ್ಟ್ ಒಂದರಿಂದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದೆ.
ನಿಜ. ಇದು ಒಂದು ತಂತ್ರಜ್ಞಾನ ಆಧರಿತ ಉದ್ಯಮಕ್ಕೆ ಸಂಬಂಧಪಟ್ಟ ವಿಚಾರ. ಅದಕ್ಕೆ ರಾಷ್ಟ್ರೀಯ ಔದ್ಯಮಿಕ - ತಾಂತ್ರಿಕ ಮಹತ್ವ ದೊರೆತಿರುವುದು, ಭಾರತೀಯ ತಂತ್ರಜ್ಞಾನ ಆಧರಿತ ಉದ್ಯಮ ವಲಯ ಈಗ ಕವಲು ದಾರಿಯಲ್ಲಿ ನಿಂತಿದ್ದು, ನಾಯಕತ್ವದ ಸ್ವರೂಪದ ಬದಲಾವಣೆಗೆ ಹಾತೊರೆಯುತ್ತಿರುವ ಹಿನ್ನೆಲೆಯಲ್ಲಿ ಇನ್ಫೋಸಿಸ್ನ ಈ ಪ್ರಯೋಗಕ್ಕೆ ಔದ್ಯಮಿಕ ಮಹತ್ವವಿರುವುದು.
ಇದುವರೆಗೆ ಈ ಉದ್ಯಮ ನಡೆದುಬಂದ ದಾರಿ, ನಿರ್ವಹಿಸಿದ ಹೊಣೆಗಾರಿಕೆ ಹಾಗೂ ಆಧುನಿಕ ಜಾಗತಿಕ ಪ್ರಗತಿಯ ಹೊಣೆಗಾರಿಕೆಗೂ ವ್ಯತ್ಯಾಸವಿದೆ. ಹೊಸ ಜವಾಬ್ದಾರಿಯನ್ನು ನಿರ್ವಹಿಸಿ, ಪರಿಸ್ಥಿತಿಯನ್ನು ನಿಭಾಯಿಸಲು ಹೊಸ ಬಗೆಯ ನಾಯಕತ್ವವೇ ಬೇಕು.
ಈಗ ಕ್ಯಾಲಿಫೋರ್ನಿಯಾದಲ್ಲಿರುವ ವಿಶಾಲ ಸಿಕ್ಕಿ ಅವರು ಈಗಾಗಲೇ ಈ ವಲಯದಲ್ಲಿ ಪಳಗಿದ ವ್ಯಕ್ತಿ. ಇನ್ಫೋಸಿಸ್ನಲ್ಲಿ ತಂತ್ರಜ್ಞಾನ, ದುಡಿಮೆಯ ನಿಷ್ಠೆ, ಹೊಸ ಆವಿಷ್ಕಾರಗಳಿಗೆ ಬಡತನವಿಲ್ಲ. ಆದರೆ ಅದಕ್ಕೆ ಹೊಸ ದಿಕ್ಕನ್ನು ತೋರಿಸಬಲ್ಲ ನವ ನಾಯಕತ್ವ ಬೇಕಾಗಿದೆ. ಅದೇ ಈಗಿನ ಪ್ರಯೋಗದ ದೊಡ್ಡ ಅಂಶ. ಆ ಪ್ರಯೋಗ ಯಶಸ್ವಿಯಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

