ಹೆದ್ದಾರಿಯಲ್ಲಿ ಕೋಲ್ಯನ ಕಾರನ್ನು ನಿಲ್ಲಿಸಿದ ಪೊಲೀಸ್ ಕಾರ್ ಚೆಕ್ ಮಾಡಿ ಹೇಳಿದ: "ಇವತ್ತು ಸುರಕ್ಷತಾ ದಿನ. ನೀನು ಸುರಕ್ಷಿತವಾಗಿ ಕಾರ್ ಓಡಿಸುತ್ತಿರೋದ್ರಿಂದ ಸಾವಿರ ರುಪಾಯಿ ಬಹುಮಾನ ಕೊಡ್ತೀನಿ. ಏನು ಮಾಡ್ತೀಯ ಈ ಸಾವಿರ ರುಪಾಯಿಯಲ್ಲಿ?
ಕೋಲ್ಯ(ಖುಷಿಯಿಂದ): ಡ್ರೈವಿಂಗ್ ಲೈಸೆನ್ಸ್ ಮಾಡಿಸಿಕೊಳ್ತೀನಿ!
ಹಿಂದಿನ ಸೀಟಿನಲ್ಲಿದ್ದ ಅವನ ಅಮ್ಮ: ಇವನ ಮಾತು ಕೇಳಬೇಡಿ ಸಾರ್. ಕುಡಿದಾಗ ಏನೇನೋ ಮಾತಾಡ್ತಾನೆ...
ಮಲಗಿದ್ದ ಅವನಪ್ಪ ಎಚ್ಚೆತ್ತು: ನನಗೆ ಗೊತ್ತಿತ್ತು, ಕದ್ದ ಕಾರಿನಲ್ಲಿ ಹೆಚ್ಚು ದೂರ ಹೊಗೋಕ್ಕೆ ಆಗೋಲ್ಲ ಅಂತ!