ಕೋಲ್ಯ ತನ್ನ ಮನೆಯ ಬಾಗಿಲನ್ನು ಕಿತ್ತು ಹೆಗಲ ಮೇಲೆ ಹೊತ್ತುಕೊಂಡು ಹೊರಟ.
ದಾರಿಹೋಕ: ಏನ್ ಸಾರ್, ಬಾಗಿಲು ಮಾರ್ತಾ ಇದೀರಾ?
ಕೋಲ್ಯ: ಇಲ್ಲ ಸಾರ್, ಬೀಗ ತೆಗೆಸಬೇಕು. ಕೀಲಿ ಕಳೆದುಹೋಗಿದೆ.
ದಾರಿಹೋಕ(ನಗುತ್ತಾ): ಎಂಥಾ ಮೂರ್ಖತನ ಮಾಡ್ಬಿಟ್ರಿ ಸರ್, ಮನೆಗೆ ಯಾರಾದ್ರೂ ಕಳ್ಳರು ನುಗ್ಗಿದ್ರೆ ಏನು ಮಾಡ್ತೀರಾ?
ಕೋಲ್ಯ: ಅದ್ಹೆಂಗೆ ನುಗ್ತಾರೆ? ಬಾಗಿಲು ನನ್ನ ಹತ್ರ ಇದೆ!