ಬಾರಿ ಬಾರಿ ಶಾಪಿಂಗ್ ಮಾಡಬೇಕು ಎಂಬ ಆಸೆಗೆ ತಣ್ಣೀರೆರಚುವ ಸಂಗತಿ
ದರ ಏರಿಕೆಯ ಪರಿಣಾಮ
ಬೇಡಿಕೆ ಜಾಸ್ತಿ, ನೀಡಿಕೆ ನಾಸ್ತಿ ಆಗಿದ್ದರ ಫಲಿತ
ಬಾರಿಗೆ ದುಬಾರಿ ಎಂಬ ಶಬ್ದ ಯಾವ ಪರಿಣಾಮವನ್ನೂ ಉಂಟುಮಾಡುವುದಿಲ್ಲ
ದರ್ಬಾರು ನಡೆಸುವವರಿಗೆ ದರ ಏರಿಕೆ ಬಗ್ಗೆ ದರಕಾರು ಇರದಿದ್ದರೆ ಇದೇ ಆಗುತ್ತದೆ
ಶ್ರೀಸಾಮಾನ್ಯನ ಶ್ರೀಯನ್ನೆಲ್ಲ ಕರಗಿಸುವ ಪೆಡಂಬೂತ
ಗೊಣಗುವಿಕೆ ಮತ್ತು ಒಣಗುವಿಕೆ. ಇವೆರಡೇ ಸಾಮಾನ್ಯರಿಗಿರುವ ಮಾರ್ಗ
ಬೆಲೆ ಏರುತ್ತದೆ ಮತ್ತು ಬಲ ಇಳಿಯುತ್ತದೆ
ಮೇಲಕ್ಕೇರಬೇಕು ಎಂಬ ಏಕೈಕ ಉನ್ನತಿಯ ಗುರಿ ಇಟ್ಟುಕೊಂಡಂಥದ್ದು
ಕೊಳ್ಳಬೇಕೆಂಬ ಆಸೆಗೆ ಕೊಳ್ಳಿ ಇಡುವ, ಕೊಂಡರೆ ಹಣವನ್ನೆಲ್ಲ ಕೊಳ್ಳೆ ಹೊಡೆಯುವ ಕೊಳಕ
ರೋಟಿಯ ಆಸೆಯನ್ನೂ ಕೈಬಿಡುವಂತೆ ಮಾಡುವ ರೇಟು ಏರಿಕೆ
ವಿಶ್ವನಾಥ ಸುಂಕಸಾಳ