ಸಂಪಾದಕೀಯ

ಶ್ರೀರಂಗಪಟ್ಟಣದಲ್ಲಿ ನಿಲುಗಡೆ ಬೇಕು

Published On :

ಶ್ರೀರಂಗಪಟ್ಟಣ ಒಂದು ಪ್ರವಾಸಿ ಕೇಂದ್ರವಾಗಿದ್ದರೂ ಸಹ ಇಲ್ಲಿ ಸಂಚರಿಸುವ (ಚಾಮುಂಡಿ, ರಾಜರಾಣಿ ಹೊರತುಪಡಿಸಿ) ಯಾವುದೇ ಎಕ್ಸ್ ಪ್ರೆಸ್ ರೈಲುಗಳಿಗೆ ನಿಲುಗಡೆ ನೀಡದಿರುವುದು ಆಕ್ಷೇಪಾರ್ಹ ಸಂಗತಿ. ಬೆಳಗ್ಗೆ ಬೆಂಗಳೂರಿನಿಂದ 5 ಎಕ್ಸ್‌ಪ್ರೆಸ್ ರೈಲುಗಳು ಮೈಸೂರಿಗೆ ಹೋಗುತ್ತವೆ. ಆದರೆ ಒಂದೂ ಎಕ್ಸ್‌ಪ್ರೆಸ್ ರೈಲಿಗೂ ಶ್ರೀರಂಗಪಟ್ಟಣದಲ್ಲಿ ನಿಲುಗಡೆಯಿರುವುದಿಲ್ಲ. ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ಬಂದು ಹೋಗುವ ಪ್ರಯಾಣಿಕರು ಪ್ರವಾಸಿಗರು ನರಕಯಾತನೆ ಅನುಭವಿಸುತ್ತಿದ್ದಾರೆ. ಇನ್ನು ಶ್ರೀರಂಗಪಟ್ಟಣದಿಂದ ಬೆಂಗಳೂರಿಗೆ ಹೋಗಲು ಮಧ್ಯಾಹ್ನ 2.40ರ ನಂತರ ಸಂಚರಿಸುವ 5 ಎಕ್ಸ್ ಪ್ರೆಸ್ ರೈಲುಗಳಿಗೂ ಶ್ರೀರಂಗಪಟ್ಟಣದಲ್ಲಿ ನಿಲುಗಡೆ ಇರುವುದಿಲ್ಲ. ಅನಾದಿ ಕಾಲದಿಂದ ನಿಲುಗಡೆಯಿದ್ದ ಸಂಜೆ ಸಮಯದ ರೈಲು ನಿಲುಗಡೆ ರದ್ದು ಮಾಡಿರುತ್ತಾರೆ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಇಲ್ಲಿನ ಜನಪ್ರತಿನಿಧಿಗಳು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದ್ದರಿಂದ ಕರ್ನಾಟಕದವರೇ ಆದ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆಯವರು 21 ಬೋಗಿಗಳಿರುವ ಎಕ್ಸ್ ಪ್ರೆಸ್ ರೈಲುಗಳಿಗೆ ಶ್ರೀರಂಗಪಟ್ಟಣದಲ್ಲಿ ಒಂದು ನಿಮಿಷ ನಿಲುಗಡೆಗೆ ಆದೇಶ ಹೊರಡಿಸಲು ರೈಲ್ವೆ ಅಧಿಕಾರಿಗಳಿಗೆ ತಿಳಿಸಿ ಪ್ರಯಾಣಿಕರ ಹಿತ ಕಾಯಬೇಕೆಂದು ವಿನಂತಿ.
-ಶಿವರಾಮ್ ಮತ್ತು ಇತರರು

ಇದೆಂಥ ಭಾಷೆ?

ಇತ್ತೀಚಿನ ಪತ್ರಿಕೆಗಳಲ್ಲಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಡುತ್ತಿರುವ ಹಾಗೂ ಕಾಂಗ್ರೆಸ್‌ನ ಇತರರು ಆಡುತ್ತಿರುವ ಭಾಷೆಯನ್ನು ನೋಡಿದರೆ ವಾಕರಿಕೆ ಬರುತ್ತಿದೆ. ಬಿಜೆಪಿಯ ಪ್ರಧಾನಿ ಅಭ್ಯರ್ಥಿಯನ್ನು ನರಹಂತಕ ಎಂದು ಪದೇ ಪದೇ ಸಂಬೋಧಿಸುವುದು ಅಸಹ್ಯಕರ. ಇವರು ಭ್ರಷ್ಟಾಚಾರವನ್ನು ವಿರೋಧಿಸಿ ಅಧಿಕಾರಕ್ಕೆ ಬಂದರು. ಬಿಜೆಪಿಯ ಒಳಜಗಳದಿಂದಲೂ ಕೂಡ. ಆದರೆ ಈಗಾಗಲೇ ಸಂಪುಟದಲ್ಲಿ ಭ್ರಷ್ಟರು ತುಂಬಿದ್ದಾರೆ. ಅಕ್ಕಿಯ ಭಾಗ್ಯ, ಹಾಲುಭಾಗ್ಯ, ಎಲ್ಲದರಲ್ಲೂ ಭ್ರಷ್ಟಾಚಾರ ತುಂಬಿದೆ. ಇವರು ಬಿಎಸ್‌ವೈಗೆ ಬೈಯ್ಯುತ್ತಿದ್ದಾರೆ, ನರೇಂದ್ರ ಮೋದಿಯ ಪಕ್ಕದಲ್ಲಿದ್ದಾರೆ ಎಂದು. ಆದರೆ ಸೋನಿಯಾ ಗಾಂಧಿಯ ಅಳಿಯ ರಾಬರ್ಟ್ ವಾದ್ರಾನ ಪ್ರಸ್ತಾಪವೇ ಇಲ್ಲ. 2ಜಿ, ಕಾಮನ್‌ವೆಲ್ತ್, ಕೋಲ್‌ಗೇಟ್, ಟೆಟ್ರಾಟ್ರಕ್ ಎಲ್ಲವಕ್ಕೂ ಸಹ ಸಿದ್ದು ಉತ್ತರ ಕೊಡಲಿ.
-ರಾಜೇಂದ್ರಕುಮಾರ್. ಎಸ್., ಬೆಂಗಳೂರು

ರಾಷ್ಟ್ರಪತಿಗಳ ದಿಟ್ಟ ನಿಲುವು   
 
ಇತ್ತೀಚೆಗೆ ಮುಗಿದ ಲೋಕಸಭೆ ಅಧಿವೇಶನದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂದಿಸಿದ ಆರು ಮಸೂದೆಗಳನ್ನು ತೆಲಂಗಾಣ ಗದ್ದಲದಿಂದಾಗಿ ಮಂಡಿಸಲು ಸಾಧ್ಯವಾಗಿಲ್ಲ ಎಂಬ ನೆಪವೂಡ್ಡಿ ಅವುಗಳನ್ನು ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೆ ತರಲು ಕೇಂದ್ರ ಸರ್ಕಾರ ಮುಂದಾಗಿತ್ತು. ಇವು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯ ಕನಸಿನ ಸುಗ್ರೀವಾಜ್ಞೆಗಳಾಗಿದ್ದವು ಎಂಬುದು ವಿಶೇಷ. ದೇಶಕ್ಕೆ ಆಶಯಗಳು ಎಷ್ಟೇ ಒಳ್ಳೆಯದಾಗಿದ್ದರೂ, ಕಾಯ್ದೆಗಳನ್ನು ಸಂಸತ್ತಿನಲ್ಲಿ ಚರ್ಚಿಸಿದ ನಂತರವೇ ಜಾರಿಗೆ ತರಬೇಕು. ಸುಗ್ರೀವಾಜ್ಞೆ ಆಯ್ಕೆ ಇರುವುದು ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಬಳಸುವುದಕ್ಕೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆರು ಸುಗ್ರೀವಾಜ್ಞೆಗಳ ಆಶಯಕ್ಕೆ ಅಡ್ಡಗಾಲು ಹಾಕಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸ್ವಾಗತಾರ್ಹ ಕೆಲಸವನ್ನೇ ಮಾಡಿದ್ದಾರೆ.
-ಮಲ್ಲಿಕಾರ್ಜುನಗೌಡ ಬಾಳನಗೌಡ್ರ, ಗದಗ

ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.