ಕಾತ್ರಾಳರ ತೋಟಕ್ಕೆ ಸಿಎಂ ಹೋದದ್ದು ತಪ್ಪೇ?
ಪರಸ್ಪರ ಹೊಂದಿಕೆಯಾಗದ 'ರಾಜಕೀಯ' ಸಿದ್ಧಾಂತ, ಧ್ಯೇಯ ಉದ್ದೇಶಗಳ ಭಿನ್ನ ಮತೀಯ ವ್ಯಕ್ತಿಗಳಿಂದಲೇ ತುಂಬಿದ್ದರೂ, ಯಾವ ರಾಜಕೀಯ ಪಕ್ಷವೂ ಮತ್ತೊಂದು ಪಕ್ಷದ ವಿರೋಧಿ ಆಗಿರಬಹುದೇ ಹೊರತು, 'ಶತ್ರು ' ಆಗಿರಲೇಬೇಕು ಎಂಬ ಯಾವ ನಿಯಮವೂ ಇಲ್ಲ. ರಾಜ್ಯದ ಅಥವಾ ದೇಶದ ಆಡಳಿತದ ಚುಕ್ಕಾಣಿಯನ್ನು ಹಿಡಿದಿರುವ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಸೇರಿದ ಮುಖ್ಯಮಂತ್ರಿಗಳಾಗಲೀ ಅಥವಾ ಮಂತ್ರಿಗಳಾಗಲೀ, ಶಾಸಕರಾಗಲೀ ವಿರೋಧ ಪಕ್ಷವೊಂದರ ಮುಂದಾಳುಗಳ ಅಥವಾ ಕಾರ್ಯಕರ್ತರ ಮನೆಗೋ, ತೋಟಕ್ಕೋ ಅಥವಾ ಅವರ ಉದ್ಯಮವೊಂದು ಇದ್ದರೆ ಆ ಜಾಗಕ್ಕೋ ಹೋಗಿ ಬರುವುದು ಅಪರಾಧವಾ? ಹಾಗೆ ವಿರೋಧ ಪಕ್ಷದವರ ತೋಟ ಇತ್ಯಾದಿಗಳಿಗೆ ಭೇಟಿ ಕೊಡುವ ಮುಖ್ಯಮಂತ್ರಿ ಅಥವಾ ಇತರ ರಾಜಕಾರಣಿಗಳು ತಮ್ಮ ಸರ್ಕಾರ ಅಥವಾ ಪಕ್ಷದ ವಿರುದ್ಧ ಪಿತೂರಿ ನಡೆಸಲು ಹೋಗಿದ್ದಾರೆ ಎಂದು ಹೇಳುವುದು ಎಷ್ಟು ಸರಿ? ಅವರ ಆ ಭೇಟಿ ಆಡಳಿತ ಪಕ್ಷಕ್ಕೆ ಹಾನಿಯನ್ನೆಸಗುವಂಥ ಕೃತ್ಯ ಹೇಗಾಗುತ್ತದೆ? ಅಕಾಲಿಕ ಮಳೆಯಿಂದಾಗಿ ನಂದಗಾಂವ್ ಗ್ರಾಮದ ಹಲವರ ತೋಟಗಳಿಗೆ ಆಗಿರುವ ಹಾನಿ ಯಾವ ಪರಿಯದು ಎಂದು ಪರಿಶೀಲಿಸಲು ಹೋದ ಮುಖ್ಯಮಂತ್ರಿಗಳು ಅದೇ ಗ್ರಾಮದ ಬಿಜೆಪಿ ಕಾರ್ಯಕರ್ತ ಮುತ್ತಣ್ಣ ಕಾತ್ರಾಳರವರ ತೋಟಕ್ಕೂ ಭೇಟಿಕೊಟ್ಟು ಪರಿಶೀಲಿಸಿದ್ದರೆ ಅದನ್ನು ಮುಖ್ಯಮಂತ್ರಿಗಳ 'ಪಕ್ಷಭೇದ ರಹಿತ' ಕರ್ತವ್ಯ ನಿರ್ವಹಣೆ ಎಂದು ಭಾವಿಸಿ ಮೆಚ್ಚಬೇಕೇ ಹೊರತು, ಕಾಂಗ್ರೆಸ್ ವಿರೋಧೀ ಚಟುವಟಿಕೆ ಎಂದು ಭಾವಿಸಬೇಕಾ? ಸಿದ್ದರಾಮಯ್ಯನವರು ರಾಜ್ಯದ ಮುಖ್ಯಮಂತ್ರಿಗಳೋ ಅಥವಾ ಕೇವಲ ಕಾಂಗ್ರೆಸ್ನ ಮುಖ್ಯಮಂತ್ರಿಗಳೋ? ಮತ್ತೊಂದು ಪಕ್ಷಕ್ಕೆ ಸೇರಿದವರ ಅಥವಾ ಆ ಪಕ್ಷದತ್ತ ಒಲವಿರುವ ಪ್ರಜೆಗಳ ಕುಂದು ಕೊರತೆಗಳ ಬಗ್ಗೆ ಗಮನ ಹರಿಸುವುದು ಮುಖ್ಯಮಂತ್ರಿಗಳ ಕರ್ತವ್ಯ ಹೌದೋ ಅಲ್ಲವೋ? ಅದೂ ಅವರ ಕರ್ತವ್ಯವೇ ಎಂದಾದರೆ ಮುಖ್ಯಮಂತ್ರಿಗಳು ಕಾತ್ರಾಳರ ತೋಟಕ್ಕೆ ಭೇಟಿ ಕೊಟ್ಟಿದ್ದಕ್ಕಾಗಿ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಏಕೆ? ಈ ಘಟನೆಯಲ್ಲಿ ವರ್ಗಾವಣೆಯ ದಂಡನೆಗೆ ಒಳಗಾಗುವಂಥಾ ಯಾವ ಅಪರಾಧವನ್ನು ತಹಸೀಲ್ದಾರರು ಮಾಡಿದ್ದಾರೆ?
-ಬೊ. ನಾ. ಕೃಷ್ಣಮೂರ್ತಿ, ಸಾಗರ
ಅಭ್ಯರ್ಥಿಗಳಿಗೆ ಮೈವಿವಿ ನ್ಯಾಯ ಒದಗಿಸಲಿ
ಕಳೆದ ಡಿಸೆಂಬರ್ 8, 2013 ರಂದು ಮೈಸೂರು ವಿಶ್ವವಿದ್ಯಾಲಯವು ಕೆ-ಸೆಟ್ (ಓ-ಖಊಖಿ) ಸ್ಪರ್ಧಾತ್ಮಕ ಪರೀಕ್ಷೆಯನ್ನು ರಾಜ್ಯಾದ್ಯಂತ ನಡೆಸಿತ್ತು. ಈ ಪರೀಕ್ಷೆ ಪದವಿ ಕಾಲೇಜು ಹಾಗೂ ವಿವಿ ಉಪನ್ಯಾಸಕ ವೃತ್ತಿ ಆಯ್ಕೆಗೆ ಅರ್ಹತಾ ಪರೀಕ್ಷೆಯಾಗಿದ್ದು, ಇಂತಹ ಉನ್ನತ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳಲ್ಲಿಯೇ ಮುದ್ರಣ ಹಾಗೂ ಇತರೆ ದೋಷಗಳಿರುವುದು ವಿಪರ್ಯಾಸ. ಈ ಕುರಿತು ಮೈವಿವಿಗೆ ಅನೇಕ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದ್ದರು. ಆದರೆ, ಆ ಎಲ್ಲಾ ಆಕ್ಷೇಪಣೆಗಳನ್ನು ಸಮರ್ಪಕವಾಗಿ ಪರಿಶೀಲಿಸದೆ, ಅಂತರ್ಜಾಲದಲ್ಲಿ ಅಂತಿಮ ಉತ್ತರಗಳನ್ನು ಪ್ರಕಟಿಸಿ, ಗೊಂದಲ ಮೂಡಿಸಿದೆ. ಮೈಸೂರು ವಿಶ್ವವಿದ್ಯಾಲಯಕ್ಕೆ ಅನೇಕ ಅಭ್ಯರ್ಥಿಗಳು ಆಕ್ಷೇಪಣೆ ಸಲ್ಲಿಸಿದಾಗ ಆಂಗ್ಲ ಭಾಷೆಯ ಪತ್ರಿಕೆ-3 ರ 39ನೇ ಪ್ರಶ್ನೆಯಲ್ಲಿ (ಆ) ಖಟಜಟ್ಛಿಜ ಜ್ಛಿಡ್ಟಿಟಿ ಎಂಬ ಕಾಗುಣಿತದ ದೋಷವನ್ನು ಪರಿಗಣಿಸಿ ಅದಕ್ಕೆ ಕೃಪಾಂಕ ನೀಡಿರುವುದು ಸ್ವಾಗತಾರ್ಹ. ಅದೇ ರೀತಿಯಾಗಿ ಆಂಗ್ಲಭಾಷೆಯ ಪತ್ರಿಕೆ-3 ರ 28ನೇ ಪ್ರಶ್ನೆಯಲ್ಲಿ ತಪ್ಪಾಗಿ ಮುದ್ರಿತವಾಗಿರುವ ಆಂಗ್ಲ ಸಾಹಿತ್ಯ ಚರಿತ್ರೆಯಲ್ಲಿ ಇಲ್ಲದೇ ಇರುವ ಲೇಖಕನ ಹೆಸರು ಡ್ಯಾನಿಯಲ್ ಡಿಫೋಲ್ (ಉಛಟಿಜಟ ಉಜಜ್ಟಿಟ) ಹಾಗೂ 73ನೇ ಪ್ರಶ್ನೆಯ (ಂ) -ಇಛಟಣಛಜ ಎಂದು ತಪ್ಪಾಗಿ ಮುದ್ರಿತವಾಗಿದೆ. ಕಾಗುಣಿತಗಳಿಗಾಗಿಯೇ ವಿಶೇಷ ಮಹತ್ವ ಹೊಂದಿರುವ ಆಂಗ್ಲಭಾಷೆಯಲ್ಲಿನ ಇಂತಹ ತಪ್ಪುಗಳಿಗೆ ಅಭ್ಯರ್ಥಿಗಳು ಹೊಣೆಗಾರರೇ? ಆದ್ದರಿಂದ ಈ ತರಹದ ಕಾಗುಣಿತ ದೋಷಗಳಿಗೆ ಕೃಪಾಂಕಗಳನ್ನು ನೀಡಿ ಸಾವಿರಾರು ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕೆಂದು ವಿನಂತಿಸುತ್ತೇವೆ.
- ಪ್ರೊ.ಬಿ.ವಿ.ಏಣಗಿ, ಸವದತ್ತಿ, ಪ್ರೊ.ಶಿವಾನಂದ ಹಿರೇಮಠ, ಚಿಕ್ಕೋಡಿ
ವಾದಿರಾಜ ಮಾ. ಇನಾಮದಾರ, ಧಾರವಾಡ, ಪ್ರೊ.ಶಿವಪ್ಪ ಹಾರುಗೊಪ್ಪ, ಹುಕ್ಕೇರಿ
ಪ್ರೊ.ಆನಂದ ಕಡ್ಲೆಪ್ಪನವರ, ಅಮ್ಮಿನಭಾವಿ
ಕನ್ನಡಪ್ರಭ, ನಂ.1 ಕ್ವೀನ್ಸ್ ರಸ್ತೆ, ಬೆಂಗಳೂರು-560001.
email: anisikeprabha@gmail.com
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

