ಸಂಪಾದಕೀಯ

ಪಾರದರ್ಶಕತೆ ಬೇಕು

Published On :

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಂಗಳೂರು ಕಡೆಗೆ ರಾಷ್ಟ್ರೀಯ ಹೆದ್ದಾರಿಯಿಂದ ಹೋಗುವ ರಸ್ತೆಯಲ್ಲಿ ಚಲಿಸುವ ವಾಹನಗಳು ತೆರೆಬೇಕಾದ ಸುಂಕದಲ್ಲಿ ಸುಮಾರು ಮೂರೂವರೆ ಪಟ್ಟು ಏರಿಕೆಯಾಗಿರುವುದರ ವಿರುದ್ಧ ಬಳಕೆದಾರರ ಪ್ರತಿಭಟನೆ ಸಹಜವಾದ ಪ್ರಕ್ರಿಯೆ.
ಈ ಪ್ರಮಾಣದ ಏರಿಕೆಯನ್ನು ಪ್ರತಿಭಟಿಸಲು ಲಾರಿ, ಟ್ಯಾಕ್ಸಿ ಹಾಗೂ ಇತರ ವಾಹನಗಳ ಮಾಲಿಕರು ಅನಿರ್ದಿಷ್ಟ ಅವಧಿಯ ಮುಷ್ಕರದ ಬೆದರಿಕೆಯನ್ನೂ ಹಾಕಿದ್ದಾರೆ.
ಈ ಸುಂಕವನ್ನು ವಿಧಿಸುವುದು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ. ಹೆದ್ದಾರಿಯ ನಿರ್ಮಾಣ ಹಾಗೂ ಮೇಲ್ವಿಚಾರಣೆಯ ವೆಚ್ಚ ವಿಪರೀತವಾಗಿ ಹೆಚ್ಚಿರುವುದರಿಂದ, ಸುಂಕದ ಪ್ರಮಾಣದ ಏರಿಕೆ ಅನಿವಾರ್ಯವೆನ್ನುವುದು ಪ್ರಾಧಿಕಾರದ ಪ್ರಮುಖರ ಮಾತು. ಈಗಾಗಲೇ ವಿಮಾನ ನಿಲ್ದಾಣದ ಬಳಿಯ ಹಳ್ಳಿಯ ಜನರಿಗೆ ಆಡಳಿತ ಶುಲ್ಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿ, ಅವರ ಹೊರೆಯನ್ನು ಇಳಿಸಲಾಗಿದೆ. ವಾಹನಗಳ ಮಾಲಿಕರ ವಿಚಾರದಲ್ಲಿ ಸದ್ಯಕ್ಕೆ ಯಾವ ರಿಯಾಯಿತಿಯನ್ನೂ ತೋರಿಸುವ ಪ್ರಸ್ತಾಪ ಈಗ ಇಲ್ಲ.
ಪ್ರಾಧಿಕಾರದ ಈ ನೀತಿಯ ವಿರುದ್ಧದ ಪ್ರತಿಭಟನೆ ಮುಂದವರಿಯುವ ಸಂಭವವಿದೆ. ಪ್ರಾಧಿಕಾರ, ಸುಂಕದ ಏರಿಕೆಯ ಅನಿವಾರ್ಯತೆಯ ವಿಚಾರದಲ್ಲಿ ಹೇಳಿಕೆ ನೀಡಿ, ಏರಿಕೆಯ ಪ್ರಮಾಣಕ್ಕೆ ಯಾವ ವಿವರಣೆಯನ್ನೂ ನೀಡಿಲ್ಲ. ಪಾರದರ್ಶಕ ಆಡಳಿತದ ದೃಷ್ಟಿಯಿಂದ ಅಂತಹ ಹೇಳಿಕೆಯನ್ನು ನೀಡಿದ ಅನಂತರವೇ ಸುಂಕದ ದರವನ್ನು ಏರಿಸಬೇಕಾಗಿತ್ತು. ಈಗಲೂ ಪ್ರಾಧಿಕಾರದಿಂದ ಜನ ವಿವರಣೆಯನ್ನು ಅಪೇಕ್ಷಿಸುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.