ಸಂಪಾದಕೀಯ

72 ದಿನಗಳ ಕಾರ್ಯಕ್ರಮ

Published On :

ಈಗ ನಡೆಯುತ್ತಿರುವ ಲೋಕಸಭೆ ಚುನಾವಣೆ ಇದುವರೆಗೆ ನಡೆದ ಅತಿ ದೀರ್ಘವಾದ ಚುನಾವಣೆ. ಚುನಾವಣೆಯ ಪ್ರಕ್ರಿಯೆಯ ಪ್ರಥಮ ಪ್ರಕಟಣೆ, ಹಾಗೂ ಮತಗಳ ಎಣಿಕೆಯ ನಡುವೆ ಇದ್ದ ಅಂತರ 72 ದಿನಗಳು.
ಅಂದರೆ ಎರಡು ತಿಂಗಳ ಮೇಲೆ ಹನ್ನೆರಡು ದಿನಗಳ ಅವಧಿಯಲ್ಲಿ ಚುನಾವಣೆಯ ಆಚಾರ ಸಂಹಿತೆ ಜಾರಿಯಲ್ಲಿರುವುದರಿಂದ ಕೇಂದ್ರ ಸರ್ಕಾರದ ಯಾವ ಮಾತು ಹಾಗಿರಲಿ, ರಾಜ್ಯ ಸರ್ಕಾರವೂ ಯಾವ ಪ್ರಮುಖ ನಿರ್ಧಾರವನ್ನೂ ಕೈಗೊಳ್ಳುವಂತಿಲ್ಲ.
ಒಂದು ಅರ್ಥದಲ್ಲಿ ಈ ಅವಧಿಯಲ್ಲಿ ಕಾಯಿದೆ ಪಾಲನೆಯನ್ನು ಬಿಟ್ಟು ಸರ್ಕಾರಗಳ ಬೇರೆ ಯಾವ ಕೆಲಸವೂ ನಡೆಯುವುದೇ ಇಲ್ಲ ಎಂದಾಯಿತು.
ಯಾವುದೇ ಪ್ರಭುತ್ವಕ್ಕಾದರೂ ಇದು ಅಸಹನೀಯವಾದದ್ದು. ನಿಜ. ಚುನಾವಣೆಯ ಕಾಲದಲ್ಲಿ ಅನೇಕ ಶಕ್ತಿಗಳು ನಾನಾ ಜನಾಂಗಗಳ ನಡುವೆ ದ್ವೇಷವನ್ನು ಉಕ್ಕಿಸುವ ಪ್ರಯತ್ನ ಮಾಡಬಹುದು. ಅದನ್ನು ನಿಗ್ರಹಿಸುವುದು ಸುಲಭವಲ್ಲ. ಆದರೆ ಆ ಕಾರಣದಿಂದ ಸರ್ಕಾರಕ್ಕೆ ಸರ್ಕಾರವನ್ನೇ ಸ್ಥಗಿತಗೊಳಿಸುವುದು ಸರಿಯಲ್ಲ.
ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ದೇಶದಲ್ಲಿ ಚುನಾವಣೆಗಳು ನಡೆಯಲೇಬೇಕು. ಆ ಪ್ರಕ್ರಿಯೆಯನ್ನು ಕಾಯಿದೆಯ ಚೌಕಟ್ಟಿನಲ್ಲಿ ಕ್ಷಿಪ್ರವಾಗಿ ಮುಗಿಸುವುದು ಚುನಾವಣೆ ಆಯೋಗದ ಕರ್ತವ್ಯ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.