ಬಗೆ
= ಆಕಾರ, ಈಕಾರಗಳೆಂಬ ಪ್ರಕಾರ
= ವಿವಿಧ ವಿಧಿ ವಿಧಾನಗಳ ವಿಧ
= ಮಾಲ್ಗಳಿಗೆ ಹೋದಾಗ ತಲೆ ಕೆಡಿಸುವ ವೆರೈಟಿ
= ಬಗೆ ಬಗೆಯ ಬಗೆಗಳಿವೆ. ಬಗೆ ಹಲವು. ಪ್ರಕಾರ ಒಂದೇ
= ನರಸಿಂಹ ಹಿರಣ್ಯ ಕಶಿಪುವಿನ ಹೊಟ್ಟೆ ಬಗೆದದ್ದೊಂದು ಬಗೆ
= ಉಂಡ ಮನೆಗೆ ಎರಡು ಬಗೆಯುವುದು ಮತ್ತೊಂದು ಬಗೆ
= ಬಗೆಗಣ್ಣ ನೋಟ ಮಗದೊಂದು ಬಗೆ
= ಲಘು - ಬಗೆಯಿಂದ ಓಡಾಡುವುದು ಬಗೆಗಳಲ್ಲೇ ಆರೋಗ್ಯದಾಯಕ ಬಗೆ
= ನಾವು ಬಗೆದಂತೆ ವಿಧಿಯೂ ಬಗೆದಿದ್ದರೆ ಪ್ರಪಂಚದಲ್ಲಿ ಇಷ್ಟೊಂದು ಬಗೆಗಳಿರುತ್ತಿರಲಿಲ್ಲ
= ಬೇಗೆ ಹೋಗಲಾಡಿಸುವ ರೀತಿಯೂ ಒಂದು ಬಗೆ
= ವಾರಿಗೆಯವರೊಡನೆ ವ್ಯವಹರಿಸುವ ರಿವಾಜು ಮತ್ತೊಂದು ಬಗೆ
= ಜ್ಞಾನಗಣಿಯ ಬಗೆಯ ಬೇಕು, ಅಜ್ಞಾನವನ್ನು ಕಿತ್ತೊಗೆಯಬೇಕು
= ಹಗೆ ಸಾಧಿಸಲು ತಿಳಿದಿರಬೇಕಾದ ರೀತಿ
= ಸಾಹಿತ್ಯದಲ್ಲಿ ಹಲವು ಬಗೆ. ಒಳ್ಳೆಯ ಸಾಹಿತ್ಯ, ಕೆಟ್ಟ ಸಾಹಿತ್ಯ ಹಾಗೂ ಬಕೆಟ್ ಸಾಹಿತ್ಯ
-ವಿಶ್ವನಾಥ ಸುಂಕಸಾಳ
vishwasunkasal@yahoo.com