ಸಪ್ನಾ ಚೌಧರಿಯನ್ನು ರಾಹುಲ್ ಗಾಂಧಿ ಮದುವೆಯಾಗಲಿ: ಬಿಜೆಪಿ ಶಾಸಕ

ಭೋಜ್‌ಪುರಿ ನಟಿ, ಗಾಯಕಿ ಹಾಗೂ ನೃತ್ಯಪಟು ಸಪ್ನಾ ಚೌಧರಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯು ಗೊಂದಲ ಮೂಡಿಸಿರುವ ಹೊತ್ತಲ್ಲೇ ....
ರಾಹುಲ್ ಗಾಂಧಿ ಮತ್ತು ಸಪ್ನಾ ಚೌಧರಿ
ರಾಹುಲ್ ಗಾಂಧಿ ಮತ್ತು ಸಪ್ನಾ ಚೌಧರಿ
ಬಲ್ಲಿಯಾ: ಭೋಜ್‌ಪುರಿ ನಟಿ, ಗಾಯಕಿ ಹಾಗೂ ನೃತ್ಯಪಟು ಸಪ್ನಾ ಚೌಧರಿ ಅವರು ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿಯು ಗೊಂದಲ ಮೂಡಿಸಿರುವ ಹೊತ್ತಲ್ಲೇ ಬಿಜೆಪಿ ಶಾಸಕರೊಬ್ಬರು ಆಡಿರುವಂಥ ಮಾತುಗಳು ತೀವ್ರ ವಿವಾದಕ್ಕೆ ಗ್ರಾಸವಾಗಿದೆ.
ಸೋನಿಯಾ ಗಾಂಧಿಯಂತೆಯೇ ಸಪ್ನಾ ಚೌಧರಿ ಕೂಡ ನೃತ್ಯಗಾತಿ. ರಾಹುಲ್‌ ಗಾಂಧಿಯವರೇ, ಇಟಲಿಯಲ್ಲಿ ನೃತ್ಯ ಮಾಡುತ್ತಿದ್ದ ಸೋನಿಯಾರನ್ನು ನಿಮ್ಮ ಅಪ್ಪ ರಾಜೀವ್‌ ಗಾಂಧಿ ಮದುವೆಯಾದಂತೆ, ಸಪ್ನಾ ಚೌಧರಿಯನ್ನು ನೀವು ಮದುವೆಯಾಗಿ’ ಎಂದು ಲ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಹೇಳಿಕೆ ನೀಡಿದ್ದಾರೆ. 
ಅಲ್ಲದೆ, ದೇಶವು ಒಬ್ಬ ನೃತ್ಯಗಾತಿಯನ್ನು ಯಾವತ್ತೂ ಸ್ವೀಕರಿಸುವುದಿಲ್ಲ ಎಂದೂ ಹೇಳಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com