ದಲಿತ ಮಹಿಳೆಯ ಅತ್ಯಾಚಾರದ ಸುದ್ದಿ ಬಹಿರಂಗವಾದರೆ ಎಲ್ಲಿ ಮತಗಳ ಮೇಲೆ ಎಲ್ಲಿ ಪರಿಣಾಮ ಬೀರುವುದೋ ಎಂದು ರಾಜಸ್ಥಾನದಲ್ಲಿರುವ ಕಾಂಗ್ರೆಸ್ ಸರ್ಕಾರ ಬಾಯಿ ಮುಚ್ಚಿ ಕುಳಿತಿತ್ತು, ಕೇಸನ್ನು ದಾಖಲಿಸಿಕೊಳ್ಳದೆ ಹತ್ತಿಕ್ಕಿ ಹಾಕಲು ಯತ್ನಿಸಿತ್ತು. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು ಎಂದು ಪ್ರಧಾನಿ ಮೋದಿ ಅವರು ಟೀಕಾ ಪ್ರಹಾರ ಮಾಡಿದರು. ನಾನು ಗುಜರಾತ್ ನಲ್ಲಿ ಅತ್ಯಂತ ಸುದೀರ್ಘ ಅವಧಿಗೆ ಮುಖ್ಯಮಂತ್ರಿಯಾಗಿದ್ದೆ, ಕಳೆದ 5 ವರ್ಷಗಳಿಂದ ಭಾರತದ ಪ್ರಧಾನಿಯಾಗಿದ್ದೇನೆ. ನನ್ನ ಬ್ಯಾಂಕ್ ಬ್ಯಾಲನ್ಸ್ ನೋಡಿ. ನನ್ನ ಹೆಸರಲ್ಲಿ ಯಾವುದಾದರೂ ಬಂಗ್ಲೆ ಇದೆಯಾ? ನಾನು ನನಗಾಗಿ ಮತ್ತು ನನ್ನ ಕುಟುಂಬಕ್ಕಾಗಿ ಏನನ್ನೂ ಉಳಿಸಿಲ್ಲ. ನಾನೇನು ಮಾಡಿದ್ದರೂ ಅದು ಇಡೀ ದೇಶಕ್ಕಾಗಿ ಮತ್ತು ಇಲ್ಲಿನ ಜನತೆಗಾಗಿ ಎಂದು ಹೇಳಿದರು.