ಸುದ್ದಿಗೋಷ್ಠಿಯಲ್ಲಿ ಮೋದಿ ವಿರುದ್ಧ ಹರಿಹಾಯ್ದ ಸಿಎಂ, ಇಂದು ದೇಶ ಹಲವಾರು ರೀತಿಯಲ್ಲಿ ಹಿನ್ನಡೆಯನ್ನು ಕಂಡಿದೆ. ಆರ್ಥಿಕ ಪರಿಸ್ಥಿತಿ, ಉದ್ಯೋಗ ಸೃಷ್ಟಿ, ಬಡವರ ಸಮಸ್ಯೆಗಳು, ರೈತರು ಬಿಜೆಪಿ ಸರ್ಕಾರದಲ್ಲಿ ನೊಂದಿದ್ದಾರೆ. ಇವತ್ತಿನ ರಾಜಕೀಯ ಪರಿಸ್ಥಿತಿ ನೋಡಿದರೆ ಅಂದು ಪ್ರಧಾನಿಯಾಗುವ ಅನಿವಾರ್ಯತೆ ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರಿಗೆ ಬಂದಂತೆ ಇಂದು ಕೂಡ ಮತ್ತೊಮ್ಮೆ ಅಂತಹದ್ದೇ ಪರಿಸ್ಥಿತಿ ಬರಬಹುದು, ದೇವೇಗೌಡರೇ ಪ್ರಧಾನಿಯಾಗುತ್ತಾರೆ ಎಂದು ನಾನು ಹೇಳುವುದಿಲ್ಲ, ಆದರೆ ದೇವೇಗೌಡರ ನಾಯಕತ್ವದಲ್ಲಿ ಅವರ ಮಾತಿಗೆ ಗೌರವ ಕೊಟ್ಟು ವಿರೋಧ ಪಕ್ಷಗಳು ಒಟ್ಟು ಸೇರಿ ಸರ್ಕಾರ ರಚಿಸುವ ವಾತಾವರಣ ದೇಶದಲ್ಲಿ ಬರಬಹುದು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದರು.