ಹಾಸನ: ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನದಲ್ಲಿ ಬಿಜೆಪಿ ಅಭ್ಯರ್ಥಿ ಎ ಮಂಜು ಪರ ಎಸ್ ಎಂ ಕೃಷ್ಣ ಪ್ರಚಾರಕ್ಕಿಳಿದಿದ್ದಾರೆ.
ಇದೇ ಮೊದಲ ಬಾರಿಗೆ ಪ್ರಚಾರಕ್ಕೆ ಎಸ್ ಎಂ ಕೃಷ್ಣ ಭೇಟಿ ಕೊಡುತ್ತಿದ್ದಾರೆ. ಹೆಲಿಕ್ಯಾಪ್ಟರ್ ಮೂಲಕ ಭುವನಹಳ್ಳಿಯ ಹೆಲಿಪ್ಯಾಡ್ ಗೆ ಆಗಮಿಸಿದ ಕೃಷ್ಣ ಅರಸಿಕೆರೆಯ ಗಂಡಸಿ, ಹಗರೆ ಗೆಂಡೆಹಳ್ಳಿ, ಬೇಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.
ಎಸ್,ಎಂ ಕೃಷ್ಣ ಜೊತೆಯಲ್ಲಿ ಮಾಜಿ ಡಿಸಿಎಂ ಆರ್. ಅಶೋಕ್ ಕೂಡ ಹಾಸನಕ್ಕೆ ಆಗಮಿಸಿ ಪ್ರಚಾರ ನಡೆಸುತ್ತಿದ್ದಾರೆ .
ಜೆಡಿಎಸ್ ಜಾತಿ ರಾಜಕಾರಣವನ್ನು ಮಾಡಿಕೊಳ್ಳುತ್ತಿದ್ದು, ಜಾತಿಯ ವಿಷ ಬೀಜವನ್ನು ಬಿತ್ತುತ್ತಿದೆ. ನಾವು ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. ಒಕ್ಕಲಿಗರು ಜೆಡಿಎಸ್‌ಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್‌ನಲ್ಲೂ ಇದ್ದಾರೆ,ಬಿಜೆಪಿಯಲ್ಲೂ ಎಸ್.ಎಂ.ಕೃಷ್ಣ ಅವರಂತಹ ಹಿರಿಯ ನಾಯಕರಿದ್ದಾರೆ. ಒಕ್ಕಲಿಗರೇನು ಜೆಡಿಎಸ್ ಪಕ್ಷವನ್ನು ದತ್ತು ಪಡೆದಿಲ್ಲ ಎಂದು ಕಿಡಿ ಕಾರಿದರು.