ಇಂದು ಮಂಡ್ಯದ ಪೂರಿಗಾಲಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸಿದ ಯಶ್, ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರಚಾರದ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಯಶ್, 'ನಾವು ಮಾತನಾಡಿದರೆ ಸಿನಿಮಾದವರು ಎಂದು ಹೇಳುತ್ತಾರೆ. ಅವರು ಕೂಡ ಮಾತನಾಡುತ್ತಿದ್ದಾರೆ ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ? ಟೀಕಾ ಪ್ರಹಾರ ನಡೆಸಿದರು.