ಗಂಗಾ ಮಾತೆ ಪದ ಬಳಕೆ: ಮೋದಿಗೆ ಕಾಂಗ್ರೆಸ್ ಆಕ್ಷೇಪ
ನವದೆಹಲಿ: ವಾರಾಣಸಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 'ತಾಯಿ ಗಂಗೆ' ಹೆಸರು ಪ್ರಸ್ತಾಪಿಸಿದ್ದಕ್ಕೆ ಕೇಂದ್ರ ಸಚಿವ ಕಪಿಲ್ ಸಿಬಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಅವರು ತನ್ನನ್ನು ತಾನು ದೇವರಾಗಿ ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಸಿಬಲ್ ಆರೋಪಿಸಿದ್ದಾರೆ. ಮೋದಿ ಅವರು ತಾವು ಗಂಗಾ ನದಿಯನ್ನು ಶುದ್ಧಗೊಳಿಸುವುದಾಗಿ ಹೇಳುತ್ತಾರೆ. ಕೈ ಇಟ್ಟ ಕೂಡಲೇ ಗಂಗೆ ಶುದ್ಧವಾಗಲು ಮೋದಿ ಅವರೇನು ದೇವರೇ ಎಂದು ಪ್ರಶ್ನಿಸಿದ್ದಾರೆ.
ವಾದ್ರಾ ಮಾದರಿ ಅಭಿವೃದ್ಧಿ ಅಂದ್ರೇನು?: ಬಿಜೆಪಿ
ಗುಜರಾತ್ ಮಾದರಿಯನ್ನು ಟೀಕಿಸಿದ ಪ್ರಿಯಾಂಕಾ ವಿರುದ್ಧ ಬಿಜೆಪಿ ತಿರುಗಿ ಬಿದ್ದಿದೆ. ಮೊದಲು ಅವರು ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲೂ ರಾಬರ್ಟ್ ವಾದ್ರಾ ವ್ಯವಹಾರ ದುಪ್ಪಟ್ಟು ಹೇಗಾಯ್ತು ಎನ್ನುವ ಕುರಿತುಪ್ರಿಯಾಂಕಾ ಉತ್ತರ ನೀಡಲಿ ಎಂದು ಪಕ್ಷದ ನಾಯಕ ರವಿಶಂಕರ್ ಪ್ರಸಾದ್ ಆಗ್ರಹಿಸಿದ್ದಾರೆ. ಭೂಮಿ ಹಂಚಿಕೆ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಜತೆಗೆ ಚರ್ಚೆಗೂ ಸಿದ್ಧ ಎಂದು ಪ್ರಸಾದ್ ಸವಾಲು ಹಾಕಿದ್ದಾರೆ.
ಸ್ವಯಂಪ್ರೇರಿತ ಕ್ರಮಕ್ಕೆ ಆಗ್ರಹ
ಚುನಾವಣೆ ನಡೆಯುತ್ತಿದ್ದಾಗಲೇ ಮೋದಿ ವಾರಾಣಸಿಯಲ್ಲಿ ರೋಡ್ಶೋ ನಡೆಸಿದ್ದಕ್ಕೆ ಚು. ಆಯೋಗ ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕೆಂದು ಬಿಎಸ್ಪಿ ನಾಯಕಿ ಮಾಯಾವತಿ ಆಗ್ರಹಿಸಿದ್ದಾರೆ.
ನನ್ನನ್ನು ತಡೆಯಲು ಎನ್ಜಿಒಗಳ ಬಳಕೆ
ವಾರಂಗಲ್: ಪಂಜಾಬ್ನಲ್ಲಿ ಸರಣಿ ರ್ಯಾಲಿ ನಡೆಸಿದ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ಮತ್ತೊಮ್ಮೆ ತಿರುಗಿ ಬಿದ್ದಿದ್ದಾರೆ. ನನ್ನನ್ನು ತಡೆಯಲು ಕಾಂಗ್ರೆಸ್ ಸಾಧ್ಯವಾದ ಎಲ್ಲ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ. ಇದರ ಜತೆಗೆ ರೈತರನ್ನು ಓಲೈಸುವ ನಿಟ್ಟಿನಲ್ಲಿ ಒಂದಷ್ಟು ಭರವಸೆಗಳನ್ನೂ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

