ಕಾಂಗ್ರೆಸ್ ಸಿಎಂಗಳಿಂದಲೂ ಅದಾನಿಗೆ ಭೂಮಿ!

ಅಹಮದಾಬಾದ್: ಅದಾನಿ ಗ್ರೂಪ್ಗೆ ಕಡಿಮೆ ಬೆಲೆಗೆ ಭೂಮಿ ನೀಡಿದ್ದು ಕೇವಲ ಗುಜರಾತ್ನ ಮೋದಿ ಸರ್ಕಾರ ಮಾತ್ರವಲ್ಲ, ಅದಕ್ಕೂ ಮೊದಲಿನ ಕಾಂಗ್ರೆಸ್ ಸರ್ಕಾರಗಳೂ ಇದನ್ನೇ ಮಾಡಿದ್ದವು.
ಹೌದು. ಗುಜರಾತ್ ಸರ್ಕಾರವು ಅದಾನಿ ಗ್ರೂಪ್ಗೆ ಚಿಕ್ಕಾಸಿಗೆ ಭೂಮಿ ನೀಡಿದೆ ಎಂಬ ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ಹೀಗೆ ತಿರುಗೇಟು ನೀಡಿದೆ.
ಕಾಂಗ್ರೆಸ್ನ ಇಬ್ಬರು ಸೇರಿದಂತೆ ನಾಲ್ವರು ಸಿಎಂಗಳು ಅದಾನಿ ಗ್ರೂಪ್ಗೆ ಬಂಜರು ಭೂಮಿ ನೀಡಿರುವುದನ್ನು ದಾಖಲೆಗಳೇ ಬಹಿರಂಗಪಡಿಸಿವೆ ಎಂದು ಬಿಜೆಪಿ ಹೇಳಿದೆ. ಮೊದಲು 1993ರಲ್ಲಿ ಚಿಮನ್ಭಾಯ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಮುಂದ್ರಾದ ಬಂಜರುಭೂಮಿಯನ್ನು ಅದಾನಿ ಗ್ರೂಪ್ಗೆ ನೀಡಿತ್ತು. ನಂತರ 1997ರಲ್ಲೂ ವಘೇಲಾ ನೇತೃತ್ವದ ಕಾಂಗ್ರೆಸ್ ಸರ್ಕಾರ ಅದಾನಿ ಗ್ರೂಪ್ಗೆ ಭೂಮಿ ಒದಗಿಸಿತ್ತು. ಅದರಂತೆಯೇ 1997 ಮತ್ತು 2005ರಲ್ಲಿ ಕ್ರಮವಾಗಿ ಕೇಶುಭಾಯ್ ಹಾಗೂ ನರೇಂದ್ರ ಮೋದಿ ಸರ್ಕಾರದಿಂದಲೂ ಅದಾನಿ ಗ್ರೂಪ್ ಭೂಮಿ ಪಡೆದಿತ್ತು ಎಂದು ಬಿಜೆಪಿ ಹೇಳಿದೆ.
ಜತೆಗೆ, ಗ್ರೂಪ್ ಪಡೆದ ಭೂಮಿಯು ವಡೋದರಾ ನಗರದಷ್ಟಿದೆ ಎಂದು ರಾಹುಲ್ ಆರೋಪಿಸಿದ್ದಾರೆ. ಆದರೆ, ಅದಾನಿ ಗ್ರೂಪ್ಗೆ 7,350 ಹೆಕ್ಟೇರ್ ಭೂಮಿ ನೀಡಲಾಗಿದೆ. ವಡೋದರಾದ ವ್ಯಾಪ್ತಿ 15,900 ಹೆಕ್ಟೇರ್ ಎಂದೂ ಬಿಜೆಪಿ ಸ್ಪಷ್ಟಪಡಿಸಿದೆ. ಇದೇ ವೇಳೆ, ಅದಾನಿ ಗ್ರೂಪ್ ಬಂದರು ಹಾಗೂ ಎಸ್ಇಝೆಡ್ಗಾಗಿ ಪಡೆದಿರುವ ಸಂಪೂರ್ಣ ಭೂಮಿಯು ಬಂಜರುಭೂಮಿಯಾಗಿದೆ ಎಂದು ಗ್ರೂಪ್ನ ಅಧಿಕಾರಿಗಳು ತಿಳಿಸಿದ್ದಾರೆ.
ಭೂಮಿ ಕೊಟ್ಟವರ್ಯಾರ್ಯಾರು?
ವರ್ಷ 1993 1997 1999 2006
ಉದ್ದೇಶ ಭೋಗ್ಯಕ್ಕೆ ಬಂದರಿಗೆ ಬಂದರಿಗ ಎಸ್ಇಝೆಡ್
ಒಟ್ಟು ಪ್ರದೇಶ 940 120 700 5,590(ಹೆಕ್ಟೇರುಗಳಲ್ಲಿ)
ದರ (ಪ್ರತಿ 1.5 ಪೈಸೆ 1.20 10.50 14.50ಚದರ ಮೀ.ಗೆ)
ಒಟ್ಟು ವೆಚ್ಚ 1,41,000 15,00,000 8.5 ಕೋಟಿ 57 ಕೋಟಿ
ಸಿಎಂಗಳು ಚಿಮನ್ಭಾಯ್ ಶಂಕರಸಿಂಗ್ ಕೇಶುಭಾಯ್ ನರೇಂದ್ರ ಪಟೇಲ್ ವಘೇಲಾ ಪಟೇಲ್ ಮೋದಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


