ದೇಶ

ಜಾತಿ ರಾಜಕಾರಣದಿಂದ ಬಿಹಾರ ನಿರ್ನಾಮ

ಜಾತಿ ರಾಜಕಾರಣದಿಂದ ಬಿಹಾರ ನಿರ್ನಾಮ
Published On :

ಮುಜಾಪ್ಫರ್‌ಪುರ: ಜಾತಿ ಆಧಾರಿತ ರಾಜಕಾರಣ ಮಾಡುತ್ತಿರುವುದಕ್ಕಾಗಿ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೇ ತರಾಟೆಗೆ ತೆಗೆದುಕೊಂಡಿರುವುದರಿಂದ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ತೀವ್ರ ಮುಖಭಂಗಕ್ಕೆ ಒಳಗಾಗಿದ್ದಾರೆ.
ಲೋಕಸಭೆ ಚುನಾವಣೆ ಕೊನೆಗೊಳ್ಳಲು ಎರಡು ಹಂತದ ಮತದಾನ ಬಾಕಿ ಇರುವಾಗ ನಿತೀಶ್‌ರನ್ನು ತರಾಟೆಗೆ ತೆಗೆದುಕೊಂಡಿರುವ ಸಂಯುಕ್ತ ಜನತಾದಳ ವರಿಷ್ಠ ಶರದ್ ಯಾದವ್, 'ಲಾಲೂ ಪ್ರಸಾದ್ ಯಾದವ್ ಅವರಂತೆಯೇ ಜಾತಿ ಆಧಾರಿತ ರಾಜಕಾರಣದ ಮೂಲಕ ನಿತೀಶ್ ಬಿಹಾರವನ್ನು ನಿರ್ನಾಮ ಮಾಡಿದ್ದಾರೆ' ಎಂದು ಟೀಕಿಸಿದರು. ಭಾನುವಾರ ಇಲ್ಲಿ ಚುನಾವಣಾ ರ್ಯಾಲಿಯಲ್ಲಿ ಭಾಗವಹಿಸಿದ್ದ ಯಾದವ್, 'ನಾವು ಒಳ್ಳೆಯ ವ್ಯಕ್ತಿಗಳಾಗಲು ಪ್ರಯತ್ನಿಸಬೇಕೇ ವಿನಾ ಒಳ್ಳೆಯ ರಾಜಕಾರಣಿಯಾಗಲು ಅಲ್ಲ' ಎಂದು ಹೇಳಿದರು.
ನಂತರ ಕೆಲವೇ ಸಮಯದಲ್ಲಿ ರಾಗ ಬದಲಿಸಿದ ಅವರು, 'ನಾನು ಜಾತೀಯತೆ ವಿರುದ್ಧ ಮಾತನಾಡಿದ್ದೇನೆಯೇ ವಿನಾ ನಿತೀಶ್ ವಿರುದ್ಧ ಅಲ್ಲ. ಜಾತಿ ಆಧಾರಿತ ರಾಜಕಾರಣ ಕೊನೆಗೊಳಿಸಲು ನಿತೀಶ್ ಪ್ರಯತ್ನಿಸಿದ್ದಾರೆ ಎನ್ನುವುದು ನನ್ನ ಮಾತಿನ ಅರ್ಥ. ಅದನ್ನು ತಪ್ಪಾಗಿ ಭಾವಿಸಲಾಗಿದೆ. ನಾನು, ನಿತೀಶ್ ಸೇರಿದಂತೆ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ' ಎಂದು ಸಮಜಾಯಿಷಿ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.