ರಾಜಕಾರಣಿಗಳು ಹಣ ಎಲ್ಲಿಡ್ತಾರೆ?

ನವದೆಹಲಿ: ಮ್ಯೂಚ್ಯುಯಲ್ ಫಂಡ್ಗಳಲ್ಲಿ ಹಣ ಹೂಡುವಂತೆ ಸಾಮಾನ್ಯರನ್ನು ಸೆಳೆಯಲು ಸರ್ಕಾರ ಮತ್ತು ಸೆಬಿಯಂಥ ನಿಯಂತ್ರಣ ಪ್ರಾಧಿಕಾರಗಳು ಇನ್ನಿಲ್ಲದ ಕಸರತ್ತು ಮಾಡುತ್ತಿವೆ. ಆದರೆ ರಾಜಕಾರಣಿಗಳು ಮಾತ್ರ ಈ ರೀತಿಯ ಹೂಡಿಕೆಗೆ ಭಾರಿ ಒಲವು ತೋರುತ್ತಿದ್ದಾರೆ.
ಲೋಕಸಮರದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳಿಂದ ಈ ಸಂಗತಿ ಬೆಳಕಿಗೆ ಬಂದಿದೆ. ಕೆಲವರು ಲಕ್ಷಾಂತರ ರುಪಾಯಿ ಹೂಡಿದ್ದರೆ, ಕೋಟಿಗಟ್ಟಳೆ ರುಪಾಯಿಗಳನ್ನು ತೊಡಗಿಸಿದವರೂ ಇದ್ದಾರೆ.
ಒಡಿಶಾದ ಬಿಜೆಡಿ ಮುಖಂಡ ವೈಜಯಂತ್ ಪಾಂಡಾ ಸೇರಿದಂತೆ ಕೆಲವರು 2009-14ರ ಅವಧಿಯಲ್ಲಿ ಮ್ಯೂಚ್ಯುಯಲ್ ಫಂಡ್ನಲ್ಲಿ ಹೂಡಿಕೆ ಮಾಡಿ ತಮ್ಮ ಹಣ ದುಪ್ಪಟ್ಟು ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ನ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಶಶಿ ತರೂರ್, ಅಂಬಿಕಾ ಸೋನಿ, ಜ್ಯೋತಿರಾದಿತ್ಯ ಸಿಂಧಿಯಾ, ಬಿಜೆಪಿಯ ಅರುಣ್ ಜೇಟ್ಲಿ, ವರುಣ್ ಗಾಂಧಿ, ಹೇಮಾ ಮಾಲಿನಿ, ಟಿಎಂಸಿಯ ಭೈಚುಂಗ್ ಭಾಟಿಯಾ, ಆರ್ಎಲ್ಡಿಯ ಅಮರ್ ಸಿಂಗ್, ಆಮ್ ಆದ್ಮಿ ಅಭ್ಯರ್ಥಿಗಳಾಗಿರುವ ಇನ್ಫೋಸಿಸ್ನ ಮಾಜಿ ಉದ್ಯೋಗಿ ವಿ.ಬಾಲಕೃಷ್ಣನ್, ಬ್ಯಾಂಕಿಂಗ್ ಕ್ಷೇತ್ರದ ಮಾಜಿ ಉದ್ಯೋಗಿ ಮೀರಾ ಸನ್ಯಾಲ್ ಮ್ಯೂಚ್ಯುಯಲ್ ಫಂಡ್ನಲ್ಲಿ ಭಾರಿ ಮೊತ್ತ ಹೂಡಿರುವ ಪ್ರಮುಖರು.
ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ, ಆಮ್ ಆದ್ಮಿ ಪಾರ್ಟಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್, ಪಕ್ಷದ 'ಫೈರ್ ಬ್ರಾಂಡ್' ಉಮಾ ಭಾರತಿ, ಸಮಾಜವಾದಿ ಪಾರ್ಟಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಮ್ಯೂಚ್ಯುಯಲ್ ಫಂಡ್ ಬಗ್ಗೆ ಆಸಕ್ತಿ ತೋರಿಸದ ಪ್ರಮುಖರು.
ಯಾರ ಹೂಡಿಕೆ ಎಷ್ಟು?
ಅಂಬಿಕಾ ಸೋನಿ
ರು. 13.26 ಕೋಟಿ
ಶಶಿ ತರೂರ್
ರು. 9.4ಕೋಟಿ
ವಿ.ಬಾಲಕೃಷ್ಣನ್
ರು. 1ಕೋಟಿ
ಸೋನಿಯಾ ಗಾಂಧಿ
ರು. 81ಲಕ್ಷ
ಜ್ಯೋತಿರಾದಿತ್ಯ ಸಿಂಧಿಯಾ
ರು. 67 ಲಕ್ಷ
ಅಮರ್ ಸಿಂಗ್
ರು. 8.27 ಕೋಟಿ
ಅರುಣ್ ಜೇಟ್ಲಿ
ರು. 2ಕೋಟಿ
ರಾಹುಲ್ ಗಾಂಧಿ
ರು. 82 ಲಕ್ಷ
ಮೀರಾ ಸನ್ಯಾಲ್
ರು. 71 ಲಕ್ಷ
ಭೈಚುಂಗ್ ಭಾಟಿಯಾ
ರು. 4 ಲಕ್ಷ
ಹೇಗೆ ಕೆಲಸ ಮಾಡುತ್ತೆ?
ಮ್ಯೂಚ್ಯುಯಲ್ ಫಂಡ್ನಲ್ಲಿನ ಹಣವನ್ನು ನಿರ್ವಹಣೆ ಮಾಡುವ ಕಂಪನಿಗಳು ಷೇರು ಮತ್ತು ಬಾಂಡ್ಗಳಲ್ಲಿ ಮರುಹೂಡಿಕೆ ಮಾಡುತ್ತವೆ. ಷೇರು ಮಾರುಕಟ್ಟೆಯಲ್ಲಿ ಅವು ತೋರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರತಿಫಲ ಸಿಗುತ್ತದೆ. ಆದರೆ, ನೇರವಾಗಿ ಷೇರು, ಬಾಂಡ್ಗಳಲ್ಲಿ ಹೂಡಿಕೆ ಮಾಡಿದಾಗ ಸಿಗುವ ಪ್ರತಿಫಲಕ್ಕಿಂತ ಮ್ಯೂಚ್ಯುಯಲ್ ಫಂಡ್ನಲ್ಲಿ ಸಿಗುವ ಪ್ರತಿಫಲ ಕಡಿಮೆ. ಮಧ್ಯಮ ವರ್ಗದ ಬಹುದೊಡ್ಡ ಭಾಗ ಮ್ಯೂಚ್ಯುಯಲ್ ಫಂಡ್ಗಳಿಗಿಂತ ಸುರಕ್ಷಿತ ಹೂಡಿಕೆಯಾದ ನಿಶ್ಚಿತ ಠೇವಣಿಗೆ ಒತ್ತು ನೀಡುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


