ರಾಜಕೀಯ ಧಣಿಗಳ ಕಣಿ ಕೇಳೋಣ ಬನ್ನಿ..

ನವದೆಹಲಿ: ಸಮಿಕ್ಷೆಗಳೆಲ್ಲ ಮುಗಿದವು, ಈಗ 'ಭವಿಷ್ಯ'ದಾಟ!
ಭಾಷಣಗಳಲ್ಲಿ ಮೂಢನಂಬಿಕೆ, ಅದೂ ಇದು ಎಂದು ಮಾತನಾಡುವ ನಮ್ಮ ನಾಯಕರು ಹಿಂಬಾಗಿಲಿನಿಂದ ಜ್ಯೋತಿಷಿಗಳ ಕಚೇರಿ ಪ್ರವೇಶಿಸುವುದರಲ್ಲಿ ನಿಸ್ಸೀಮರು ಎಂಬುದು ಎಲ್ಲರಿಗೂ ಗೊತ್ತು. ಆದರೆ ಈಗ ಜ್ಯೋತಿಷಿಗಳೇ ಮುಂದೆ ಬಂದು ರಾಜಕೀಯ ಭವಿಷ್ಯ ನುಡಿಯುತ್ತಿದ್ದಾರೆ.
ಮತ ಎಣಿಕೆಗೂ ಮೊದಲೇ ನಕ್ಷತ್ರ, ಗ್ರಹಗಳ ಎಣಿಕೆ ಆರಂಭವಾಗಿದೆ. ಯಾವ ಪಕ್ಷದ ಹಣೆಬರಹ ಹೇಗಿದೆ, ಯಾವ ನಾಯಕನ ಭವಿಷ್ಯ ಎಲ್ಲಿದೆ ಎಂಬೆಲ್ಲ 'ಲೆಕ್ಕಾಚಾರ'ಗಳ ಕೈಚಳಕಕ್ಕೆ ಈ ಚುನಾವಣೆ ಇಂಬು ನೀಡಿದೆ. ಈ ಬಾರಿಯಂತೂ ಸಾಮಾಜಿಕ ತಾಣಗಳ ಅಬ್ಬರ ಜೋರಾಗಿದೆ. ಜ್ಯೋತಿಷ್ಯಶಾಸ್ತ್ರ ಹೇಳುವವರೂ ಇದೇ ಮಾಧ್ಯಮವನ್ನು ಬಳಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಗಣೇಶಸ್ಪೀಕ್ಸ್.ಕಾಂ ಎಂಬ ವೆಬ್ಸೈಟ್ ಅಂತೂ ಚುನಾವಣೆಯ ಒಟ್ಟಾರೆ ಭವಿಷ್ಯವನ್ನು ನುಡಿದಿದೆ. ಈ ಶಾಸ್ತ್ರ ಏನನ್ನುತ್ತದೆ ಎಂದು ನೋಡೋಣವೇ?
* ಕಾಂಗ್ರೆಸ್- 105ರಿಂದ 125 ಸ್ಥಾನಗಳು
* ಬಿಜೆಪಿ- 200-225 (ಮೋದಿ ಅಲೆಯ ಪರಿಣಾಮ)
* ಆಪ್- ಕಾಂಗ್ರೆಸ್ನ ಸಾಂಪ್ರದಾಯಿಕ ಮತಗಳಿಗೆ ಕನ್ನ ಹಾಕಬಹುದು, ಬಿಜೆಪಿ ಕೆಲ ಅಭ್ಯರ್ಥಿಗಳ ಮೇಲೂ ಪರಿಣಾಮ
* ತೃಣಮೂಲ ಕಾಂಗ್ರೆಸ್- ಅತಿದೊಡ್ಡ ಪ್ರಾದೇಶಿಕ ಪಕ್ಷವಾಗಿ ಹೊರಹೊಮ್ಮಲಿದೆ
* ಜೆಡಿಯು- ಸರಾಸರಿ ಸಾಧನೆ
* ಎಐಎಡಿಎಂಕೆ- ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ
* ಡಿಎಂಕೆ- ಸಾಧಾರಣ ಸ್ಥಾನ ಗಳಿಸಬಹುದು
* ಶಿವಸೇನೆ- ಎನ್ಡಿಎ ಸ್ಥಾನಗಳ ಸಂಖ್ಯೆ ಸುಧಾರಣೆಗೆ ನೆರವಾಗಬಹುದು
* ಶಿರೋಮಣಿ ಅಕಾಲಿ ದಳ- ತನ್ನ ಸ್ಥಾನಗಳನ್ನು ಉಳಿಸಿಕೊಳ್ಳಲಿದೆ, ಹೆಚ್ಚಿನ ಸೀಟು ಗಳಿಸಲ್ಲ
* ಸಮಾಜವಾದಿ ಪಕ್ಷ- ತನ್ನ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡಲಿದೆ
* ಬಿಎಸ್ಪಿ- ಕಾಂಗ್ರೆಸ್ ಮತಗಳನ್ನು ಸೆಳೆಯಲಿದೆ, ಬಿಜೆಪಿ ಅಭ್ಯರ್ಥಿಗಳಿಗೂ ಸ್ವಲ್ಪ ಮಟ್ಟಿಗೆ ಹಾನಿ ಉಂಟುಮಾಡಲಿದೆ
* ಬಿಜೆಡಿ- ತನ್ನ ಹೆಚ್ಚಿನಸ್ಥಾನಗಳನ್ನು ಉಳಿಸಿಕೊಳ್ಳಲಿದೆ
* ಟಿಡಿಪಿ- ಪಕ್ಷದ ಸಾಧನೆ ಸುಧಾರಣೆ
* ವೈಎಸ್ಸಾರ್ ಕಾಂಗ್ರೆಸ್ ಪಕ್ಷ- ದೊಡ್ಡ ಪ್ರಮಾಣದಲ್ಲಿ ಜಯ. ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ
ಗ್ರಹಗಳ ಸ್ಥಾನಗಳಿಗೆ ತಕ್ಕಂತೆ ನಾಯಕರ ಸ್ಥಾನ
* ನರೇಂದ್ರ ಮೋದಿ- ವಡೋದರಾ, ವಾರಾಣಸಿಯಲ್ಲಿ ಜಯ
* ರಾಜನಾಥ್ಸಿಂಗ್- ಲಖನೌನಲ್ಲಿ ಆರಾಮದಾಯಕ ಗೆಲವು
* ಸೋನಿಯಾ ಗಾಂಧಿ- ರಾಯ್ಬರೇಲಿಯಲ್ಲಿ ಜಯ ನಿಶ್ಚಿತ
* ರಾಮ್ಕೃಪಾಲ್ ಯಾದವ್- ಅತ್ಯಲ್ಪ ಮತಗಳ ಅಂತರದಿಂದ ಮಿಸಾ ವಿರುದ್ಧ ಗೆಲವು
* ಜ.ವಿ.ಕೆ. ಸಿಂಗ್- ಅಲ್ಪ ಮತಗಳ ಅಂತರದಿಂದ ಜಯ
* ಬಪ್ಪಿ ಲಹರಿ- ಗೆಲವಿನ ಅವಕಾಶ ಕಡಿಮೆ
* ಪರೇಶ್ ರಾವಲ್- ಭಾರಿ ಮತಗಳ ಅಂತರದಿಂದ ಜಯ
* ನಗ್ಮಾ- ಮೀರತ್ನಲ್ಲಿ ಸೋಲು
* ಜಯಪ್ರದಾ- ಗೆಲವಿನ ಸಾಧ್ಯತೆಯಿಲ್ಲ
* ಪಿ.ಸಿ. ಸರ್ಕಾರ್ ಜೂನಿಯರ್- ಗೆಲವಿನ ಸಾಧ್ಯತೆಯಿಲ್ಲ
* ಶತ್ರುಘ್ನ ಸಿನ್ಹಾ- ಅಗತ್ಯ ಯಶಸ್ಸು
* ರಾಜ್ ಬಬ್ಬರ್- ಸೋಲುತ್ತಾರೆ
* ಹೇಮಾಮಾಲಿನಿ- ಗೆಲವು ಸಾಧ್ಯತೆಯಿಲ್ಲ
* ಕಿರಣ್ ಖೇರ್- ಗೆಲವು ಕಷ್ಟ
* ಮೂನ್ ಮೂನ್ ಸೇನ್- ಗೆಲ್ಲುವ ಸಾಧ್ಯತೆಯಿದೆ
* ಮೊಹಮ್ಮದ್ ಕೈಫ್- ಸೋಲುವ ಸಾಧ್ಯತೆ
* ಬೈಚುಂಗ್ ಭುಟಿಯಾ- ಹೆಚ್ಚಿನ ಮತ ಸಿಗದು
* ಹರ್ಷವರ್ಧನ್- ಗೆಲ್ಲಬಹುದು
* ಬಿ.ಎಸ್.ಯಡಿಯೂರಪ್ಪ- ಹೆಚ್ಚು ಮತಗಳ ಅಂತರದಿಂದ ಗೆಲವು
ನಿತಿನ್ ಗಡ್ಕರಿ- ಅಲ್ಪ ಮತಗಳಿಂದ ಗೆಲವು
* ಅನಂತ್ ಕುಮಾರ್- ನಂದನ್ ನಿಲೇಕಣಿಯನ್ನು ಸೋಲಿಸುತ್ತಾರೆ
* ರಾಹುಲ್ ಗಾಂಧಿ- ಅಮೇಠಿಯಲ್ಲಿ ಗೆಲ್ಲುವ ಸಾಧ್ಯತೆ
* ಕಿರಿಟ್ ಸೋಮಯ್ಯ- ಅಲ್ಪ ಮತಗಳಿಂದ ಗೆಲವು
* ಅಮರೀಂದರ್ ಸಿಂಗ್- ಗೆಲ್ಲುವ ಸಾಧ್ಯತೆ
* ಬಾಬುಲ್ ಸುಪ್ರಿಯೋ- ಸೋಲುವ ಸಾಧ್ಯತೆ
* ರವಿ ಕಿಶನ್- ಅಲ್ಪ ಅಂತರದಿಂದ ಗೆಲ್ಲಬಹುದು
* ಮನೋಜ್ ತಿವಾರಿ- ಸೋಲುವ ಸಂಭವ
* ರಾಜೀವ್ ಪ್ರತಾಪ್ ರೂಡಿ- ಸಾರನ್ನಲ್ಲಿ ಗೆಲ್ಲುವ ಸಾಧ್ಯತೆ
* ಸತ್ಯಪಾಲ್ ಸಿಂಗ್- ಗೆಲ್ಲಬಹುದು
* ಮನ್ಪ್ರೀತ್ ಸಿಂಗ್ ಬಾದಲ್- ಕಡಿಮೆ ಅಂತರದಿಂದ ಗೆಲ್ಲಬಹುದು
* ಪ್ರವೇಶ್ ವರ್ಮಾ- ಸಂದೀಪ್ ದೀಕ್ಷಿತ್ ವಿರುದ್ಧ ಅಲ್ಪ ಅಂತರದಿಂದ ಗೆಲವು
ನಕ್ಷತ್ರ ಗ್ರಹದಲ್ಲೂ ಮೋದಿ ಅಲೆ!
ಈ ಬಾರಿ ನಕ್ಷತ್ರ, ಗ್ರಹಗಳವರೆಗೂ ಮೋದಿ ಅಲೆ ತಲುಪಿದೆ. ಪ್ರಸಕ್ತ ಚುನಾವಣೆಯಲ್ಲಿ ಬಿಜೆಪಿ ಬರೋಬ್ಬರಿ 200ರಿಂದ 225 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 105-125 ಸ್ಥಾನಗಳಿಗೇ ತೃಪ್ತಿಪಟ್ಟುಕೊಳ್ಳಬೇಕು ಎನ್ನುವುದು ಜ್ಯೋತಿಷಿಗಳ ಲೆಕ್ಕಾಚಾರ. ಅಷ್ಟೇ ಅಲ್ಲ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ವಡೋದರಾ ಮಾತ್ರವಲ್ಲ ವಾರಾಣಸಿಯಲ್ಲೂ ಗೆದ್ದೇ ಗೆಲ್ಲುತ್ತಾರೆ ಎನ್ನುತ್ತದೆ ಭವಿಷ್ಯ. ವಿವಿಧ ರಾಜಕೀಯ ಪಕ್ಷಗಳ, ಪ್ರಮುಖ ನಾಯಕರ ಹಣೆಬರಹವನ್ನೂ ಜ್ಯೋತಿಷಿಗಳು ಹೊರಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


