ದೇಶ

ಮೋದಿ ಅಲೆಯ ಒಂದಿಷ್ಟು ಚಿಲಿಪಿಲಿ

Published On :

ಮೋದಿ ಸಮೀಕರಣಗಳನ್ನೆಲ್ಲ ಹೇಗೆ ಬದಲಾಯಿಸುತ್ತಿದ್ದಾರೆ ನೋಡಿ. ಈ ಮೊದಲು ರಾಷ್ಟ್ರೀಯ ವಾಹಿನಿಯಲ್ಲಿ ಗಂಗಾ ಆರತಿಯಂಥ ಕಾರ್ಯಕ್ರಮಗಳ ನೇರ ಪ್ರಸಾರ ನಾವು ನೋಡುವುದಕ್ಕೆ ಸಾಧ್ಯವಿತ್ತಾ?
-ವಾಸುದೇವನ್ ಎ. ಆರ್.

ಮೋದಿ: ಬನ್ರೀ, ಸ್ವಲ್ಪ ಮಜಾ ತಗೋಳೋಣ.
ಅಮಿತ್ ಶಾ: ಹೆಂಗೆ ಭಾಯ್?
ಮೋದಿ: ಮಾಯಾವತಿಯವರಿಗೆ ಫೋನ್ ಹಚ್ಚಿ, ಬಿಜೆಪಿಗೆ ಬೆಂಬಲ ಕೊಡ್ತೀರಾ ಅಂತ ಕೇಳೋಣ.
-ಫನ್ನಿ

ರಾಹುಲ್ ಗಾಂಧಿಯವರೂ ರಾಜೀನಾಮೆ ಕೊಡುವ ಸಾಧ್ಯತೆ. ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯರೆಲ್ಲ ಒಂದೊಂದು ಲಾಲಿಪಾಪ್ ಕೊಟ್ಟು ಸುಮ್ಮನಾಗಿಸುವ ಯೋಜನೆ ಹಾಕಿಕೊಂಡಿದ್ದಾರಂತೆ.
-ರಾಜದೀಪ್ ಚಕ್ರವರ್ತಿ

ಕಾಂಗ್ರೆಸ್ಸೇ ಮೋದಿ ಅಲೆಯನ್ನು ಒಪ್ಪಿಕೊಂಡಂಥ ಸಂದರ್ಭದಲ್ಲೂ ಆಡ್ವಾಣಿ ಮತ್ತು ಸುಷ್ಮಾ ಸ್ವರಾಜ್ ಅದಕ್ಕೆ ಶ್ರೇಯಸ್ಸು ನೀಡುತ್ತಿಲ್ಲ. ಎಂಥ ದುರಂತ!
-ಪ್ರವೀಣ್ ಶೇಠ್

ಚಾಯ್‌ವಾಲಾ, ಉಳಿದವರೆಲ್ಲ ತಮ್ಮ ಕಾಫಿ ಮರೆಯುವಂತೆ ಮಾಡಿದರು.
-ಪ್ರಶಾಂತ್
ಚಹಾ ಮಾರುವವ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಪ್ರಧಾನಿ. ರಾಜಮನೆತನದಿಂದ ಭಾರತ ಮುಕ್ತವಾಗಿದೆ.
-ಸಿಧು

ಎನ್‌ಡಿಎ ಜಯದ ಶೇಕಡ 95ರ ಶ್ರೇಯಸ್ಸು ಮೋದಿಯವರಿಗೆ ಸಲ್ಲಬೇಕು. ಉಳಿದ ಶೇ. 5 ಶ್ರೇಯಸ್ಸು 'ಅಬ್ ಕಿ ಬಾರ್ ಮೋದಿ ಸರ್ಕಾರ್‌' ಎಂಬ ಘೋಷ ಬರೆದ ಬರಹಗಾರನಿಗೆ ಸಲ್ಲುತ್ತದೆ.
-ಕಿಶನ್ ಗಾರ್ಗ್

ಆರು ದಶಕಗಳ ಹಿಂದೆ ಗುಜರಾತಿಯೊಬ್ಬ ಮುಂಚೂಣಿಯಲ್ಲಿ ನಿಂತು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ. ಅರವತ್ತೈದು ವರ್ಷಗಳ ನಂತರ ಭಾರತದ ವಿಮೋಚನೆಗೆ ಇತಿಹಾಸ ಮರುಕಳಿಸುತ್ತಿದೆ.
-ಅಪ್ಪಿ ಮಿಶಾಲ್

'ಕಾಂಗ್ರೆಸ್ ಮುಕ್ತ ಭಾರತ' ಈಗ ವಾಸ್ತವವಾಗಿದೆ. ಏಕೆಂದರೆ ಪ್ರತಿಪಕ್ಷದಲ್ಲಿ ನಾಯಕರಾಗಿ ಕೂರುವ ಅರ್ಹತೆಯೇ ಅವರಿಗಿಲ್ಲವಾಗಿದೆ. ಮೋದಿಜೀ ನೀವು ಸಾಧಿಸಿದಿರಿ!
-ಶಿವರಾಜ್‌ಸಿಂಗ್ ಚೌಹಾಣ್, ಮಧ್ಯಪ್ರದೇಶದ ಮುಖ್ಯಮಂತ್ರಿ

ಪ್ರಧಾನಿಯಾದಾಗ ಆಶೀರ್ವಾದ ತೆಗೆದುಕೊಳ್ಳುವುದಕ್ಕೆ ಅಮ್ಮನನ್ನು ಹೊಂದಿದ್ದ ಪ್ರಧಾನಿ ಎಂದರೆ ನರೇಂದ್ರ ಮೋದಿ ಅವರೊಬ್ಬರೇ. ಮೋದಿ ತಾಯಿಗೆ ಎಂಥ ಸಾರ್ಥಕ ಕ್ಷಣಗಳಿರಬಹುದು!
-ಕಿರಣ್‌ಕುಮಾರ್ ಎಸ್.
ನರೇಂದ್ರ ಮೋದಿ ಮತ್ತು ಬಿಜೆಪಿಯ ಗೆಲವು ಚುನಾವಣಾ ಇತಿಹಾಸದಲ್ಲೇ ಸುನಾಮಿಯಂಥದ್ದು.
-ಅಂಕಿತ್ ಸಿಂಗ್

ಪಾಕಿಸ್ತಾನಕ್ಕೆ ಶುಕ್ರವಾರ ಮಧ್ಯಮ ಪ್ರಮಾಣದ ಭೂಕಂಪ ತಗುಲಿತೆಂಬ ಸುದ್ದಿ ಬಂದಿದೆ. ಅದು ನಮೋ ಸುನಾಮಿಯೇ ಆಗಿದ್ದಿರಬಹುದು.
-ಹರ್ಷಿತಾ ಕಪೂರ್

ಕಾಂಗ್ರೆಸ್ ಮತ್ತು ಆಪ್‌ಗಳು ಈಗ ಮೋದಿ ಹೈಡ್ರೆಶನ್‌ನಿಂದ ಬಳಲುತ್ತಿವೆ.
-ಕೂಲ್‌ಫನ್ನಿ ಟೀಶರ್ಟ್

ಕಳೆದ ಹತ್ತು ವರ್ಷಗಳ ಹತಾಶೆಯನ್ನು ಕೊನೆಗೊಳಿಸಿದ್ದಕ್ಕೆ ಕಾಂಗ್ರೆಸ್‌ಗೆ ಧನ್ಯವಾದ.
-ರತ್ನಾಕರ

ಸೆನ್ಸೆಕ್ಸ್ ಹೈ ಪಚ್ಚೀಸ್ ಹಜಾರ್. ಅಬ್ ಕಿ ಬಾರ್ ಮೋದಿ ಸರ್ಕಾರ್!
-ಸ್ವಪನ್ ಸೇಠ್

ಮುಖ್ಯವಾಹಿನಿ ಮಾಧ್ಯಮ ಕಳೆದೊಂದು ದಶಕದಿಂದ ಮೋದಿಯವರನ್ನು ಹೇಗೆ ಚಿತ್ರಿಸಿತು ಎಂದು ಅಧ್ಯಯನಕಾರರು ಪುಸ್ತಕ ಹೊರತರಬೇಕು. ಅವರಿಗೆಲ್ಲ ತುಸುವಾದರೂ ಮುಜುಗರವಾಗಬೇಕಿದೆ.
-ಸ್ವಪನ್‌ದಾಸ್ ಗುಪ್ತ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.