ವೇಶ್ಯೆಯರ ಜತೆ ಟೀಂ ಪಾರ್ಟಿ, ವಿವಾದದಲ್ಲಿ ವಿಶ್ವಕಪ್ ತಂಡ!

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ಮೆಕ್ಸಿಕೊ ವಿಶ್ವಕಪ್ ತಂಡ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ.
ಮೆಕ್ಸಿಕೋ ವಿಶ್ವಕಪ್ ತಂಡ
ಮೆಕ್ಸಿಕೋ ವಿಶ್ವಕಪ್ ತಂಡ
Updated on
ಮೆಕ್ಸಿಕೊ(ರಷ್ಯಾ): ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ದಿನಗಣನೆ ಶುರುವಾಗಿದ್ದು ಈ ಮಧ್ಯೆ ಮೆಕ್ಸಿಕೊ ವಿಶ್ವಕಪ್ ತಂಡ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದೆ. 
ರಷ್ಯಾದಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ನಲ್ಲಿ ಆಡುವ ಸಲುವಾಗಿ ಯುರೋಪ್ ಗೆ ತೆರಳುವ ಮುನ್ನ ತಂಡದ ಆಟಗಾರರು 30ಕ್ಕೂ ಹೆಚ್ಚು ವೇಶ್ಯೆಯರ ಜತೆ ಪಾರ್ಟಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ. 
ಕಳೆದ ಶನಿವಾರ ಸ್ಕಾಟ್ಲೆಂಡ್ ತಂಡದ ವಿರುದ್ಧ ಅಜ್ ಟೆಕ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ 1-0 ಗೆಲುವಿನ ನಂತರ ಖಾಸಗಿ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಭದ್ರತೆಯ ನಡುವೆ ತಂಡದ ಆಟಗಾರರು ಪಾರ್ಟಿ ಮಾಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. 
ಈ ಬಗ್ಗೆ ಮಾತನಾಡಿರುವ ಮೆಕ್ಸಿಕೊ ಫುಟ್ಬಾಲ್ ಫೆಡರೇಷನ್ ನ ಮುಖ್ಯ ಕಾರ್ಯದರ್ಶಿ ಗುಲ್ಲೆರ್ಮೋ ಚಾಂಟು ಅವರು, ಯಾವ ಆಟಗಾರ ಕೂಡ ತರಬೇತಿಯನ್ನು ತಪ್ಪಿಸಿಕೊಂಡು ಪಾರ್ಟಿ ಮಾಡಿಲ್ಲ. ಆಟಗಾರರರಿಗೆ ವಿಶ್ರಾಂತಿ ಇರುವ ಸಮಯದಲ್ಲಿ ಪಾರ್ಟಿ ಮಾಡಿದ್ದಾರೆ. ಇದು ಅವರ ಸ್ವಾತಂತ್ರ್ಯ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com