ಫಿಫಾ ವಿಶ್ವಕಪ್ 2014

ಕೊಲಂಬಿಯಾ ಭೀತಿಯಲ್ಲಿ ಬ್ರೆಜಿಲ್

ಕೊಲಂಬಿಯಾ ಭೀತಿಯಲ್ಲಿ ಬ್ರೆಜಿಲ್
Published On :

ಫೋರ್ಟಲೇಜಾ: ಕೊಲಂಬಿಯಾ ಮತ್ತು ಬೆಲ್ಜಿಯಂ ರಾಷ್ಟ್ರಗಳು ಈ ಹಿಂದೆ ಬರೋಬ್ಬರಿ 25 ಬಾರಿ ಪರಸ್ಪರ ಸೆಣಸಿವೆ. ಆದರೆ, ಕೇವಲ ಎರಡು ಬಾರಿ ಮಾತ್ರ ಜಯ ಸಾಧಿಸುವಲ್ಲಿ ಕೊಲಂಬಿಯಾ ಯಶಸ್ವಿಯಾಗಿದೆ.
ಹೀಗಾಗಿ, ಶುಕ್ರವಾರ ನಡೆಯಲಿರುವ ವಿಶ್ವಕಪ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಬ್ರೆಜಿಲ್ ಎದುರಿಸುತ್ತಿರುವ ಕೊಲಂಬಿಯಾ ಸೋಲಲಿದೆ ಎಂಬುದು ಎಲ್ಲರ ಅಭಿಮತವಾಗಿದೆ. ಆದರೆ, ಈ ಪಂದ್ಯದಲ್ಲಿ ಕೊಲಂಬಿಯಾ ಗೆಲುವಿನ ವಿಶ್ವಾಸ ಹೊಂದಿದೆ ಎನ್ನಲಾಗುತ್ತಿದೆ. ಅದಕ್ಕೆ ತನ್ನದೇ ಆದ ಕೆಲ ಕಾರಣಗಳಿವೆ. ಜೇಮ್ಸ್ ಪ್ರಭುತ್ವ: ವಿಶ್ವಕಪ್ನಲ್ಲಿ ಗೋಲು ಗಳಿಸುತ್ತಿರುವ ಸ್ಟಾರ್ಗಳಾದ ನೇಮಾರ್, ಮೆಸ್ಸಿ ಅವರ ಸಾಲಿನಲ್ಲಿ ಕೊಲಂಬಿಯಾದ ಜೇಮ್ಸ್ ರೋಡ್ರಿಗಸ್ ಸಹ ಸೇರಿಕೊಂಡಿದ್ದಾರೆ. ಜೇಮ್ಸ್ ಅವರು ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ ಕೊಲಂಬಿಯಾ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು. ಹೀಗಾಗಿ ತಂಡ ಗೆಲವಿನ ಆಶಾವಾದ ಹೊಂದಿದೆ.
ನೇಮಾರ್ ಗಾಯ: ಕೊಲಂಬಿಯಾ ತಂಡದ ಪ್ರಮುಖ ಆಟಗಾರ ಜೇಮ್ಸ್ ಫಾರ್ಮ್ನಲ್ಲಿದ್ದರೆ, ಬ್ರೆಜಿಲ್ನ ಸ್ಟಾರ್ ಆಟಗಾರ ನೇಮಾರ್ ಗಾಯಗೊಂಡಿರುವುದು ಕೊಲಂಬಿಯಾಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆಗಳಿವೆ. ಚಿಲಿ ವಿರುದ್ಧ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ನಲ್ಲಿ ಗೋಲು ದಾಖಲಿಸಿದ್ದನ್ನು ಬಿಟ್ಟರೆ ನೇಮಾರ್ ಹೇಳಿಕೊಳ್ಳುವ ಪ್ರದರ್ಶನ ನೀಡಿರಲಿಲ್ಲ. ಗಾಯಗೊಂಡಿರುವ ಅವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.
ಫ್ರೆಡ್ ಮತ್ತು ಜೋ ವೈಫಲ್ಯ: ಬ್ರೆಜಿಲ್ ತಂಡದ ಪ್ರಮುಖ ಸ್ಟ್ರೈಕರ್ ಫ್ರೆಡ್ ವೈಫಲ್ಯ ಕಳೆದುಕೊಂಡಿರುವುದು ತಂಡಕ್ಕೆ ಆತಂಕವಾಗಿ ಪರಿಣಮಿಸಿದೆ.  ಗುಂಪು ಹಂತದಲ್ಲಿ ಕೆಮರೂನ್ ವಿರುದ್ಧ ಫ್ರೆಡ್ ಒಂದು ಗೋಲು ದಾಖಲಿಸಿದ್ದರು. ಮೆಕ್ಸಿಕೊ ಮತ್ತು ಚಿಲಿ ವಿರುದ್ಧ ಗೋಲಿನ ಅಗತ್ಯವಿದ್ದಾಗ ಫ್ರೆಡ್ ಬದಲಿಗೆ ಜೋಗೆ ಸ್ಥಾನ ನೀಡಲಾಗಿತ್ತು. ಜೋ ಸಹ ದಿಟ್ಟ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿದ್ದಾರೆ.
ಆತಂಕದಲ್ಲಿ ಬ್ರೆಜಿಲ್: ಚಿಲಿ ವಿರುದ್ಧದ ಪಂದ್ಯದಲ್ಲಿ ಬ್ರೆಜಿಲ್ಗೆ ಸೋಲು ತಪ್ಪಿದಾಗ ನೇಮಾರ್, ಜೂಲಿಯೋ ಸೀಜರ್ ಹಾಗೂ ನಾಯಕ ತೈಗೋ ಸಿಲ್ವಾ ಅಂತವರೇ ಪಂದ್ಯದಲ್ಲಿ ಬೆವರಿದ್ದರು. ಆದರೆ, ಕೂದಲೆಳೆ ಅಂತರದಲ್ಲಿ ತಂಡ ಸೋಲಿನಿಂದ ಪಾರಾದಾಗ ದೀರ್ಘ ನಿಟ್ಟುಸಿರು ಬಿಟ್ಟಿದ್ದರು. ಅಲ್ಲದೆ, ತಂಡದ ಮಾನಸಿಕ ಸ್ಥಿತಿಗತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೋಚ್ ಲೂಯಿಸ್ ಫೆಲಿಪೆ ಸ್ಕೋಲಾರಿ, ತಂಡಕ್ಕೆ ಹೊಸ ಸ್ಫೂರ್ತಿ ತುಂಬುವಂತೆ ದೈಹಿಕ ತಜ್ಞರನ್ನು ಕೇಳಿಕೊಂಡಿದ್ದಾರಂತೆ. ಹೀಗಾಗಿ, ಚಿಲಿ ವಿರುದ್ಧ ಬ್ರೆಜಿಲ್ ನೀಡಿದ ಪ್ರದರ್ಶನವನ್ನು ಪರಿಶೀಲಿಸಿದರೆ, ಕ್ವಾರ್ಟಫೈನಲ್ನಲ್ಲಿ ಕೊಲಂಬಿಯಾ ಮೇಲುಗೈ ಸಾಧಿಸಿದರೆ, ಅಚ್ಚರಿ ಪಡಬೇಕಿಲ್ಲ.


ಬ್ರೆಜಿಲ್-ಕೊಲಂಬಿಯಾ
ಸಮಯ- 9.30 ಗಂಟೆ
3    ರ್ಯಾಂಕ್    8
ಮುಖಾಮುಖಿ
25    ಪಂದ್ಯ    25
15    ಜಯ    2
8    ಡ್ರಾ    8
55    ಗೋಲು    11
ಒಟ್ಟು ಗೋಲು-66

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.