ಫಿಫಾ ವಿಶ್ವಕಪ್ 2014

ಫೈನಲ್ನಲ್ಲಿ ಶಕೀರಾ ಶೇಕ್

ಫೈನಲ್ನಲ್ಲಿ ಶಕೀರಾ ಶೇಕ್
Published On :

ರಿಯೋ ಡಿ ಜೆನೈರೊ:  ಖ್ಯಾತ ಪಾಪ್ ಗಾಯಕಿ ಶಕೀರಾ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯ ಫೈನಲ್ ಪಂದ್ಯದ ಸಮಯದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಪ್ರದರ್ಶನ ನೀಡಲಿದ್ದಾರೆ. ಜು.13ರಂದು ನಡೆಯಲಿರುವ ಪಂದ್ಯಾವಳಿಯ ಮುಕ್ತಾಯ ಸಮಾರಂಭದಲ್ಲಿ ಶಕೀರಾ ಜತೆಗೆ ಗಿಟಾರಿಸ್ಟ್ ಕಾರ್ಲೊಸ್ ಸ್ಯಾಂಟಾನಾ ಮತ್ತು ರ್ಯಾಪರ್ ವಿಕ್ಲೆಫ್ ಜೀನ್ ಸಹ ಪ್ರದರ್ಶನ ನೀಡಲಿದ್ದು, ಮತ್ತೊಂದು ವರ್ಣರಂಜಿತ ಸಮಾರಂಭಕ್ಕೆ ಫಿಫಾ ವಿಶ್ವಕಪ್ ಸಾಕ್ಷಿಯಾಗುವ ನಿರೀಕ್ಷೆಗಳಿವೆ. ಸತತ ಮೂರನೇ ವಿಶ್ವಕಪ್ ಪಂದ್ಯಾವಳಿಯಲ್ಲಿ ಪ್ರದರ್ಶನ ನೀಡಲು ಸಜ್ಜಾಗಿರುವ ಶಕೀರಾ  ಲಾ ಲಾ ಲಾ (ಬ್ರೆಜಿಲ್ 2014) ಹಾಡನ್ನು ಹಾಡಲಿದ್ದಾರೆ. ಶಕೀರಾ ಜತೆಗೆ ಬ್ರೆಜಿಲ್ನ ತಾರೆ ಕಾರ್ಲಿನೋಸ್ ಬ್ರೌನ್ ಸಹ ಭಾಗವಹಿಸಲಿದ್ದಾರೆ ಎಂದು ಫಿಫಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇನ್ನು ಸ್ಯಾಂಟಾನ ವಿಕ್ಲೆಫ್ ಹಾಗೂ ಬ್ರೆಜಿಲ್ನ ಗಾಯಕ ಅಲೆಕ್ಸಾಂಡರ್ ಪೀರ್ಸ್ ಟೂರ್ನಿಯ ಗೀತೆಯಾಗಿರುವ ಡ್ಯಾರ್ ಉಮ್ ಜೈಟೊ ಗೀತೆಯನ್ನು ಹಾಡಲಿದ್ದಾರೆ. ನಾನು ವಿಶ್ವಕಪ್ನ ಮುಕ್ತಾಯ ಸಮಾರಂಭದಲ್ಲಿ ನನ್ನ ಹಾಡಾಗಿರುವ ಲಾ ಲಾ ಲಾ (ಬ್ರೆಜಿಲ್ 2014) ಅನ್ನು ಹಾಡುತ್ತಿರುವುದಕ್ಕೆ ಹೆಚ್ಚು ಸಂತಸವಾಗುತ್ತಿದೆ ಎಂದು ಶಕೀರಾ ಸಂತಸ ವ್ಯಕ್ತಪಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.