ಫಿಫಾ ವಿಶ್ವಕಪ್ 2014

ರೊನಾಲ್ಡೊ ಮತ್ತೆ ಕಣಕ್ಕೆ

ರೊನಾಲ್ಡೊ ಮತ್ತೆ ಕಣಕ್ಕೆ
Published On :

ವಿಶ್ವಕಪ್ ಆರಂಭಕ್ಕೆ ಕೇವಲ ಮೂರು ದಿನ ಬಾಕಿ ಇರುವಾಗ ಪೋರ್ಚುಗಲ್ಗೆ ನೆಮ್ಮದಿ ದೊರಕಿದೆ. ಕಾರಣ, ಐರ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯಕ್ಕೆ ಕ್ರಿಸ್ಟಿಯಾನೊ ರೊನಾಲ್ಡೊ ಕಣಕ್ಕಿಳಿಯುತ್ತಿರುವುದು, ಪೋರ್ಚುಗಲ್ ತಂಡದ ಪಾಲಿಗೆ ಮಹತ್ವದ್ದಾಗಿದೆ. ಗಾಯದ ಸಮಸ್ಯೆಯಿಂದ ರೊನಾಲ್ಡೊ ಪೋರ್ಚುಗಲ್ನ ಕಳೆದ ಎರಡು ಅಭ್ಯಾಸ ಪಂದ್ಯದಿಂದ ಹೊರಗುಳಿದಿದ್ದರು. ಹಾಗಾಗಿ ರೊನಾಲ್ಡೊ ವಿಶ್ವಕಪ್ ಪಂದ್ಯಾವಳಿಯಿಂದ ಹೊರಗುಳಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಕಳೆದ ಶನಿವಾರ ಮತ್ತೆ ಅಭ್ಯಾಸಕ್ಕಿಳಿದ ರೊನಾಲ್ಡೊ, ಅಭಿಮಾನಿಗಳಲ್ಲಿನ ಗೊಂದಲವನ್ನು ದೂರ ಮಾಡಿದರು. ರೊನಾಲ್ಡೊ ಫಿಟ್ನೆಸ್ ಬಗ್ಗೆ ಭಾನುವಾರ ಪೋರ್ಚುಗಲ್ ತಂಡ ಮಾಹಿತಿ ನೀಡಲು ನಿರಾಕರಿಸಿತ್ತು. ಆದರೆ ಫಾರ್ವಡ್ ಆಟಗಾರ ವೈರಿನಾಹ್, ಆತ ಅಭ್ಯಾಸದಲ್ಲಿ ಭಾಗವಹಿಸಲು ಫಿಟ್ ಆಗಿದ್ದರೆ, ಪಂದ್ಯದಲ್ಲೂ ಭಾಗವಹಿಸಲು ಫಿಟ್ ಎಂದು ತಿಳಿಸಿದರು. ಪೋರ್ಚುಗಲ್ ತಂಡ ಜೂ.16ರಂದು ಜಿ ಗುಂಪಿನಲ್ಲಿ ಜರ್ಮನಿ ವಿರುದ್ಧ ತನ್ನ ಆರಂಭಿಕ ಪಂದ್ಯವನ್ನಾಡಲಿದ್ದು, ರೊನಾಲ್ಡೊ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಪ್ರತಿಯೊಬ್ಬರು, ನಮ್ಮ ತಂಡಕ್ಕೆ ಮೈದಾನದ ಹೊರಗೆ ಹಾಗೂ ಒಳಗೆ ರೊನಾಲ್ಡೊ ಅವರ ಪ್ರಾಮುಖ್ಯತೆಯನ್ನು ಅರಿತಿದ್ದಾರೆ ಎಂದು ಅವರು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.