ಫಿಫಾ ವಿಶ್ವಕಪ್ 2014

ಫ್ರಾನ್ಸ್-ಹೋಂಡುರಾಸ್ ಪಂದ್ಯದಲ್ಲಿ ಮೊಳಗದ ರಾಷ್ಟ್ರಗೀತೆ

ಫ್ರಾನ್ಸ್-ಹೋಂಡುರಾಸ್ ಪಂದ್ಯದಲ್ಲಿ ಮೊಳಗದ ರಾಷ್ಟ್ರಗೀತೆ
Published On :

ಪೊರ್ಟೊ ಅಲೆಗ್ರೆ (ಬ್ರೆಜಿಲ್): ವಿಶ್ವಕಪ್‌ನ 'ಈ' ಗುಂಪಿನಲ್ಲಿ ಫ್ರಾನ್ಸ್ ಮತ್ತು ಹೋಂಡುರಾಸ್ ನಡುವೆ ನಡೆದ ಪಂದ್ಯ ಆರಂಭವಾಗುವ ಮುನ್ನ ಎರಡೂ ತಂಡಗಳ ರಾಷ್ಟ್ರಗೀತೆಯನ್ನು ಹಾಡಿಸದಿರುವುದು ಈಗ ಅಚ್ಚರಿಗೆ ಕಾರಣವಾಗಿದೆ. ಉಭಯ ತಂಡಗಳು ರಾಷ್ಟ್ರಗೀತೆಗಾಗಿ ಕ್ರೀಡಾಂಗಣದಲ್ಲಿ ಸರದಿಯಲ್ಲಿ ನಿಂತಿದ್ದವು. ಆದರೆ, ರಾಷ್ಟ್ರಗೀತೆಗಾಗಿ ಸಂಗೀತವೇ ಮೊಳಗಲಿಲ್ಲ. ನಂತರ ರೆಫರೀ ಅವರು ನೀಡಿದ ಆದೇಶದ ಮೇರೆಗೆ ಆಟಗಾರರು ಪರಸ್ಪರ ಕೈ ಕುಲುಕುವ ಮೂಲಕ ಅಂಗಣಕ್ಕಿಳಿದರು. ಆದರೆ, ಪಂದ್ಯ ಆರಂಭವಾಗುವುದಕ್ಕೆ ಇನ್ನೂ ಸಮಯವಿದ್ದುದರಿಂದ ಆಟಗಾರರು ಕ್ರೀಡಾಂಗಣದಲ್ಲಿ ಕೆಲವು ನಿಮಿಷಗಳವರೆಗೆ ಕಾಯಬೇಕಾಯಿತು. ಈ ಪಂದ್ಯದಲ್ಲಿ ರಾಷ್ಟ್ರಗೀತೆಯನ್ನು ಏಕೆ ಹಾಡಲಿಲ್ಲ ಎಂಬ ಬಗ್ಗೆ ವಿವರ ನೀಡಲು, ಫಿಫಾ ವಕ್ತಾರರು ಮಾಧ್ಯಮ ಸಂಪರ್ಕಕ್ಕೆ ದೊರಕಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.