ಫಿಫಾ ವಿಶ್ವಕಪ್ 2014

ಜಯಕ್ಕಾಗಿ ಜರ್ಮನಿ ಜಪ

ಜಯಕ್ಕಾಗಿ ಜರ್ಮನಿ ಜಪ
Published On :

ಪೊರ್ಟೊ ಸೆಗುರೋ (ಬ್ರೆಜಿಲ್): ತನ್ನ ಮೊದಲ ಪಂದ್ಯದಲ್ಲಿ ಪೋರ್ಚುಗಲ್ ವಿರುದ್ಧ 4-0 ಅಂತರದಿಂದ ಜಯ ಕಂಡಿರುವ ಜರ್ಮನಿ ತಂಡ ಶನಿವಾರ ನಡೆಯಲಿರುವ 2ನೇ ಪಂದ್ಯದಲ್ಲಿ ಘಾನ ವಿರುದ್ಧ ಸೆಣಸಲಿದೆ. ಆದರೆ, 2010ರ ಪಂದ್ಯಾವಳಿಯಲ್ಲಿ ಆದ ಫಲಿತಾಂಶ ಮರುಕಳಿಸದಿರುವಂತೆ ಅದು ದೇವರಲ್ಲಿ ಮೊರೆ ಇಟ್ಟಿದೆ.
ಕಾರಣ, ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 4-0 ಅಂತರದಿಂದ ಜಯ ಸಾಧಿಸಿದ್ದ ಜರ್ಮನಿ, 2ನೇ ಪಂದ್ಯದಲ್ಲಿ ಸರ್ಬಿಯಾ ವಿರುದ್ಧ 1-0ದಿಂದ ಸೋಲನುಭವಿಸಿತ್ತು. ಈ ಬಾರಿ ಮೊದಲ ಪಂದ್ಯದಲ್ಲಿ ಅದೇ ರೀತಿಯ ಫಲಿತಾಂಶ ಕಂಡಿರುವ ಜರ್ಮನಿ, ಘಾನಾ ವಿರುದ್ಧ ಯಾವುದೇ ಕಾರಣಕ್ಕೂ ಸೋಲನುಭವಿಸಬಾರದು ಎಂಬ ಹಠದಲ್ಲಿದೆ. ಆದರೆ, 2010ರಲ್ಲಿ 3ನೇ ಪಂದ್ಯದಲ್ಲಿ ಘಾನಾ ವಿರುದ್ಧವೇ 1-0ದಿಂದ ಗೆದ್ದು ನಾಕೌಟ್‌ಗೇರಿತ್ತು. '4 ವರ್ಷಗಳ ಹಿಂದೆ ನಡೆದ 2ನೇ ಪಂದ್ಯ ನಮಗೆ ಈಗ ಎಚ್ಚರಿಕೆಯ ಗಂಟೆಯಾಗಿದೆ. ಆ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದರೂ, ಅಂತಿಮವಾಗಿ ಸೋಲನುಭವಿಸಿದ್ದೇವು. ಹೀಗಾಗಿ ಈ ಪಂದ್ಯವನ್ನು ತುಂಬಾ ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ಜರ್ಮನಿ ಮೆರ್ಟೆಸಾಕರ್ ತಿಳಿಸಿದ್ದಾರೆ. ಇನ್ನು ಘಾನಾ ತನ್ನ ಆರಂಭಿಕ ಪಂದ್ಯದಲ್ಲಿ ಅಮೆರಿಕ ವಿರುದ್ಧ 2-1 ಗೋಲುಗಳಿಂದ ಸೋಲನುಭವಿಸಿದ್ದು, ಈಗ ಗೆಲವಿನ ಅನಿವಾರ್ಯದಲ್ಲಿದೆ. ಹೀಗಾಗಿ ಜರ್ಮನಿಗೆ ಈ ಪಂದ್ಯದಲ್ಲಿ ಕಠಿಣ ಸವಾಲು ಎದುರಾಗುವ ನಿರೀಕ್ಷೆಗಳಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.