ಫಿಫಾ ವಿಶ್ವಕಪ್ 2014

ಕೊರಿಯಾಗೆ ನಾಕೌಟ್ ಕನಸು

Published On :

ಪೊರ್ಟೊ ಅಲೆಗ್ರೆ: ಆರಂಭಿಕ ಪಂದ್ಯದಲ್ಲಿ ಡ್ರಾ ಸಾಧಿಸಿ, ಈಗ ನಾಕೌಟ್ ಹಂತಕ್ಕೆ ಪ್ರವೇಶಿಸುವ ಕನಸು ಕಾಣುತ್ತಿರುವ ಕೊರಿಯಾ ರಿಪಬ್ಲಿಕ್ ತಂಡಕ್ಕೆ ಉತ್ತಮ ಅವಕಾಶ ಎದುರಾಗಿದೆ. ಕಾರಣ ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಕೊರಿಯಾ, ಸೋಲಿನ ಸುಳಿಯಲ್ಲಿ ನಲುಗಿರುವ ಅಲ್ಜೀರಿಯಾ ತಂಡವನ್ನು ಎದುರಿಸಲಿದ್ದು, ಈ ಪಂದ್ಯದಲ್ಲಿ ಗೆಲವು ದಾಖಲಿಸುವ ಲೆಕ್ಕಾಚಾರದಲ್ಲಿದೆ. ಅಲ್ಜೀರಿಯಾ ತಂಡ ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ್ದು, ಕಳೆದ ಏಳು ವಿಶ್ವಕಪ್ ಪಂದ್ಯಗಳಲ್ಲಿ ಸತತ ಸೋಲನುಭವಿಸಿದೆ. ಹಾಗಾಗಿ ಅಲ್ಜೀರಿಯಾ ತಂಡ ಈ ಸೋಲಿನ ಸರಪಳಿಯಿಂದ ಹೊರ ಬರುವ ಒತ್ತಡದಲ್ಲಿದೆ. 1982ರಲ್ಲಿ ಜರ್ಮನಿ ವಿರುದ್ಧ ಗೆಲವು ದಾಖಲಿಸಿದ್ದ ಅಲ್ಜೀರಿಯಾ ನಂತರ ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಕೊರಿಯಾ ವಿರುದ್ಧ ಅಲ್ಜೀರಿಯಾ ಉತ್ತಮ ರ್ಯಾಂಕಿಂಗ್ ಹೊಂದಿದ್ದರೂ, ಕೊರಿಯಾ ವಿರುದ್ಧ ಈ ಹಿಂದೆ ಒಂದು ಬಾರಿ ಕಾದಾಟ ನಡೆಸಿದ್ದು, ಆ ಪಂದ್ಯದಲ್ಲೂ ಸೋಲನುಭವಿಸಿದೆ. ಹಾಗಾಗಿ ಈ ಪಂದ್ಯದಲ್ಲಿ ಅಲ್ಜೀರಿಯಾ ಆಟಗಾರರ ಮನೋಬಲ ಕುಗ್ಗಿದೆ.
ಇನ್ನು ಕೊರಿಯಾಗೆ ನಾಕೌಟ್ ಆಸೆ ಜೀವಂತವಾಗಿ ಉಳಿಸಿಕೊಳ್ಳಲು ಇದು ಅತ್ಯುತ್ತಮ ಅವಕಾಶವಾಗಿದ್ದು, ಯಾವರೀತಿ ಇದರ ಲಾಭ ಪಡೆಯಲಿದೆ ಎಂಬುದನ್ನು ಕಾದುನೋಡಬೇಕು. ಆಟಗಾರರು ಉತ್ತಮ ಫಾರ್ಮ್ ನಲ್ಲಿದ್ದು, ಕೊರಿಯಾ ಆತ್ಮವಿಶ್ವಾಸ ಹೆಚ್ಚಿದೆ.
ಕೊರಿಯಾ- ಅಲ್ಜೀರಿಯಾ
(ಗುಂಪು-ಎಚ್)
ಪಂದ್ಯ ಆರಂಭ:
ಇಂದು ಮಧ್ಯರಾತ್ರಿ 12.30
57-ರ್ಯಾಂಕ್-22
01-ಪಂದ್ಯ-01
01-ಜಯ-00
00-ಸೋಲು-01
02-ಗೋಲು-00

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.