ಫಿಫಾ ವಿಶ್ವಕಪ್ 2014

ನಾಕೌಟ್ ಕನಸಲ್ಲಿ ಕ್ರೊವೇಷಿಯಾ

Published On :

ರೆಸಿಫೆ (ಬ್ರೆಜಿಲ್): ಗೆಲವು ದಾಖಲಿಸಿದರಷ್ಟೇ ನಾಕೌಟ್ ಹಂತಕ್ಕೆ ಪ್ರವೇಶ ಎಂಬ ಸತ್ಯವನ್ನು ಅರಿತಿರುವ ಕ್ರೊವೇಷಿಯಾ ತಂಡ ಎ ಗುಂಪಿನ ತಮ್ಮ ಕಡೇಯ ಪಂದ್ಯದಲ್ಲಿ ಮೆಕ್ಸಿಕೊ ತಂಡವನ್ನು ಎದುರಿಸಲಿದೆ.
ಆರಂಭಿಕ ಎರಡು ಪಂದ್ಯಗಳ ಪೈಕಿ 1ರಲ್ಲಿ ಗೆಲವು, 1ರಲ್ಲಿ ಡ್ರಾ ಸಾಧಿಸಿ 4 ಅಂಕ ಪಡೆದಿರುವ ಮೆಕ್ಸಿಕೊ ಈ ಪಂದ್ಯದಲ್ಲಿ ಡ್ರಾ ಸಾಧಿಸಿದರೂ ನಾಕೌಟ್ ಹಂತಕ್ಕೆ ಪ್ರವೇಶಿಸಲಿದೆ. ಹಾಗಾಗಿ ಕ್ರೊವೇಷಿಯಾ ತಂಡ ಈ ಪಂದ್ಯವನ್ನು ತಮ್ಮ ಪಾಲಿಗೆ ಮಾಡು ಇಲ್ಲವೆ ಮಡಿ ಎಂದು ಪರಿಗಣಿಸಿದೆ. ಈ ಪಂದ್ಯವನ್ನು ತಮ್ಮ ಪಾಲಿಗೆ ಫೈನಲ್ ಪಂದ್ಯವಾಗಿ ಪರಿಗಣಿಸಿರುವುದಾಗಿ ತಿಳಿಸಿರುವ ಕ್ರೊವೇಷಿಯಾ ತಂಡದ ಮ್ಯಾನೇಜರ್ ನಿಕ್ ಕೊವ್ಯಾಕ್, ತಂಡ ಉತ್ತಮ ಪ್ರದರ್ಶನ ನೀಡುವ ಭರವಸೆ ಹೊಂದಿದ್ದಾರೆ.
ಇದುವರೆಗೂ ಉಭಯ ತಂಡಗಳು ಕೇವಲ 3 ಬಾರಿ ಮುಖಾಮುಖಿಯಾಗಿದ್ದು, ಇದರಲ್ಲಿ ಕ್ರೊವೇಷಿಯಾ ಮೇಲುಗೈ ಸಾಧಿಸಿದೆ. ಈ ಪಂದ್ಯಗಳ ಪೈಕಿ ಕ್ರೊವೇಷಿಯಾ 2ರಲ್ಲಿ ಗೆಲವು ದಾಖಲಿಸಿದರೆ, ಮೆಕ್ಸಿಕೊ 1 ಪಂದ್ಯದಲ್ಲಿ ಜಯ ದಾಖಲಿಸಿದೆ. ಇನ್ನು ಗೋಲುಗಳನ್ನು ಗಮನಿಸಿದರೆ, ಕ್ರೊವೇಷಿಯಾ 5 ಗೋಲು ದಾಖಲಿಸಿದ್ದು, ಮೆಕ್ಸಿಕೊ ಕೇವಲ 2 ಗೋಲು ದಾಖಲಿಸಿದೆ. ಇನ್ನು ರ್ಯಾಂಕಿಂಗ್ ದೃಷ್ಠಿಕೋನದಲ್ಲಿ ನೋಡುವುದಾದರೆ, ಉಭಯ ತಂಡಗಳ ನಡುವೆ ಹೆಚ್ಚಿನ ವ್ಯತ್ಯಾಸವಿಲ್ಲ. ಕ್ರೊವೇಷಿಯಾ 18 ಹಾಗೂ ಮೆಕ್ಸಿಕೊ 20ನೇ ರ್ಯಾಂಕಿಂಗ್ ಪಡೆದಿದ್ದು, ಉಭಯ ತಂಡಗಳು ಸಮಬಲ ಹೊಂದಿರುವುದು ಕಾಣುತ್ತದೆ.
ಕ್ರೊವೇಷಿಯಾ- ಮೆಕ್ಸಿಕೊ
(ಗುಂಪು-ಎ)
ಪಂದ್ಯ ಆರಂಭ:
ನಾಳೆ ರಾತ್ರಿ 01.30
18..........ರ್ಯಾಂಕ್.......20
03.........ಪಂದ್ಯ..........03
02.........ಜಯ..........01
01.........ಸೋಲು........02
00.........ಡ್ರಾ.............00
05.........ಗೋಲು........02

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.