ಆತ್ಮವಿಶ್ವಾಸದಲ್ಲಿ ಫ್ರಾನ್ಸ್

ರಿಯೊ ಡಿ ಜನೈರೊ: ಫ್ರಾನ್ಸ್ ತಂಡದ ಆಟಗಾರರು ಬುಧವಾರ 'ಇ' ಗುಂಪಿನಲ್ಲಿ ನಡೆಯಲಿರುವ ತಮ್ಮ ಅಂತಿಮ ಲೀಗ್ ಪಂದ್ಯದಲ್ಲಿ ಈಕ್ವೆಡಾರ್ ವಿರುದ್ಧ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಒಂದು ವೇಳೆ ಡ್ರಾ ಸಾಧಿಸಿದರೂ ಸಹ ಫ್ರಾನ್ಸ್ ತಂಡ ಪ್ರಿಕ್ವಾರ್ಟರ್‌ಫೈನಲ್ ಸುತ್ತು ಪ್ರವೇಶಿಸಲಿದೆ.
ಆದರೆ, ಈಕ್ವೆಡಾರ್ ವಿರುದ್ಧ ಹೆಚ್ಚು ಗೋಲುಗಳಿಂದ ಸೋಲನುಭವಿಸಿದರೆ ಹಾಗೂ ಇನ್ನೊಂದು ಪಂದ್ಯದಲ್ಲಿ ಹೋಂಡುರಾಸ್ ತಂಡದ ವಿರುದ್ಧ ಸ್ವಿಜರ್ಲೆಂಡ್ ಭಾರಿ ಅಂತರದಲ್ಲಿ ಗೆಲವು ದಾಖಲಿಸಿದಾಗ ಮಾತ್ರ ಫ್ರಾನ್ಸ್ ಮುನ್ನಡೆಗೆ ಕುತ್ತು ಬರಲಿದೆ.
ಹಾಗಾಗಿ, ಫ್ರಾನ್ಸ್ ಸೋಲಿನ ಸುಳಿಗೆ ಸಿಲುಕದೇ ಜಯ ಅಥವಾ ಕನಿಷ್ಠ ಡ್ರಾ ಆದರೂ ಸಾಧಿಸಲೇಬೇಕೆಂದು ಪಣತೊಟ್ಟು ಅಖಾಡಕ್ಕಿಳಿಯಲು ಸಿದ್ಧವಾಗಿದೆ.
ಮಾರಕಾನ ಎಸ್ಟಾಡಿಯೊ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದ್ದು, ಫ್ರಾನ್ಸ್ ವಿರುದ್ಧ ಗೆದ್ದರೆ ಈಕ್ವೆಡಾರ್ ತಂಡಕ್ಕೂ ಗೆಲವಿನ ಆಸೆ ಚಿಗುರಲಿದೆ.
ಈ ಮುನ್ನ ಫ್ರಾನ್ಸ್ ಮತ್ತು ಈಕ್ವೆಡಾರ್ ತಂಡಗಳು ಪರಸ್ಪರ ಒಂದು ಬಾರಿ ಮಾತ್ರ ಸೆಣಸಿವೆ. 2008ರಲ್ಲಿ ಗ್ರೆನೊಬಲ್‌ನಲ್ಲಿ ನಡೆದ ಆ ಪಂದ್ಯದಲ್ಲಿ ಫ್ರಾನ್ಸ್ ತಂಡ 2-0 ಗೋಲುಗಳಿಂದ ಈಕ್ವೆಡಾರ್ ವಿರುದ್ಧ ಗೆಲವು ದಾಖಲಿಸಿತ್ತು.ಆದರೆ ವಿಶ್ವಕಪ್‌ನಲ್ಲಿ ಮಾತ್ರ ಫ್ರಾನ್ಸ್ ಆಟಗಾರರು 1978ರಿಂದ ದಕ್ಷಿಣ ಅಮೆರಿಕದ ಎದುರಾಳಿಗಳ ವಿರುದ್ಧ ಸೋಲನುಭವಿಸಿಯೇ ಇಲ್ಲ. ಅಂದಿನಿಂದ ಈವರೆಗೆ ಫ್ರಾನ್ಸ್ ತಂಡ 3 ಪಂದ್ಯಗಳಲ್ಲಿ ಜಯ ಮತ್ತು 3 ಪಂದ್ಯಗಳಲ್ಲಿ ಡ್ರಾ ಫಲಿತಾಂಶ ಪಡೆದಿದ್ದು, ಕಳೆದ ಐದು ಪಂದ್ಯಗಳಲ್ಲಿ ಎದುರಾಳಿಗೆ ಒಂದೂ ಗೋಲು ಬಿಟ್ಟುಕೊಡದಿರುವುದು ಮತ್ತೊಂದು ವಿಶೇಷ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


