ಫಿಫಾ ವಿಶ್ವಕಪ್ 2014

ಕುಸಿದ ವ್ಯಾಪಾರೋದ್ಯಮ

ಕುಸಿದ ವ್ಯಾಪಾರೋದ್ಯಮ
Published On :

ರಿಯೋ ಡಿ ಜನೈರೋ: ಫುಟ್ಬಾಲ್ ಜ್ವರ ಹೆಚ್ಚಿರುವ ರಾಷ್ಟ್ರಗಳಲ್ಲಿ ದೈನಿಂದನ ವ್ಯವಹಾರಗಳ ಮೇಲೆ ವಿಶ್ವಕಪ್ ನಿಧಾನವಾಗಿ ಪರಿಣಾಮ ಬೀರುತ್ತಿದೆ. ಕೆಲ ರಾಷ್ಟ್ರಗಳಲ್ಲಿ ಒಂದು ರೀತಿಯಲ್ಲಿ ಬಂದ್ ಆಚರಿಸಿದಷ್ಟು ಬೀದಿಗಳು ಬಣಗೂಡುತ್ತಿವೆ.
ಚಿಲಿಯಲ್ಲಿ ವಿದ್ಯಾರ್ಥಿಗಳು ಬೇಗನೆ ಮನೆ ಸೇರುತ್ತಿದ್ದಾರೆ. ಬ್ರೆಜಿಲ್‌ನಲ್ಲಿ ಕಚೇರಿಗಳು ಮತ್ತು ಅಂಗಡಿ ಮುಗ್ಗಟ್ಟುಗಳು ಬೇಗನೆ ಕದ ಹಾಕುತ್ತಿವೆ. ಇನ್ನು ಮೆಕ್ಸಿಕೊ ನಗದಲ್ಲಿ ಸಂಚಾರ ವ್ಯತ್ಯಯವೇ ಕಾಣುತ್ತಿಲ್ಲ.
ಲ್ಯಾಟಿನ್ ಅಮೆರಿಕದ ಮೂರು ರಾಷ್ಟ್ರಗಳು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿರುವ ಹಿನ್ನೆಲೆಯಲ್ಲಿ, ಅಲ್ಲಿನ ಜನರು ಫುಟ್ಬಾಲ್ ಜ್ವರದಿಂದ ಬಳಲುತ್ತಿದ್ದಾರೆ. ಹೀಗಾಗಿ ದೈನಂದಿನ ಬಿಸಿನೆಸ್‌ಗೆ ಹೊಡೆತ ಬಿದ್ದಿದೆ.
ಇನ್ನು ಬ್ರೆಜಿಲ್ ದೇಶದ ಅಭಿಮಾನಿಗಳು ಈಗಾಗಲೇ ಸಂಪೂರ್ಣವಾಗಿ ಫುಟ್ಬಾಲ್ ಹಬ್ಬವನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ, ಅಲ್ಲಿಯೂ ದೈನಿಂದ ವ್ಯವಹಾರಗಳ ಮೇಲೆ ಫುಟ್ಬಾಲ್ ಹಬ್ಬ ಪರಿಣಾಮ ಬೀರಿದೆ.
ದೇಶದ ಪಂದ್ಯವಿದ್ದ ದಿನವಂತೂ ಯಾವುದೇ ವ್ಯವಹಾರಗಳು ನಡೆಯುವುದಿಲ್ಲವಂತೆ. ರಿಯೋ ಡಿ ಜನೈರೋದಂತಹ ನಗರಗಳಲ್ಲಿ ಸರ್ಕಾವೇ ಅರ್ಧ ದಿನ ಅಥವಾ ಪೂರ್ಣ ದಿನ ರಜೆಯನ್ನು ಘೋಷಿಸುತ್ತಿದೆಯಂತೆ.
12 ಮಿಲಿಯನ್ ಜನರನ್ನು ಹೊಂದಿರುವ ರಿಯೋ ಡಿ ಜನೈರೋದಲ್ಲಿ ಕಳೆದ ವಾರ ಕೇವಲ ಎರಡು ದಿನ ಮಾತ್ರ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರಂತೆ. ಈ ವಾರವೂ ಅದೇ ರೀತಿಯ ವಾತಾವರಣವಿದೆಯಂತೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.